AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs CSK Highlights IPL 2023: ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಚೆನ್ನೈ; ಸೋತ ಡೆಲ್ಲಿ ಟೂರ್ನಿಯಿಂದ ಔಟ್

Delhi Capitals vs Chennai Super Kings IPL 2023 Live Score in Kannada: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 77 ರನ್​ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 12ನೇ ಬಾರಿಗೆ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ.

DC vs CSK Highlights IPL 2023: ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಚೆನ್ನೈ; ಸೋತ ಡೆಲ್ಲಿ ಟೂರ್ನಿಯಿಂದ ಔಟ್
ಡೆಲ್ಲಿ- ಚೆನ್ನೈ ಮುಖಾಮುಖಿ
ಪೃಥ್ವಿಶಂಕರ
|

Updated on:May 20, 2023 | 7:21 PM

Share

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 77 ರನ್​ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 12ನೇ ಬಾರಿಗೆ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭಿಕರಿಬ್ಬರ ಸ್ಫೋಟಕ ಅರ್ಧಶತಕದ ನೆರವಿನಿಂದಾಗಿ ಕೇವಲ 2 ವಿಕೆಟ್​ ಕಳೆದುಕೊಂಡು 223 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಅಂತಿಮವಾಗಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 146 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದೆ ವಾರ್ನರ್ 86 ರನ್ ಸಿಡಿಸಿದರು.

LIVE NEWS & UPDATES

The liveblog has ended.
  • 20 May 2023 07:07 PM (IST)

    ವಾರ್ನರ್ ಏಕಾಂಗಿ ಹೋರಾಟ ಅಂತ್ಯ

    ಡೆಲ್ಲಿ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ವಾರ್ನರ್ ಅಂತಿಮವಾಗಿ 19ನೇ ಓವರ್​ನಲ್ಲಿ ಕ್ಯಾಚಿತ್ತು ಔಟಾದಾರು.

    ವಾರ್ನರ್ 86 (58)

    ಡೆಲ್ಲಿ 144/7

  • 20 May 2023 06:56 PM (IST)

    ವಾರ್ನರ್ ಏಕಾಂಗಿ ಹೋರಾಟ

    16ನೇ ಓವರ್​ನಲ್ಲಿ 3 ಬೌಂಡರಿ ಬಂದವು

    ವಾರ್ನರ್ 2 ಬೌಂಡರಿ ಹೊಡೆದರೆ, ಅಮನ್ 1 ಫೋರ್ ಬಾರಿಸಿದರು.

    ಈ ಓವರ್​ನಲ್ಲಿ 15 ರನ್ ಬಂದವು.

  • 20 May 2023 06:48 PM (IST)

    15 ಓವರ್ ಅಂತ್ಯ

    ಡೆಲ್ಲಿ ಇನ್ನಿಂಗ್ಸ್​ನ 15 ಓವರ್ ಮುಗಿದಿದೆ.

    ಈ 15 ಓವರ್​ಗಳಲ್ಲಿ ಡೆಲ್ಲಿ 116 ರನ್ ಕಲೆ ಹಾಕಿ 5 ವಿಕೆಟ್ ಕಳೆದುಕೊಂಡಿದೆ.

    ಡೆಲ್ಲಿ ಗೆಲುವಿಗೆ 30 ಎಸೆತಗಳಲ್ಲಿ 108 ರನ್ ಬೇಕಿದೆ.

    ಅಮನ್ ಹಕೀಮ್ ಖಾನ್ 2* (6)

    ಡೇವಿಡ್ ವಾರ್ನರ್ 73* (47)

  • 20 May 2023 06:36 PM (IST)

    ಚಾಹರ್​ಗೆ 3ನೇ ವಿಕೆಟ್

    14ನೇ ಓವರ್​ನ 4ನೇ ಎಸೆತದಲ್ಲಿ ಅಕ್ಷರ್ ಲಾಂಗ್ ಆಫ್​ನಲ್ಲಿ ಕ್ಯಾಚಿತ್ತು ಔಟಾದರು.

