AB de Villiers: ಟೀಂ ಇಂಡಿಯಾಗೆ ಎಬಿ ಡಿವಿಲಿಯರ್ಸ್ ಮುಖ್ಯ ಕೋಚ್? ಆಪತ್ಭಾಂಧವನ ಅಭಿಪ್ರಾಯ ಏನು?

|

Updated on: May 24, 2024 | 6:33 PM

Team India's Head Coach: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಈ ಮಧ್ಯೆ, ದಕ್ಷಿಣ ಆಫ್ರಿಕಾದ ಮಾಜಿ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಸ್ವತಃ ಮುಖ್ಯ ಕೋಚ್ ಆಗಲು ಸ್ವತಃ ಆಸಕ್ತಿ ತೊರಿದ್ದಾರೆ.

AB de Villiers: ಟೀಂ ಇಂಡಿಯಾಗೆ ಎಬಿ ಡಿವಿಲಿಯರ್ಸ್ ಮುಖ್ಯ ಕೋಚ್? ಆಪತ್ಭಾಂಧವನ ಅಭಿಪ್ರಾಯ ಏನು?
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್​
Follow us on

ಮುಂಬರುವ ಟಿ20 ವಿಶ್ವಕಪ್‌ (T20 World Cup 2024) ಮುಕ್ತಾಯದ ಜೊತೆಗೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಅಧಿಕಾರಾವಧಿಯೂ ಕೊನೆಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಈಗಾಗಲೇ ಭಾರತ ತಂಡಕ್ಕೆ ಮುಂದಿನ ಮುಖ್ಯ ಕೋಚ್ ಹುಡುಕಾಟದಲ್ಲಿ ನಿರತವಾಗಿದೆ. ಟೀಂ ಇಂಡಿಯಾದ ಮುಖ್ಯ ಕೋಚ್ (Team India’s Head Coach) ಆಗಲು ಹಲವು ಅನುಭವಿ ಆಟಗಾರರಿಗೆ ಆಫರ್ ಬಂದಿದ್ದು, ಹಲವು ಆಟಗಾರರು ಅದಕ್ಕೆ ನಿರಾಕರಿಸಿದ್ದಾರೆ. ಮೇ 27ರವರೆಗೆ ಮುಖ್ಯ ಕೋಚ್ ಆಗಲು ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ (BCCI) ಪ್ರಕಟಿಸಿದೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಆರ್​ಸಿಬಿಯ ಆಪತ್ಭಾಂಧವ ಎಂದೇ ಖ್ಯಾತರಾಗಿದ್ದ ಎಬಿ ಡಿವಿಲಿಯರ್ಸ್ (AB de Villiers), ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ವದಂತಿ ಎದ್ದಿದೆ.

ಅನೇಕರ ನಿರಾಸಕ್ತಿ

ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರಿಗೆ ಮುಖ್ಯ ಕೋಚ್ ಹುದ್ದೆಗೆ ಆಫರ್ ನೀಡಲಾಗಿತ್ತು. ಆದರೆ ಪಾಂಟಿಂಗ್ ಈ ಮನವಿಯನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೇ ರಾಹುಲ್ ದ್ರಾವಿಡ್ ಕೂಡ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ನಿರಾಕರಿಸಿದ್ದರು. ಈ ಮಧ್ಯೆ, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಮುಂದಿನ ಮುಖ್ಯ ಕೋಚ್ ಆಗಬಹುದು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಆದರೆ ಈ ಮಧ್ಯೆ, ದಕ್ಷಿಣ ಆಫ್ರಿಕಾದ ಮಾಜಿ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಸ್ವತಃ ಮುಖ್ಯ ಕೋಚ್ ಆಗಲು ಸ್ವತಃ ಆಸಕ್ತಿ ತೊರಿದ್ದಾರೆ.

ಮುಖ್ಯ ಕೋಚ್ ಬಗ್ಗೆ ಎಬಿಡಿ ಹೇಳಿದ್ದೇನು?

ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಎಬಿ ಡಿವಿಲಿಯರ್ಸ್ ಮುಖ್ಯ ಕೋಚ್ ಹುದ್ದೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ವೇಳೆ ಭವಿಷ್ಯದಲ್ಲಿ ಭಾರತ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿದಾಗ. ಈ ಪ್ರಶ್ನೆಗೆ ಉತ್ತರಿಸಿದ ಡಿವಿಲಿಯರ್ಸ್, ‘ನಾನು ಈ ಜವಾಬ್ದಾರಿಯನ್ನು ನಿಭಾಯಿಸುತ್ತೇನೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ನಾನು ಈ ಜವಾಬ್ದಾರಿಯನ್ನು ಹೆಚ್ಚು ಆನಂದಿಸುತ್ತೇನೆ. ಹೊಸ ಜವಾಬ್ದಾರಿಗಳು ಹೊಸ ವಿಷಯಗಳನ್ನು ಕಲಿಯಲು ಇದು ಅವಕಾಶವನ್ನು ಒದಗಿಸುತ್ತದೆ.

ಇತ್ತೀಚಿನ ದಿನಗಳಲ್ಲಿ, ನಾನು ಬಹಳಷ್ಟು ಕಲಿತಿದ್ದೇನೆ. ಯಾವುದಕ್ಕೂ ಇಲ್ಲ ಎಂದು ಹೇಳಬಾರದು, ಏಕೆಂದರೆ ಅಲ್ಲಿಂದ ಏನಾದರೂ ಹೊಸತನ್ನು ಕಲಿಯಬಹುದು. ಆಯ್ದ ಆಟಗಾರರು ಮತ್ತು ತಂಡಗಳೊಂದಿಗೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ’ ಎಂದು ಡಿವಿಲಿಯರ್ಸ್​ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