ಏಷ್ಯಾಕಪ್​ನ ಸೂಪರ್-4 ಪಂದ್ಯಗಳು ಸ್ಥಳಾಂತರ..?

| Updated By: ಝಾಹಿರ್ ಯೂಸುಫ್

Updated on: Sep 03, 2023 | 8:01 PM

Asia Cup 2023: ಪಾಕಿಸ್ತಾನ್ ತಂಡವು ಈಗಾಗಲೇ ಸೂಪರ್-4 ಹಂತಕ್ಕೇರಿದೆ. ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಇದಕ್ಕೂ ಮುನ್ನನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ 2 ಅಂಕಗಳನ್ನು ಪಡೆದಿದ್ದ ಪಾಕಿಸ್ತಾನ್ ಇದೀಗ ಒಟ್ಟು 3 ಅಂಕಗಳೊಂದಿಗೆ ಸೂಪರ್-4 ಹಂತಕ್ಕೇರಿದೆ.

ಏಷ್ಯಾಕಪ್​ನ ಸೂಪರ್-4 ಪಂದ್ಯಗಳು ಸ್ಥಳಾಂತರ..?
ಸಾಂದರ್ಭಿಕ ಚಿತ್ರ
Follow us on

ಏಷ್ಯಾಕಪ್​ 2023 ರ ಸೂಪರ್-4 ಹಂತದ ಪಂದ್ಯಗಳನ್ನು ಕೊಲಂಬೊದಿಂದ ಸ್ಥಳಾಂತರ ಮಾಡಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಚಿಂತಿಸಿದೆ. ಶ್ರೀಲಂಕಾ ರಾಜಧಾನಿ ಕೊಲಂಬೊ ಸುತ್ತ ಮುತ್ತ ಭಾರೀ ಮಳೆಯಾಗುತ್ತಿದ್ದು, ಇದರಿಂದ ಸೂಪರ್-4 ಹಂತದ ಪಂದ್ಯಗಳಿಗೆ ಅಡಚಣೆಯುಂಟಾಗುವ ಸಾಧ್ಯತೆಯಿದೆ. ಹೀಗಾಗಿ ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆ ಸ್ಟೇಡಿಯಂನಲ್ಲಿ ಆಯೋಜಿಸಲು ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಈ ವರದಿ ಪ್ರಕಾರ, ಕೊಲಂಬೊದಲ್ಲಿ ನಡೆಯಬೇಕಿರುವ ಪಂದ್ಯಗಳು ಡಂಬುಲ್ಲಾ ಹಾಗೂ ಪಲ್ಲೆಕೆಲೆಯಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಈ ಮೂಲಕ ನಿರ್ಣಾಯಕ ಹಂತದ ಪಂದ್ಯಗಳಿಗೆ ಯಾವುದೇ ಅಡಚಣೆಯಾಗದಂತೆ ತಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ಲ್ಯಾನ್ ರೂಪಿಸುತ್ತಿದೆ.

ಸದ್ಯ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಸೆಪ್ಟೆಂಬರ್ 6 ರಿಂದ ಸೂಪರ್-4 ಹಂತದ ಮ್ಯಾಚ್​ಗಳು ಶುರುವಾಗಲಿದೆ. ಈ ವೇಳೆಗೆ ಕೊಲಂಬೊದಲ್ಲಿ ಹವಾಮಾನದಲ್ಲಿ ಮತ್ತಷ್ಟು ಹದಗೆಡುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಪಂದ್ಯವನ್ನು ಸ್ಥಳಾಂತರ ಮಾಡುವ ಬಗ್ಗೆ ಚರ್ಚಿಸಲಾಗಿದೆ.

ಇತ್ತ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಕೂಡ ಮಳೆಗೆ ಅಹುತಿಯಾಗಿತ್ತು. ಇದೀಗ ಟೀಮ್ ಇಂಡಿಯಾ ಸೂಪರ್-4 ಹಂತಕ್ಕೇರಿದರೆ ಮತ್ತೆ ಪಾಕ್ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯ ನಡೆಯಬೇಕಿರುವುದು ಕೊಲಂಬೊದಲ್ಲಿ ಎಂಬುದೇ ಈಗ ಚಿಂತೆಗೆ ಕಾರಣವಾಗಿದೆ.

ಏಕೆಂದರೆ ಸೆಪ್ಟೆಂಬರ್ 10 ರಂದು ಭಾರತ-ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗಬಹುದು. ಇದೀಗ ಅದೇ ಸಮಯದಲ್ಲಿ ಕೊಲಂಬೊ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿಯೇ ಫೈನಲ್ ಸೇರಿದಂತೆ ಕೊಲಂಬೊದಲ್ಲಿ ನಡಯಬೇಕಿರುವ ಎಲ್ಲಾ ಪಂದ್ಯಗಳು ಸ್ಥಳಾಂತರವಾದರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಸೂಪರ್-4 ಹಂತದ ವೇಳಾಪಟ್ಟಿ:

  1. ಸೆಪ್ಟೆಂಬರ್ 6- A1 Vs B2 (ಲಾಹೋರ್)
  2. ಸೆಪ್ಟೆಂಬರ್ 9- B1 Vs B2 (ಕೊಲಂಬೊ)
  3. ಸೆಪ್ಟೆಂಬರ್ 10- A1 Vs A2 (ಕೊಲಂಬೊ)
  4. ಸೆಪ್ಟೆಂಬರ್ 12- A2 Vs B1 (ಕೊಲಂಬೊ)
  5. ಸೆಪ್ಟೆಂಬರ್ 14- A1 Vs B1 (ಕೊಲಂಬೊ)
  6. ಸೆಪ್ಟೆಂಬರ್ 15- A2 Vs B2 (ಕೊಲಂಬೊ)
  7. ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)

ಸೂಪರ್-4 ನಲ್ಲಿ ಇಂಡೊ-ಪಾಕ್ ಮುಖಾಮುಖಿ:

ಪಾಕಿಸ್ತಾನ್ ತಂಡವು ಈಗಾಗಲೇ ಸೂಪರ್-4 ಹಂತಕ್ಕೇರಿದೆ. ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಇದಕ್ಕೂ ಮುನ್ನನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ 2 ಅಂಕಗಳನ್ನು ಪಡೆದಿದ್ದ ಪಾಕಿಸ್ತಾನ್ ಇದೀಗ ಒಟ್ಟು 3 ಅಂಕಗಳೊಂದಿಗೆ ಸೂಪರ್-4 ಹಂತಕ್ಕೇರಿದೆ. ಇನ್ನು ಟೀಮ್ ಇಂಡಿಯಾ ನೇಪಾಳ ವಿರುದ್ಧ ಗೆದ್ದರೆ ಸೂಪರ್- ಹಂತಕ್ಕೇರಲಿದೆ. ಅದರಂತೆ ಸೂಪರ್-4 ಸುತ್ತಿನಲ್ಲಿ ಸೆಪ್ಟೆಂಬರ್ 10 ರಂದು ಭಾರತ ಮತ್ತು ಪಾಕಿಸ್ತಾನ್ ಮತ್ತೊಮ್ಮೆ ಮುಖಾಮುಖಿಯಾಗಲಿದೆ.