  • 20 May 2023 06:33 PM (IST)

    ಜಡೇಜಾ ಓವರ್​ನಲ್ಲಿ 23 ರನ್

    14ನೇ ಓವರ್​ನಲ್ಲಿ ಜಡೇಜಾ 23 ರನ್ ನೀಡಿದರು

    ಈ ಓವರ್​ನಲ್ಲಿ 3 ಸಿಕ್ಸರ್ ಸೇರಿದಂತೆ 1 ಬೌಂಡರಿ ಕೂಡ ಬಂತು

    14 ಓವರ್ ಅಂತ್ಯಕ್ಕೆ 107/4

  • 20 May 2023 06:31 PM (IST)

    ಅಕ್ಷರ್ ಸಿಕ್ಸ್

    13ನೇ ಓವರ್​ನ ಮೊದಲ ಎಸೆತವನ್ನು ಬೌಲರ್ ತಲೆಯ ಮೇಲೆ ಅಕ್ಷರ್ ಸಿಕ್ಸರ್​ಗಟ್ಟಿದರು.

  • 20 May 2023 06:28 PM (IST)

    ಯಶ್ ಔಟ್

    ಜಡೇಜಾ ಡೆಲ್ಲಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

    4ನೇ ವಿಕೆಟ್ ರೂಪದಲ್ಲಿ ಯಶ್ ವಿಕೆಟ್ ಒಪ್ಪಿಸಿದ್ದಾರೆ.

    ಡೆಲ್ಲಿ 11 ಓವರ್ ಅಂತ್ಯಕ್ಕೆ 76/4

  • 20 May 2023 06:12 PM (IST)

    ದುಬಾರಿ ಜಡೇಜಾ

    9ನೇ ಓವರ್ ಬೌಲ್ ಮಾಡಿದ ಜಡೇಜಾ 13 ರನ್ ಬಿಟ್ಟುಕೊಟ್ಟರು

    ಈ ಓವರ್​ನಲ್ಲಿ ವಾರ್ನರ್ 1 ಸಿಕ್ಸ್ ಹಾಗೂ ಬೌಂಡರಿ ಬಾರಿಸಿದರು.

    9 ಓವರ್ ಅಂತ್ಯಕ್ಕೆ 61/3

  • 20 May 2023 06:04 PM (IST)

    ಯಶ್ ಫೋರ್

    7ನೇ ಓವರ್​ನ ಮೊದಲ ಎಸೆತವನ್ನ ಯಶ್ ಪಾಯಿಂಟ್​ನಲ್ಲಿ ಬೌಂಡರಿಗಟ್ಟಿದರು.

  • 20 May 2023 06:01 PM (IST)

    ಪವರ್ ಪ್ಲೇಯಲ್ಲೇ ಪವರ್ ಕಳೆದುಕೊಂಡ ಡೆಲ್ಲಿ

    ಪವರ್ ಪ್ಲೇಯಲ್ಲೇ ಪವರ್ ಕಳೆದುಕೊಂಡ ಡೆಲ್ಲಿ

    6 ಓವರ್​ಗಳ ಪವರ್ ಪ್ಲೇಯಲ್ಲಿ ಡೆಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಕೇವಲ 34 ರನ್ ಕಲೆಹಾಕಿದೆ.

  • 20 May 2023 05:56 PM (IST)

    ಮತ್ತೊಂದು ವಿಕೆಟ್

    ಸಾಲ್ಟ್ ವಿಕೆಟ್ ಬಳಿಕ ಬಂದಿದ್ದ ರುಸ್ಸೋ ಕೂಡ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ತೆರಳಿದ್ದಾರೆ.

  • 20 May 2023 05:54 PM (IST)

    ಸಾಲ್ಟ್ ಔಟ್

    ಡೆಲ್ಲಿಯ 2ನೇ ವಿಕೆಟ್ ಪತನವಾಗಿದೆ.

    5ನೇ ಓವರ್​ನ 4ನೇ ಎಸೆತದಲ್ಲಿ ಸಾಲ್ಟ್ ಕ್ಯಾಚಿತ್ತು ಔಟಾದರು.

    ಡೆಲ್ಲಿ 26/2

  • 20 May 2023 05:54 PM (IST)

    ಮೊದಲ ಸಿಕ್ಸ್

    5ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವಾರ್ನರ್ 2ನೇ ಎಸೆತವನ್ನು ಬೌಂಡರಿಗಟ್ಟಿದರು.

