AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಆಕಾಶ್ ಚೋಪ್ರಾ

Australia vs India: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದೆ. ಬ್ರಿಸ್ಬೇನ್​ನ ಗಾಬ್ಬಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆ ಎಂದು ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಆಕಾಶ್ ಚೋಪ್ರಾ
Team India
ಝಾಹಿರ್ ಯೂಸುಫ್
|

Updated on: Dec 09, 2024 | 8:24 AM

Share

ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋತಿದೆ. ಆದರೆ ಈ ಸೋಲು ಅಂತಿಂಥ ಸೋಲಲ್ಲ, ಬದಲಾಗಿ 10 ವಿಕೆಟ್‌ಗಳ ಹೀನಾಯ ಸೋಲು. ಹೀಗಾಗಿಯೇ ಇದೀಗ ಟೀಮ್ ಇಂಡಿಯಾ ಸೋಲಿನ ಪರಾಮರ್ಶೆ ನಡೆಯುತ್ತಿದೆ. ಅದರಲ್ಲೂ ಭಾರತ ತಂಡದ ಸೋಲಿಗೆ ಕಾರಣಗಳೇನು ಎಂಬ ಚರ್ಚೆಗಳು ಜೋರಾಗಿದೆ. ಈ ಚರ್ಚೆಗಳ ನಡುವೆ ಟೀಮ್ ಇಂಡಿಯಾ ಸೋಲಿಗೆ ಅಸಲಿ ಕಾರಣಗಳೇನು ಎಂಬುದನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬಿಚ್ಚಿಟ್ಟಿದ್ದಾರೆ.

ಭಾರತ ತಂಡ ಸೋತಿದೆ. ಈ ಸೋಲಿಗೆ ಕಾರಣವೇನು? ಎಲ್ಲಿ ಏನು ತಪ್ಪಾಯಿತು? ಎಂದು ನೋಡುವುದಾರೆ…ಉತ್ತರ, ಬ್ಯಾಟಿಂಗ್ ವೈಫಲ್ಯ. ಅದು ಒಂದು ಬಾರಿಯಲ್ಲ. ಟೀಮ್ ಇಂಡಿಯಾ ಎರಡೂ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು ಸೋಲಿಗೆ ಪ್ರಮುಖ ಕಾರಣ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದು ಸರಿಯಾದ ನಿರ್ಧಾರ. ಇದಾಗ್ಯೂ ನೀವು ಮೊದಲ ಇನಿಂಗ್ಸ್​ನಲ್ಲಿ 180 ರನ್ ಗೆ ಆಲೌಟ್ ಆದ್ರಿ. ಕೆಲವೊಮ್ಮೆ ಹಾಗೆ ಆಗುತ್ತದೆ ಎಂದು ಹೇಳಬಹುದು. ಆದರೆ ದ್ವಿತೀಯ ಇನಿಂಗ್ಸ್​ನಲ್ಲೂ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಮಾಡಲಿಲ್ಲ.

ಎರಡನೇ ಇನಿಂಗ್ಸ್ ವೇಳೆ ಪಿಚ್ ಫ್ಲ್ಯಾಟ್ ಆಗಿತ್ತು. ಇದಾಗ್ಯೂ ಟೀಮ್ ಇಂಡಿಯಾ ಬ್ಯಾಟರ್​ಗಳು ದೊಡ್ಡ ಇನಿಂಗ್ಸ್ ಆಡಲು ವಿಫಲರಾದರು. ಅದರಲ್ಲೂ ಯಾವುದೇ ಬ್ಯಾಟ್ಸ್​ಮನ್ 50 ಎಸೆತಗಳನ್ನು ಎದುರಿಸಿಲ್ಲ ಎಂಬುದು ಅಚ್ಚರಿ. ಅಂದರೆ ಇಲ್ಲಿ ಭಾರತೀಯ ಬ್ಯಾಟರ್​ಗಳ ಕಳಪೆ ಪ್ರದರ್ಶನವೇ ಸೋಲಿಗೆ ಮುಖ್ಯ ಕಾರಣ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಅಂದಹಾಗೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 180 ರನ್ ಗಳಿಸಿದರೆ, ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ ನಲ್ಲಿ 337 ರನ್ ಪೇರಿಸಿತು. ಇದರ ಬೆನ್ನಲ್ಲೇ 157 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ 175 ರನ್ ಗಳಿಗೆ ಸರ್ವಪತನ ಕಂಡಿತು.

ಇದನ್ನೂ ಓದಿ: 147 ವರ್ಷಗಳ ಇತಿಹಾಸದಲ್ಲೇ ಅಚ್ಚರಿಯ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

ಅತ್ತ ಮೊದಲ ಇನಿಂಗ್ಸ್ ನಲ್ಲಿನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ನಲ್ಲಿ 19 ರನ್ ಗಳ ಗುರಿ ಪಡೆದ ಆಸ್ಟ್ರೇಲಿಯಾ 3.2 ಓವರ್‌ಗಳಲ್ಲಿ ಟಾರ್ಗೆಟ್ ಚೇಸ್ ಮಾಡಿ 10 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಈ ಸರಣಿಯ ಮೂರನೇ ಪಂದ್ಯವು ಡಿಸೆಂಬರ್ 14 ರಿಂದ ಬ್ರಿಸ್ಬೇನ್​​ನ ಗಬ್ಬಾ ಮೈದಾನದಲ್ಲಿ ಆರಂಭವಾಗಲಿದೆ.