ಕ್ರಿಕೆಟ್ ಲೋಕದಲ್ಲಿ ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಕ್ರಿಕೆಟಿಗರಲ್ಲಿ ಆರ್ಸಿಬಿ (RCB) ಆಪತ್ಭಾಂಧವ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಕೂಡ ಒಬ್ಬರು. ಕ್ರೀಸ್ನಲ್ಲಿ ಇರುವಷ್ಟು ಹೊತ್ತು ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಅಭಿಮಾನಿಗಳು ಹುಚ್ಚೆದ್ದು ಕುಣಿಯುಂತೆ ಮಾಡುತ್ತಿದ್ದ ಎಬಿ ಡಿವಿಲಿಯರ್ಸ್ ಇದೀಗ ಕ್ರಿಕೆಟ್‌ನ ಬಿಗ್ ಬಾಸ್ ಐಸಿಸಿಗೆ (ICC) ಸಲಹೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ಡಿವಿಲಿಯರ್ಸ್ ಸಲಹೆಯನ್ನು ಐಸಿಸಿ ಪುರಸ್ಕರಿಸಿ ಅದನ್ನು ಕ್ರಿಕೆಟ್ಗೆ ಅಳವಡಿಸಿದರೆ, ಕ್ರಿಕೆಟ್ ಲೋಕದಲ್ಲಿ ಸಂಚಲವನ್ನೇ ಸೃಷ್ಟಿಸಲಿದೆ. ಮೈದಾನದಲ್ಲಿ ಇರುವಷ್ಟು ಹೊತ್ತು ಬಿಗ್ ಬಿಗ್ ಸಿಕ್ಸರ್ ಬಾರಿಸಿ ಚೆಂಡನ್ನು ಮೈದಾನದಿಂದ ಹೊರಕ್ಕೆ ಕಳುಹಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಮಿ. 360, ಇದೀಗ 100 ಮೀಟರ್ಗೂ ಅಧಿಕ ಉದ್ದದ ಸಿಕ್ಸರ್ ಬಾರಿಸಿದರೆ, ಅದಕ್ಕೆ 6 ರನ್ ಬದಲು 8 ರಿಂದ 9 ರನ್‌ಗಳನ್ನು ನೀಡಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
ವಾಸ್ತವವಾಗಿ ನಿನ್ನೆ ಅಂದರೆ ಜನವರಿ 21 ರಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಈ ಬಗ್ಗೆ ಸಲಹೆ ನೀಡಿದ್ದರು. ಕೇವಿನ್ ಪ್ರಕಾರ 100 ಮೀಟರ್‌ಗಿಂತ ಹೆಚ್ಚು ದೂರ ಹೊಡೆಯುವ ಸಿಕ್ಸರ್‌ಗಳಿಗೆ 6 ರನ್‌ಗಳ ಬದಲಿಗೆ 12 ರನ್‌ಗಳನ್ನು ನೀಡಬೇಕು ಎಂದಿದ್ದರು. ಇದೀಗ ಕೆವಿನ್ ಪೀಟರ್ಸನ್ ಅವರ ಈ ಪೋಸ್ಟ್ ಬಗ್ಗೆ ಎಬಿ ಡಿವಿಲಿಯರ್ಸ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದು, 12 ರನ್‌ಗಳು ಕೊಂಚ ಹೆಚ್ಚಾಗಬಹುದು. 6 ರನ್ ಬದಲಿಗೆ 12 ರನ್ ನೀಡುವುದು ಸರಿಯಲ್ಲ. 100 ಮೀಟರ್‌ಗಿಂತ ಹೆಚ್ಚು ದೂರ ಸಿಕ್ಸ್ ಬಾರಿಸಿದರೆ 8 ರಿಂದ 9 ರನ್ ನೀಡಬಹುದು ಎಂದು ಡಿವಿಲಿಯರ್ಸ್ ಸಲಹೆ ನೀಡಿದ್ದಾರೆ.
