AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಲಾಸೆನ್ ಕ್ಲಾಸ್ ದಾಖಲೆ: ಸಿಕ್ಸರ್ ಕಿಂಗ್​​ಗಳ ಪಟ್ಟಿಗೆ ಹೆನ್ರಿಕ್ ಎಂಟ್ರಿ

South Africa vs India: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 4 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 202 ರನ್​ಗಳಿಸಿದರೆ, ಸೌತ್ ಆಫ್ರಿಕಾ ತಂಡವು ಕೇವಲ 141 ರನ್​ಗಳಿಗೆ ಆಲೌಟ್ ಆಗಿ 61 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಝಾಹಿರ್ ಯೂಸುಫ್
|

Updated on: Nov 09, 2024 | 9:30 AM

Share
ಡರ್ಬನ್​ನ ಕಿಂಗ್ಸ್​ಮೇಡ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೆನ್ರಿಕ್ ಕ್ಲಾಸೆನ್ 22 ಎಸೆತಗಳಲ್ಲಿ 25 ರನ್ ಬಾರಿಸಿದ್ದರು. ಈ 25 ರನ್​ಗಳಲ್ಲಿ 2 ಫೋರ್​ ಹಾಗೂ 1 ಭರ್ಜರಿ ಸಿಕ್ಸ್ ಒಳಗೊಂಡಿದ್ದವು. ಈ ಒಂದು ಸಿಕ್ಸ್​ನೊಂದಿಗೆ ಹೆನ್ರಿಕ್ ಕ್ಲಾಸೆನ್ ಇದೀಗ ಸಿಕ್ಸರ್ ಸರದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

1 / 5
ಟೀಮ್ ಇಂಡಿಯಾ ವಿರುದ್ಧ ಬಾರಿಸಿದ ಒಂದು ಸಿಕ್ಸ್​ನೊಂದಿಗೆ ಹೆನ್ರಿಕ್ ಕ್ಲಾಸೆನ್ ಈ ವರ್ಷ ಟಿ20 ಕ್ರಿಕೆಟ್​ನಲ್ಲಿ 100 ಸಿಕ್ಸರ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಒಂದೇ ವರ್ಷದೊಳಗೆ 100 ಸಿಕ್ಸ್ ಬಾರಿಸಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 4ನೇ ಆಟಗಾರ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

2 / 5
ಇದಕ್ಕೂ ಮುನ್ನ ಒಂದೇ ವರ್ಷ 100 ಸಿಕ್ಸ್​ಗಳನ್ನು ಬಾರಿಸಿದ್ದು ಕ್ರಿಸ್ ಗೇಲ್ (2011, 2012, 2015, 2016, 2017), ಆ್ಯಂಡ್ರೆ ರಸೆಲ್ (2019) ಹಾಗೂ ನಿಕೋಲಸ್ ಪೂರನ್ (2024) ಮಾತ್ರ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ದಾಂಡಿಗರಿಗೆ ಮಾತ್ರ ಈ ಸಾಧನೆ ಮಾಡಲು ಸಾಧ್ಯವಾಗಿತ್ತು.

3 / 5
ಆದರೆ 2024 ರಲ್ಲಿ ಆಡಿದ 53 ಟಿ20 ಇನಿಂಗ್ಸ್​ಗಳಲ್ಲಿ ಹೆನ್ರಿಕ್ ಕ್ಲಾಸೆನ್ 100 ಸಿಕ್ಸ್ ಸಿಡಿಸಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಈ ವರ್ಷ ನಿಕೋಲಸ್ ಪೂರನ್ ಬಳಿಕ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

4 / 5
ಅಂದಹಾಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ನಿಕೋಲಸ್ ಪೂರನ್ ಹೆಸರಿನಲ್ಲಿದೆ. 2024 ರಲ್ಲಿ 68 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಪೂರನ್ 165 ಸಿಕ್ಸ್​ಗಳನ್ನು ಸಿಡಿಸಿ ಹೊಸ ವರ್ಲ್ಡ್​ ರೆಕಾರ್ಡ್ ನಿರ್ಮಿಸಿದ್ದಾರೆ. ಈ ಮೂಲಕ ಒಂದು ಕ್ಯಾಲೆಂಡರ್ ವರ್ಷದೊಳಗೆ 150 ಕ್ಕಿಂತ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5