U19 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಮೊದಲ ಸುತ್ತಿನಲ್ಲೇ ಭಾರತ vs ಪಾಕ್ ಮುಖಾಮುಖಿ

ACC U19 Men's Asia Cup 2024: ಈ ಬಾರಿಯ ಅಂಡರ್-19 ಏಷ್ಯಾಕಪ್ ಟೂರ್ನಿಯು 50 ಓವರ್​ಗಳ ಸ್ವರೂಪದಲ್ಲಿ ನಡೆಯಲಿದೆ. ಅಲ್ಲದೆ ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ಟೀಮ್​ಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್​ನಲ್ಲಿನ ತಂಡಗಳ ನಡುವೆ ಪಂದ್ಯಾಟಗಳು ನಡೆಯಲಿವೆ.

U19 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಮೊದಲ ಸುತ್ತಿನಲ್ಲೇ ಭಾರತ vs ಪಾಕ್ ಮುಖಾಮುಖಿ
Asia Cup

Updated on: Nov 09, 2024 | 8:58 AM

ಯುಎಇ ನಲ್ಲಿ ನಡೆಯಲಿರುವ ಅಂಡರ್ 19 ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ಟೂರ್ನಿಯು ನವೆಂಬರ್ 29 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯ ಡಿಸೆಂಬರ್ 8 ರಂದು ನಡೆಯಲಿದೆ. ಇನ್ನು ಈ ಪಂದ್ಯಾವಳಿಯಲ್ಲಿ ಈ ಬಾರಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿದೆ. ಅಂದರೆ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿದೆ.

ಇನ್ನು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಸೆಣಸಲಿದೆ. ಹಾಗೆಯೇ ಟೀಮ್ ಇಂಡಿಯಾ ನವೆಂಬರ್ 30 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.

ಅಂಡರ್​-19 ಏಷ್ಯಾಕಪ್ ಟೂರ್ನಿ ತಂಡಗಳ ಗ್ರೂಪ್:

  • ಗುಂಪು A:
  • ಭಾರತ
  • ಪಾಕಿಸ್ತಾನ್
  • ಯುಎಇ
  • ಜಪಾನ್

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಯ್ಕೆ

  • ಗುಂಪು B:
  • ನೇಪಾಳ
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಅಫ್ಘಾನಿಸ್ತಾನ್

U19 ಏಷ್ಯಾಕಪ್ 2024 ವೇಳಾಪಟ್ಟಿ:

ದಿನಾಂಕ ತಂಡಗಳು ಸ್ಥಳ
ಶುಕ್ರವಾರ, ನವೆಂಬರ್ 29 ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ ದುಬೈ
ಶುಕ್ರವಾರ, ನವೆಂಬರ್ 29 ಶ್ರೀಲಂಕಾ vs ನೇಪಾಳ ಶಾರ್ಜಾ
ಶನಿವಾರ, ನವೆಂಬರ್ 30 ಭಾರತ vs ಪಾಕಿಸ್ತಾನ್ ದುಬೈ
ಶನಿವಾರ, ನವೆಂಬರ್ 30 ಯುಎಇ vs ಜಪಾನ್ ಶಾರ್ಜಾ
ಭಾನುವಾರ, ಡಿಸೆಂಬರ್ 1 ಬಾಂಗ್ಲಾದೇಶ್ vs ನೇಪಾಳ ದುಬೈ
ಭಾನುವಾರ, ಡಿಸೆಂಬರ್ 1 ಶ್ರೀಲಂಕಾ vs ಅಫ್ಘಾನಿಸ್ತಾನ್ ಶಾರ್ಜಾ
ಸೋಮವಾರ, ಡಿಸೆಂಬರ್ 2 ಪಾಕಿಸ್ತಾನ್ vs ಯುಎಇ ದುಬೈ
ಸೋಮವಾರ, ಡಿಸೆಂಬರ್ 2 ಭಾರತ vs ಜಪಾನ್ ಶಾರ್ಜಾ
ಮಂಗಳವಾರ, ಡಿಸೆಂಬರ್ 3 ಬಾಂಗ್ಲಾದೇಶ್ vs ಶ್ರೀಲಂಕಾ ದುಬೈ
ಮಂಗಳವಾರ, ಡಿಸೆಂಬರ್ 3 ಅಫ್ಘಾನಿಸ್ತಾನ್ vs ನೇಪಾಳ ಶಾರ್ಜಾ
ಬುಧವಾರ, ಡಿಸೆಂಬರ್ 4 ಪಾಕಿಸ್ತಾನ್ vs ಜಪಾನ್ ದುಬೈ
ಬುಧವಾರ, ಡಿಸೆಂಬರ್ 4 ಭಾರತ vs ಯುಎಇ ಶಾರ್ಜಾ
ಶುಕ್ರವಾರ, ಡಿಸೆಂಬರ್ 6 ಸೆಮಿಫೈನಲ್ 1 ದುಬೈ
ಶುಕ್ರವಾರ, ಡಿಸೆಂಬರ್ 6 ಸೆಮಿಫೈನಲ್ 2 ಶಾರ್ಜಾ
ಭಾನುವಾರ, ಡಿಸೆಂಬರ್ 8 ಫೈನಲ್ ದುಬೈ