‘ಅದೊಂದು ಅಚಾತುರ್ಯದಿಂದಾಗಿ ನಾನು ಕ್ರಿಕೆಟ್ಗೆ ವಿದಾಯ ಹೇಳಿಬೇಕಾಯ್ತು’; ಎಬಿ ಡಿವಿಲಿಯರ್ಸ್
ವಾಸ್ತವವಾಗಿ, ಮಾಜಿ ಲೆಜೆಂಡರಿ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು ಅದರಲ್ಲಿ, ‘ಎರಡು ವರ್ಷಗಳ ಹಿಂದೆ ನಾನು ಕಾಮೆಂಟರಿ ಮಾಡುವ ಸಮಯದಲ್ಲಿ ಒಬ್ಬ ಬ್ಯಾಟ್ಸ್‌ಮನ್ 100 ಮೀಟರ್ ಅಥವಾ ಅದಕ್ಕಿಂತಲೂ ಉದ್ದದ ಸಿಕ್ಸರ್ ಬಾರಿಸಿದರೆ, ಅವನಿಗೆ 6 ರನ್ ಬದಲು 12 ರನ್ ನೀಡಬೇಕು ಎಂದು ನಾನು ಹೇಳಿದ್ದೆ. ಈ ನಿಯಮ ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಂಡಿದ್ದರು.
Great idea. 2 things from my side:
1. 12 is too big, I think 8 or 9(upside down 6) is good. Can’t jump from 4 to 6 to 12.
2. I’ve been saying for a while we need to get technology to be more accurate with the distance(like in golf). Absolutely can’t have some random guy in a…
— AB de Villiers (@ABdeVilliers17) January 21, 2024
ಕೆವಿನ್ ಪೀಟರ್ಸನ್ ಇಂತಹ ಬೇಡಿಕೆ ಇಟ್ಟ ಮೊದಲ ವ್ಯಕ್ತಿ ಅಲ್ಲ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇದೇ ಬೇಡಿಕೆ ಇಟ್ಟಿದ್ದರು. ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ, ಒಬ್ಬ ಬ್ಯಾಟ್ಸ್‌ಮನ್ 80 ಮೀಟರ್ ಅಥವಾ 100 ಮೀಟರ್ ಮತ್ತು ಅದಕ್ಕಿಂತ ಹೆಚ್ಚು ಉದ್ದದ ಸಿಕ್ಸರ್‌ಗಳನ್ನು ಹೊಡೆದರೆ ಅವನಿಗೆ 8, 10 ಅಥವಾ 12 ರನ್ ನೀಡಬೇಕು ಎಂದಿದ್ದರು.
ಸದ್ಯ ಐಸಿಸಿ ನಿಯಮದ ಪ್ರಕಾರ ಒಬ್ಬ ಬ್ಯಾಟ್ಸ್‌ಮನ್ ಎಷ್ಟೇ ಉದ್ದದ ಸಿಕ್ಸರ್ ಬಾರಿಸಿದರೂ ಸಿಗುವುದು 6 ರನ್ ಮಾತ್ರ. ವಿಶ್ವದ ಅತ್ಯಂತ ದುಬಾರಿ ಲೀಗ್ ಐಪಿಎಲ್‌ನಲ್ಲಿ 100 ಮೀಟರ್ ಉದ್ದದ ಸಿಕ್ಸರ್‌ಗಳನ್ನು ಬಹಳ ಕಷ್ಟದಿಂದ ಬಾರಿಸಲಾಗುತ್ತದೆ. ಮಾರ್ಚ್‌ನಲ್ಲಿ ಐಪಿಎಲ್ ಕೂಡ ನಡೆಯಲಿದ್ದು, ಇಂತಹ ನಿಯಮ ರೂಪಿಸಿದರೆ ಕ್ರಿಕೆಟ್‌ನ ರೋಚಕತೆ ಮತ್ತಷ್ಟು ಹೆಚ್ಚಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