T20 World Cup 2022: ಮಳೆಯಿಂದಾಗಿ ಇಡೀ ದಿನದಾಟ ರದ್ದು; ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?

T20 World Cup 2022: ಶುಕ್ರವಾರ ನಡೆಯಬೇಕಾಗಿದ್ದ ಎರಡೂ ಪಂದ್ಯಗಳು ಪಲಿತಾಂಶವಿಲ್ಲದೆ ರದ್ದಾಗಿವೆ. ಆದ್ದರಿಂದ ನ್ಯೂಜಿಲೆಂಡ್, ಇಂಗ್ಲೆಂಡ್, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ಈಗ ತಲಾ 3 ಅಂಕಗಳನ್ನು ಹೊಂದಿವೆ.

T20 World Cup 2022: ಮಳೆಯಿಂದಾಗಿ ಇಡೀ ದಿನದಾಟ ರದ್ದು; ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?
AUS vs ENG
Updated By: ಪೃಥ್ವಿಶಂಕರ

Updated on: Oct 28, 2022 | 5:01 PM

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ಗೆ (T20 World Cup) ವರುಣ ರಾಯ ನಿರಂತರವಾಗಿ ಕಾಟ ಕೊಡುತ್ತಿದ್ದಾನೆ. ಅರ್ಹತಾ ಸುತ್ತಿನ ಪಂದ್ಯಗಳು ಸುಗಮವಾಗಿ ನಡೆದಿದ್ದು ಬಿಟ್ಟರೆ, ಸೂಪರ್ 12 ಸುತ್ತು ಆರಂಭವಾದಾಗಿನಿಂದಲೂ ಪ್ರತಿ ಪಂದ್ಯಗಳಿಗೂ ಮಳೆ (Rain) ಬೆದರಿಕೆ ಎದುರಾಗಿದೆ. ಮಳೆಯಿಂದಾಗಿ ಇಂದು ಮೆಲ್ಬೋರ್ನ್‌ನಲ್ಲಿ ನಡೆಯಬೇಕಿದ್ದ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಯಿತು. ಹೀಗಾಗಿ ಎಲ್ಲಾ ನಾಲ್ಕು ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ಇಂದು ಗ್ರೂಪ್ 1 ರಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಮಹತ್ವದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಎಸೆಯುವುದಿರಲಿ, ಟಾಸ್ ಕೂಡ ಹಾಕಲಾಗಲಿಲ್ಲ.

ಇದುವರೆಗೆ 5 ಪಂದ್ಯಗಳ ಮೇಲೆ ವರುಣನ ಅವಕೃಪೆ ಎದುರಾಗಿದೆ. ಈ 5 ಪಂದ್ಯಗಳಲ್ಲಿ ಮಳೆಯಿಂದಾಗಿ 3 ಪಂದ್ಯಗಳಲ್ಲಿ ಒಂದು ಎಸೆತವನ್ನು ಎಸೆಯಲಾಗದೆ ಕೊನೆಗೊಳಿಸಬೇಕಾಯಿತು. ಇನ್ನುಳಿದಂತೆ ಒಂದು ಪಂದ್ಯಗಳಲ್ಲಿ ಗೆಲುವಿನ ಹೊಸ್ತಿಲಿನಲ್ಲಿದ್ದ ಇಂಗ್ಲೆಂಡ್ ತಂಡ ಐರ್ಲೆಂಡ್ ತಂಡದೆದುರು ಡಕ್ವರ್ತ್-ಲೂಯಿಸ್ ನಿಯಮದ ಆಧಾರದ ಮೇಲೆ 5 ರನ್​ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಹಾಗೆಯೇ ದಕ್ಷಿಣ ಆಫ್ರಿಕಾ ಕೂಡ ಜಿಂಬಾಬ್ವೆ ಎದುರು ಗೆಲ್ಲುವುದು ಖಚಿತವಾಗಿತ್ತು. ಆದರೆ ಇದಕ್ಕೆ ಅಡ್ಡಿಪಡಿಸಿದ ಮಳೆ ಪಂದ್ಯವನ್ನು ರದ್ದುಗೊಳಿಸುವಂತೆ ಮಾಡಿತು.

