- Kannada News Photo gallery Cricket photos Dasun Shanaka could Step down as sri lanka Captain Before world cup 2023
ಏಷ್ಯಾಕಪ್ ಫೈನಲ್‌ನಲ್ಲಿ ಹೀನಾಯ ಸೋಲು; ವಿಶ್ವಕಪ್ಗೂ ಮುನ್ನ ದಸುನ್ ಶನಕ ನಾಯಕತ್ವಕ್ಕೆ ಕುತ್ತು..!
Dasun Shanaka: ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದೆದುರು ಹೀನಾಯವಾಗಿ ಸೋತಿದ್ದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹೌದು, ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಸುನ್ ಶನಕ ತಮ್ಮ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ.
Updated on: Sep 20, 2023 | 11:21 AM

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದೆದುರು ಹೀನಾಯವಾಗಿ ಸೋತಿದ್ದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಹೌದು, ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಸುನ್ ಶನಕ ತಮ್ಮ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ.

ವರದಿಗಳ ಪ್ರಕಾರ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಬಗ್ಗೆ ಸ್ವಲ್ಪ ಸಮಯದ ನಂತರ ಸಭೆ ನಡೆಸಲಿದ್ದು, ಇದರಲ್ಲಿ ದಸುನ್ ಶನಕ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ಅನುಮೋದನೆ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಹೀನಾಯವಾಗಿ ಸೋತ ನಂತರ ತಂಡದ ನಾಯಕ ಶನಕ ಅವರನ್ನು ಬಹಳಷ್ಟು ಟೀಕಿಸಲಾಗುತ್ತಿದೆ. ಮೋಡ ಕವಿದ ವಾತಾವರಣವಿದ್ದಾಗ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಅವರ ನಿರ್ಧಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹೀಗಾಗಿ ಅವರ ನಾಯಕತ್ವ ಸ್ಥಾನ ಅಪಾಯದಲ್ಲಿದ್ದು, ಇದೇ ಕಾರಣಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಹೊರಟಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಶನಕ ಬದಲಿಗೆ ಕುಸಲ್ ಮೆಂಡಿಸ್ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರನ್ನಾಗಿ ಮಾಡಬಹುದು ಎಂಬ ಸುದ್ದಿ ಇದೆ.

ಇನ್ನು ನಾಯಕತ್ವ ಕಳೆದುಕೊಳ್ಳುವ ಆತಂಕದಲ್ಲಿರುವ ಶನಕ, ನಾಯಕನಾಗಿ ಶ್ರೀಲಂಕಾ ಪರ 37 ಪಂದ್ಯಗಳನ್ನು ಆಡಿದ್ದು, 23ರಲ್ಲಿ ಗೆಲುವು ಸಾಧಿಸಿದ್ದಾರೆ. 14 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಅಂದರೆ ಅವರ ಗೆಲುವಿನ ಶೇಕಡಾವಾರು ಶೇಕಡಾ 60.5 ಆಗಿದೆ.

ನಾಯಕನಾಗಿ ಅವರ ಯಶಸ್ಸಿನ ಪಟ್ಟಿಯನ್ನು ನೀವು ನೋಡಿದರೆ, ಅವರು 8 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾವನ್ನು ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ 12 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತಂಡ ಗೆಲುವು ಸಾಧಿಸಿತ್ತು. ಬಳಿಕ 2022 ರ ಏಷ್ಯಾಕಪ್ ಅನ್ನು ಅವರ ನಾಯಕತ್ವದಲ್ಲೇ ಶ್ರೀಲಂಕಾ ಗೆದ್ದುಕೊಂಡಿತು. ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯನ್ನು ಗೆದ್ದು, ಮತ್ತೊಮ್ಮೆ 2023 ರಲ್ಲಿ ಏಷ್ಯಾಕಪ್‌ನ ಫೈನಲ್ ತಲುಪಿತ್ತು.

ಆದರೆ ಶನಕ ಅವರ ಇತ್ತೀಚಿನ ಫಾರ್ಮ್ ಉತ್ತಮವಾಗಿಲ್ಲ ಎಂಬುದು ಸ್ವಲ್ಪ ಮಟ್ಟಿಗೆ ಸಮರ್ಥನೆಯಾಗಿದೆ. ಆದರೆ, ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧದ ಏಕೈಕ ಸೋಲಿನಿಂದಾಗಿ ಅವರ ನಾಯಕತ್ವವನ್ನು ಪ್ರಶ್ನಿಸುವುದು ಸರಿ ಅಲ್ಲ. ಆದರೆ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಧಾರಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಕೆ ಮುಂದಾಗಿದೆ ಎಂಬುದು ಅರ್ಥವಾಗುತ್ತಿಲ್ಲ.

ಎರಡನೆಯದಾಗಿ, ಕುಸಾಲ್ ಮೆಂಡಿಸ್ ಅವರನ್ನು ನಾಯಕನನ್ನಾಗಿ ಮಾಡಿದರೆ, ಅವರು ದಸುನ್ ಶನಕ ಅವರಂತೆ ತಮ್ಮ ತಂಡ ಮತ್ತು ಸಹ ಆಟಗಾರರೊಂದಿಗೆ ಸ್ನೇಹಪರರಾಗುತ್ತಾರೆಯೇ ಅಥವಾ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಾರೆಯೇ ಎಂಬುದು ಈಗ ಪ್ರಶ್ನೆಯಾಗಿದೆ.



