  • 20 May 2023 05:50 PM (IST)

    ವಾರ್ನರ್ ಬೌಂಡರಿ

    4ನೇ ಓವರ್​ನ ಮೂರನೇ ಎಸೆತವನ್ನು ಡೀಪ್ ಸ್ಕ್ವೇರ್​ ಲೆಗ್ ಕಡೆ ವಾರ್ನರ್ ಬೌಂಡರಿಗಟ್ಟಿದರು.

  • 20 May 2023 05:40 PM (IST)

    ಪೃಥ್ವಿ ಔಟ್

    ಡೆಲ್ಲಿಯ ಮೊದಲ ವಿಕೆಟ್ ಪತನವಾಗಿದೆ.

    ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್​ನ 3ನೇ ಎಸೆತದಲ್ಲಿ ಪೃಥ್ವಿ ಕ್ಯಾಚಿತ್ತು ಔಟಾದರು.

    ಡೆಲ್ಲಿ 6/1

  • 20 May 2023 05:37 PM (IST)

    ದೆಹಲಿ ಬ್ಯಾಟಿಂಗ್ ಆರಂಭ

    224 ರನ್‌ಗಳ ಗುರಿಗೆ ಉತ್ತರವಾಗಿ ಡೆಲ್ಲಿ ಮೈದಾನಕ್ಕೆ ಇಳಿದಿದೆ. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಕ್ರೀಸ್‌ನಲ್ಲಿದ್ದಾರೆ.

  • 20 May 2023 05:16 PM (IST)

    ಡೆಲ್ಲಿಗೆ 223 ರನ್ ಟಾರ್ಗೆಟ್

    20ನೇ ಓವರ್​ನಲ್ಲಿ ಚೆನ್ನೈ 16 ರನ್ ಕಲೆಹಾಕಿತು

    ಆರಂಭಿಕರ ಅರ್ಧಶತಕದ ನೆರವಿನಿಂದಾಗಿ ಚೆನ್ನೈ ನಿಗಧಿತ 20 ಓವರ್​ಗಳಲ್ಲಿ 223 ರನ್ ಕಲೆಹಾಕಿತು.

  • 20 May 2023 05:07 PM (IST)

    ಚೆನ್ನೈ ದ್ವಿಶತಕ ಪೂರ್ಣ

    19ನೇ ಓವರ್​ನ 4ನೇ ಎಸೆತವನ್ನು ಸಿಕ್ಸರ್​ಗಟ್ಟಿದ ಜಡೇಜಾ ಚೆನ್ನೈ ಮೊತ್ತವನ್ನು 200ರ ಗಡಿ ದಾಟಿಸಿದ್ದಾರೆ

    ಚೆನ್ನೈ 207/3

    ರವೀಂದ್ರ ಜಡೇಜಾ 11* (3)

    ಎಂಎಸ್ ಧೋನಿ1* (1)

  • 20 May 2023 05:03 PM (IST)

    ಕಾನ್ವೇ ಕೂಡ ಔಟ್

    19ನೇ ಓವರ್​ನ ಮೊದಲ ಎಸೆತದಲ್ಲೇ ಕಾನ್ವೇ ಲಾಂಗ್ ಆಫ್​ನಲ್ಲಿ ಕ್ಯಾಚಿತ್ತು ಔಟಾದರು.

    ಚೆನ್ನೈ 195/3

    ಕಾನ್ವೇ 87 (52)

  • 20 May 2023 05:01 PM (IST)

    ಖಲೀಲ್ ಮತ್ತೆ ದುಬಾರಿ, ದುಬೆ ಔಟ್

    18ನೇ ಓವರ್​ನಲ್ಲಿ ಖಲೀಲ್ 16 ರನ್ ನೀಡಿದರು.

    ಈ ಓವರ್​ನಲ್ಲಿ 2 ಸಿಕ್ಸರ್ ಸಿಡಿದವು. ಇದರೊಂದಿಗೆ 1 ನೋ ಬಾಲ್ ಕೂಡ ಬಂತು.