ಇದನ್ನೂ ಓದಿ: ಪಾಕಿಸ್ತಾನ ಈ ವಾರ, ಟೀಂ ಇಂಡಿಯಾ ಮುಂದಿನ ವಾರ..! ಟಿ20 ವಿಶ್ವಕಪ್ ಭವಿಷ್ಯ ನುಡಿದ ಶೋಯೆಬ್ ಅಖ್ತರ್

ಟಿ20 ವಿಶ್ವಕಪ್ ಮೇಲೆ ಮಳೆಯ ಅವಕೃಪೆ ಎದುರಾಗಿರುವುದು ಚಾಂಪಿಯನ್ ತಂಡಗಳ ನಿದ್ದೆಗೆಡಿಸಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಡಕ್ವರ್ತ್-ಲೂಯಿಸ್ ನಿಯಮದ ಆಧಾರದ ಮೇಲೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗುತ್ತದೆ. ಇದರಿಂದ ಸೇಮಿಸ್​ಗೇರಲು ಎಲ್ಲಾ ತಂಡಗಳು ಆಡಲು ಅವಕಾಶ ಸಿಗುವ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುತ್ತವೆ. ಅಲ್ಲದೆ ಈ ಗೆಲುವಿನಲ್ಲೂ ಎದುರಾಳಿ ತಂಡವನ್ನು ಭಾರೀ ಅಂತರದಿಂದ ಸೋಲಿಸುವುದು ಕೂಡ ಮುಖ್ಯವಾಗಿರುತ್ತದೆ.

ಪಾಯಿಂಟ್ ಪಟ್ಟಿ ಸ್ಥಿತಿಗತಿ ಹೀಗಿದೆ

ಶುಕ್ರವಾರ ನಡೆಯಬೇಕಾಗಿದ್ದ ಎರಡೂ ಪಂದ್ಯಗಳು ಪಲಿತಾಂಶವಿಲ್ಲದೆ ರದ್ದಾಗಿವೆ. ಆದ್ದರಿಂದ ನ್ಯೂಜಿಲೆಂಡ್, ಇಂಗ್ಲೆಂಡ್, ಐರ್ಲೆಂಡ್ ಮತ್ತು ಆಸ್ಟ್ರೇಲಿಯಾ ಈಗ ತಲಾ 3 ಅಂಕಗಳನ್ನು ಹೊಂದಿವೆ. ಆದರೆ ನೆಟ್ ರನ್ ರೇಟ್​ ಹೆಚ್ಚಿರುವ ಕಾರಣ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲಿದೆ. -1.555 ರನ್ ರೇಟ್ ಹೊಂದಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ನಾಲ್ಕನೇ ಸ್ಥಾನದಲ್ಲಿದೆ.

ಮೊದಲನೇ ಗುಂಪು

ತಂಡ

ಅಂಕ
ನ್ಯೂಜಿಲೆಂಡ್

3

ಇಂಗ್ಲೆಂಡ್

3
ಐರ್ಲೆಂಡ್

3

ಆಸ್ಟ್ರೇಲಿಯಾ

3
ಶ್ರೀಲಂಕಾ

2

ಅಫ್ಘಾನಿಸ್ತಾನ

2

 

ಎರಡನೇ ಗುಂಪು

ತಂಡ

ಅಂಕ
ಭಾರತ

4

ದಕ್ಷಿಣ ಆಫ್ರಿಕ

3
ಜಿಂಬಾಬ್ವೆ

3

ಬಾಂಗ್ಲಾದೇಶ

2
ಪಾಕಿಸ್ತಾನ

0

ನೆದರ್ಲ್ಯಾಂಡ್ಸ್

0

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Fri, 28 October 22