Virat Kohli: ಕೊಹ್ಲಿಯ 103 ಮೀಟರ್ ಸಿಕ್ಸ್ ಕಂಡು ದಂಗಾದ ಆರ್ಸಿಬಿ ಬೌಲಿಂಗ್ ಕೋಚ್: ಡ್ರೆಸ್ಸಿಂಗ್ ರೂಮ್ನಲ್ಲಿ ಏನಾಯಿತು ನೋಡಿ
RCB, IPL 2023: ಆರ್ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯ ಮುಗಿದ ಬಳಿಕ ಆಟಗಾರರು ಡ್ರೆಸ್ಸಿಂಗ್ ರೂಮ್ ಒಳಗೆ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಗುರುವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (SRH vs RCB) ನಡುವಣ ಪಂದ್ಯ ತುದಿಗಾಲಿನಲ್ಲಿ ನಿಲ್ಲಿಸಿತ್ತು. ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಂತಿಮವಾಗಿ ಆರ್ಸಿಬಿ 8 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಜೊತೆಗೆ ಐಪಿಎಲ್ 2023 ರಲ್ಲಿ ಆರ್ಸಿಬಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ವಿರಾಟ್ ಕೊಹ್ಲಿ (Virat Kohli) ನಾಲ್ಕು ವರ್ಷಗಳ ಬಳಿಕ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಕೊಹ್ಲಿ ಕೇವಲ 63 ಎಸೆತಗಳಲ್ಲಿ 12 ಫೋರ್, 4 ಸಿಕ್ಸರ್ ಸಿಡಿಸಿ 100 ರನ್ ಚಚ್ಚಿದರು. ಕೊಹ್ಲಿಯ ಈ ಇನ್ನಿಂಗ್ಸ್ನಲ್ಲಿ ಅವರು ಸಿಡಿಸಿದ ಒಂದು ಸಿಕ್ಸ್ಗೆ ಇಡೀ ಸ್ಟೇಡಿಯಂ ಒಂದು ಕ್ಷಣ ಸ್ತಬ್ಧವಾಯಿತು. ಒಂಬತ್ತನೇ ಓವರ್ನ ನಿತಿಶ್ ರೆಡ್ಡಿ ಬೌಲಿಂಗ್ನ ಮೊದಲ ಎಸೆತದಲ್ಲಿ ಕೊಹ್ಲಿ ಮನಮೋಹಕ ಸಿಕ್ಸ್ ಸಿಡಿಸಿದರು. ಈ 103 ಮೀಟರ್ ದೂರದ ಸಿಕ್ಸ್ ಕಂಡು ಕೇವಲ ಅಭಿಮಾನಿಗಳು, ನಾನ್ಸ್ಟ್ರೈಕ್ನಲ್ಲಿದ್ದ ನಾಯಕ ಫಾಫ್ ಡುಪ್ಲೆಸಿಸ್ ದಂಗಾದರು. ಪಂದ್ಯ ಮುಗಿದ ಬಳಿಕ ಕೂಡ ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿಯ ಈ ಸಿಕ್ಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.
IPL 2023: 0,0,0,0,0: ಸೊನ್ನೆ ಸುತ್ತುವುದರಲ್ಲೂ ದಾಖಲೆ ಬರೆದ ಜೋಸ್ ಬಟ್ಲರ್..!
ಆರ್ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪಂದ್ಯ ಮುಗಿದ ಬಳಿಕ ಆಟಗಾರರು ಡ್ರೆಸ್ಸಿಂಗ್ ರೂಮ್ ಒಳಗೆ ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಆರ್ಸಿಬಿ ತಂಡ ಬೌಲಿಂಗ್ ಕೋಚ್ ಆ್ಯಡಂ ಗ್ರಿಫ್ಇತ್ ಅವರು ಕೊಹ್ಲಿ ಬಾರಿಸಿದ 103 ಮೀಟರ್ ಸಿಕ್ಸ್ ಕಂಡು ಅಚ್ಚರಿಗೊಂಡ ಬಗ್ಗೆ ಹೇಳಿದ್ದಾರೆ. ಕೊಹ್ಲಿ ಹಾಗೂ ಗ್ರಿಫ್ಇತ್ ನಡುವಣ ಸಂಭಾಷಣೆ ವಿಡಿಯೋ ಇದರಲ್ಲಿದೆ. ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಇವರ ಜೊತೆ ಇದ್ದರು.
SRH v RCB Dressing Room Reactions
A century for the ages, a partnership for the record books, and a victory that takes us to Top 4 in the points table.
A Happy Dressing Room but subdued celebrations as the team realises there’s a job in hand.#PlayBold #ನಮ್ಮRCB #IPL2023 pic.twitter.com/EN7ehBXy6e
— Royal Challengers Bangalore (@RCBTweets) May 19, 2023
ದಾಖಲೆ ಬರೆದ ವಿರಾಟ್ ಕೊಹ್ಲಿ:
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಕೊಹ್ಲಿ ಐಪಿಎಲ್ನಲ್ಲಿ 6ನೇ ಶತಕ ಬಾರಿಸಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಕ್ರಿಸ್ ಗೇಲ್ ಇದ್ದರು. ಗೇಲ್ ಒಟ್ಟು 6 ಶತಕ ಬಾರಿಸಿದ್ದರೂ, ಸದ್ಯ ಸಕ್ರೀಯರಾಗಿರುವ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಶತಕದೊಂದಿಗೆ ಐಪಿಎಲ್ನಲ್ಲಿ 7500 ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 7 ಸಾವಿರದ ಐನೂರು ರನ್ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Sat, 20 May 23




