ಒಮಾನ್‌ನಲ್ಲಿ ನಡೆಯುತ್ತಿರುವ ಉದಯೋನ್ಮುಖ ಟೀಂ ಏಷ್ಯಾಕಪ್ನಲ್ಲಿ ಲೀಗ್ ಹಂತ ಮುಕ್ತಾಯಗೊಂಡಿದ್ದು, ಇದೀಗ ನಾಳೆ ಅಂದರೆ ಅಕ್ಟೋಬರ್ 25 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲ್ಲಿವೆ. ಮೊದಲ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆದರೆ, ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ, ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಅಫ್ಘಾನಿಸ್ತಾನ ತಂಡವನ್ನು ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಭಾರತ ಎ ತಂಡ ತನ್ನ ಗುಂಪಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಟೀಂ ಇಂಡಿಯಾ, ಆತಿಥೇಯ ಒಮಾನ್, ಯುಎಇ ಮತ್ತು ಪಾಕಿಸ್ತಾನವನ್ನು ಸೋಲಿಸಿತು. ಈ ಕಾರಣದಿಂದ ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟೀಂ ಇಂಡಿಯಾ ಪರ ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದು, ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಅಫ್ಘಾನಿಸ್ತಾನವು ತನ್ನ ಗುಂಪಿನಲ್ಲಿ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋತಿದೆ. ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವು ಶುಕ್ರವಾರ ಅಕ್ಟೋಬರ್ 25 ರಂದು ಅಲ್ ಎಮಿರೇಟ್ಸ್ ಮೈದಾನದಲ್ಲಿ ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಉದಯೋನ್ಮುಖ ಏಷ್ಯಾಕಪ್‌ನ ಸೆಮಿಫೈನಲ್ ಪಂದ್ಯವು ಶುಕ್ರವಾರ, ಅಕ್ಟೋಬರ್ 25 ರಂದು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಎರಡು ತಂಡಗಳ ನಡುವಿನ ಈ ಸೆಮಿಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಅಫ್ಘಾನಿಸ್ತಾನದ ಎ ತಂಡಗಳ ನಡುವಿನ ಉದಯೋನ್ಮುಖ ಟಿ20 ಏಷ್ಯಾಕಪ್‌ನ ಸೆಮಿಫೈನಲ್ ಪಂದ್ಯವನ್ನು ನೀವು ಮೊಬೈಲ್‌ನಲ್ಲಿ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಭಾರತ ಎ ತಂಡ: ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್(ವಿಕೆಟ್ ಕೀಪರ್), ರಮಣ್‌ದೀಪ್ ಸಿಂಗ್, ತಿಲಕ್ ವರ್ಮಾ(ನಾಯಕ), ಅನುಜ್ ರಾವತ್, ಹೃತಿಕ್ ಶೋಕೀನ್, ಸಾಯಿ ಕಿಶೋರ್, ರಾಹುಲ್ ಚಾಹರ್, ಆಯುಷ್ ಬದೋನಿ, ನೆಹಾಲ್ ವಧೇರಾ, ರಸಿಖ್ ದಾರ್ ಸಲಾಂ, ಅನ್ಶುಲ್ ಕಾಂಬೋಜ್, ಆಕಿಬ್ ಖಾನ್, ವೈಭವ್ ಅರೋರಾ, ನಿಶಾಂತ್ ಸಿಂಧು.
ಅಫ್ಘಾನಿಸ್ತಾನ ತಂಡ: ಜುಬೈದ್ ಅಕ್ಬರಿ, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ(ನಾಯಕ), ಕರೀಂ ಜನತ್, ಶಾಹಿದುಲ್ಲಾ ಕಮಾಲ್, ಮೊಹಮ್ಮದ್ ಇಶಾಕ್(ವಿಕೆಟ್ ಕೀಪರ್), ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಅಲ್ಲಾ ಘಜನ್ಫರ್, ಫರಿದೂನ್ ದಾವೂದ್ಝೈ, ಬಿಲಾಲ್ ಸಮಿ, ತಫಿಲ್ ನುಹ್ರೋತೆ, ವಾಫಿಲ್ ಖಾಲಿಯಾ, ವಾಲಿಯಾ ಶಾ, ಅಬ್ದುಲ್ ರೆಹಮಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 24 October 24