ಅ-19 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ ಗೊತ್ತಾ?

|

Updated on: Nov 09, 2023 | 9:32 AM

U-19 Asia Cup 2023: ಈ ಬಾರಿಯ ಅಂಡರ್-19 ಏಷ್ಯಾಕಪ್ ಪಂದ್ಯಾವಳಿಯು ಡಿಸೆಂಬರ್ 8 ರಿಂದ ಡಿಸೆಂಬರ್ 15 ರವರೆಗೆ ನಡೆಯುತ್ತಿದ್ದು, ಈ ಮೆಗಾ ಈವೆಂಟ್​ಗೆ ದುಬೈ ಆತಿಥ್ಯವಹಿಸುತ್ತಿದೆ. ವೇಳಾಪಟ್ಟಿಯ ಪ್ರಕಾರ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.

ಅ-19 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ ಗೊತ್ತಾ?
ಅ-19 ಏಷ್ಯಾಕಪ್ ವೇಳಾಪಟ್ಟಿ
Follow us on

ಈ ಬಾರಿಯ ಅಂಡರ್-19 ಏಷ್ಯಾಕಪ್ (U19 Asia Cup 2023) ಪಂದ್ಯಾವಳಿಯು ಡಿಸೆಂಬರ್ 8 ರಿಂದ ಡಿಸೆಂಬರ್ 15 ರವರೆಗೆ ನಡೆಯುತ್ತಿದ್ದು, ಈ ಮೆಗಾ ಈವೆಂಟ್​ಗೆ ದುಬೈ (Dubai) ಆತಿಥ್ಯವಹಿಸುತ್ತಿದೆ. ವೇಳಾಪಟ್ಟಿಯ ಪ್ರಕಾರ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಇದರಲ್ಲಿ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ಕೂಡ ಸೇರಿದೆ. ಬುಧವಾರ (ನವೆಂಬರ್ 8) ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ, 19 ವರ್ಷದೊಳಗಿನವರ ಏಷ್ಯಾಕಪ್ ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಡಿಸೆಂಬರ್ 17 ರಂದು ನಡೆಯಲ್ಲಿದೆ. ಈ ಟೂರ್ನಿಯ ಪಂದ್ಯಗಳು ಐಸಿಸಿ ಅಕಾಡೆಮಿ ಓವಲ್ ಸೇರಿದಂತೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ನಡೆಯಲಿವೆ.

ಭಾಗವಹಿಸುವ ತಂಡಗಳು

  • ಭಾರತ
  • ಪಾಕಿಸ್ತಾನ
  • ಶ್ರೀಲಂಕಾ
  • ಜಪಾನ್
  • ಯುಎಇ
  • ಅಫ್ಘಾನಿಸ್ತಾನ
  • ಬಾಂಗ್ಲಾದೇಶ
  • ನೇಪಾಳ

ಭಾರತ ಹಾಲಿ ಚಾಂಪಿಯನ್

ಮೇಲೆ ತಿಳಿಸಿದಂತೆ ಪುರುಷರ ಅಂಡರ್ 19 ಏಷ್ಯಾಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಈ 8 ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತವು ನೇಪಾಳ, ಅಫ್ಘಾನಿಸ್ತಾನ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಮತ್ತೊಂದೆಡೆ, ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್ ಮತ್ತು ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಸ್ಥಾನ ಪಡೆದಿವೆ.

ಆರಂಭಿಕ ಪಂದ್ಯದಲ್ಲಿ ಭಾರತ- ಅಫ್ಘಾನ್ ಫೈಟ್

ಡಿಸೆಂಬರ್ 8 ರಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಈ ಮೆಗಾ ಟೂರ್ನಮೆಂಟ್ ಆರಂಭವಾಗಲಿದೆ. ಈ ಏಷ್ಯನ್ ದೈತ್ಯರ ನಡುವಿನ ಕದನದಲ್ಲಿ, ಎಲ್ಲಾ ಲೀಗ್ ಪಂದ್ಯಗಳು ಐಸಿಸಿ ಅಕಾಡೆಮಿಯಲ್ಲಿ ನಡೆಯಲಿವೆ. ಸೆಮಿಫೈನಲ್-1 ಮತ್ತು ಫೈನಲ್ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಟೂರ್ನಿಯಲ್ಲಿ ಡಿಸೆಂಬರ್ 10ರಂದು ಟೀಂ ಇಂಡಿಯಾ ಬಹುಕಾಲದ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಏತನ್ಮಧ್ಯೆ, ಭಾರತ ಈವೆಂಟ್‌ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕೆ ಇಳಿಯಲಿದೆ. ಅಂತಿಮವಾಗಿ, ಭಾರತವು 2021 ರಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಏಷ್ಯಾಕಪ್ ಅನ್ನು ಗೆದ್ದುಕೊಂಡಿತು.

ಅ19 ಏಷ್ಯಾಕಪ್ ವೇಳಾಪಟ್ಟಿ

  • ಡಿಸೆಂಬರ್ 8 – ಭಾರತ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 8 – ಪಾಕಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2
  • ಡಿಸೆಂಬರ್ 9 – ಬಾಂಗ್ಲಾದೇಶ vs ಯುಎಇ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 9 – ಶ್ರೀಲಂಕಾ vs ಜಪಾನ್ – ICC ಅಕಾಡೆಮಿ ಓವಲ್ 2
  • ಡಿಸೆಂಬರ್ 10 – ಭಾರತ vs ಪಾಕಿಸ್ತಾನ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 10 – ಅಫ್ಘಾನಿಸ್ತಾನ vs ನೇಪಾಳ – ICC ಅಕಾಡೆಮಿ ಓವಲ್ 2
  • ಡಿಸೆಂಬರ್ 11 – ಶ್ರೀಲಂಕಾ vs ಯುಎಇ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 11 – ಬಾಂಗ್ಲಾದೇಶ vs ಜಪಾನ್ – ICC ಅಕಾಡೆಮಿ ಓವಲ್ 2
  • ಡಿಸೆಂಬರ್ 12 – ಪಾಕಿಸ್ತಾನ vs ಅಫ್ಘಾನಿಸ್ತಾನ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 12 – ಭಾರತ vs ನೇಪಾಳ – ICC ಅಕಾಡೆಮಿ ಓವಲ್ 2
  • ಡಿಸೆಂಬರ್ 13 – ಬಾಂಗ್ಲಾದೇಶ vs ಶ್ರೀಲಂಕಾ – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 13 – ಯುಎಇ vs ಜಪಾನ್ – ಐಸಿಸಿ ಅಕಾಡೆಮಿ ಓವಲ್ 2
  • ಡಿಸೆಂಬರ್ 15 – ಸೆಮಿಫೈನಲ್ 1 – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ
  • ಡಿಸೆಂಬರ್ 15 – ಸೆಮಿ-ಫೈನಲ್ 2 – ICC ಅಕಾಡೆಮಿ ಓವಲ್ 1
  • ಡಿಸೆಂಬರ್ 17 – ಫೈನಲ್ – ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