    ಓವರ್​ನ ಕೊನೆಯ ಎಸೆತದಲ್ಲಿ ದುಬೆ ಔಟಾದರು.

  • 20 May 2023 04:55 PM (IST)

    17 ಓವರ್ ಅಂತ್ಯ

    ನೋಕಿಯಾ ಬೌಲ್ ಮಾಡಿದ 17ನೇ ಓವರ್​ನಲ್ಲಿ 12 ರನ್ ಬಂದವು.

    ಈ ಓವರ್​ನಲ್ಲಿ 1 ಬೌಂಡರಿ ಹಾಗೂ ಸಿಕ್ಸರ್ ಬಂತು

    17 ಓವರ್ ಅಂತ್ಯಕ್ಕೆ 179/1

  • 20 May 2023 04:49 PM (IST)

    ದುಬೆ ಸಿಕ್ಸರ್

    16ನೇ ಓವರ್​ನ 3ನೇ ಎಸೆತವನ್ನು ದುಬೆ ಲಾಂಗ್ ಆನ್​ ಸಿಕ್ಸರ್​ಗಟ್ಟಿದರು.

    ಹಾಗೆಯೇ ಓವರ್​ನ 5ನೇ ಎಸೆತವನ್ನು ಕಾನ್ವೇ ಬೌಲರ್ ತಲೆಯ ಮೇಲೆ ಬೌಂಡರಿಗಟ್ಟಿದರು.

    16 ಓವರ್ ಅಂತ್ಯಕ್ಕೆ 167/1

    ಡೆವೊನ್ ಕಾನ್ವೇ 75* (43)

    ಶಿವಂ ದುಬೆ8* (3)

  • 20 May 2023 04:41 PM (IST)

    ರುತುರಾಜ್ ಔಟ್

    ಚೆನ್ನೈ ಮೊದಲ ವಿಕೆಟ್ ಪತನವಾಗಿದೆ

    79 ರನ್ ಬಾರಿಸಿ ರುತುರಾಜ್ ಔಟಾಗಿದ್ದಾರೆ.

    ಸಕಾರಿಯಾ ಈ ವಿಕೆಟ್ ಉರುಳಿಸಿದರು.

  • 20 May 2023 04:37 PM (IST)

    ಕಾನ್ವೇ ಅರ್ಧಶತಕ

    14ನೇ ಓವರ್​ನ ಮೊದಲ ಎಸೆತವನ್ನು ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದ ಕಾನ್ವೇ ತಮ್ಮ ಅರ್ಧಶತಕ ಪೂರೈಸಿದರು.

    14 ಓವರ್ ಅಂತ್ಯಕ್ಕೆ 140/0

    ರುತುರಾಜ್ ಗಾಯಕ್ವಾಡ್ 79* (48)

    ಡೆವೊನ್ ಕಾನ್ವೇ 59* (36)

  • 20 May 2023 04:31 PM (IST)

    ಗಾಯಕ್ವಾಡ್ ಅಬ್ಬರ

    13ನೇ ಓವರ್​ನ ಕೊನೆಯ ಎಸೆತದಲ್ಲೂ ಗಾಯಕ್ವಾಡ್ ಸಿಕ್ಸರ್ ಬಾರಿಸಿದರು.

    ರುತುರಾಜ್ ಗಾಯಕ್ವಾಡ್ 78* (46)

    ಡೆವೊನ್ ಕಾನ್ವೇ 47* (32)

  • 20 May 2023 04:29 PM (IST)

    ರುತುರಾಜ್ ಹ್ಯಾಟ್ರಿಕ್ ಸಿಕ್ಸ್

    ಕುಲ್ದೀಪ್ ಬೌಲ್ ಮಾಡಿದ 12ನೇ ಓವರ್​ನಲ್ಲಿ 20 ರನ್ ಬಂದವು

    ಈ ಓವರ್​ನಲ್ಲಿ ರುತುರಾಜ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು.

    12 ಓವರ್ ಅಂತ್ಯಕ್ಕೆ 117/0

  • 20 May 2023 04:16 PM (IST)

    10 ಓವರ್ ಅಂತ್ಯ, ರುತುರಾಜ್ ಅರ್ಧಶತಕ

    ರುತುರಾಜ್ ಬ್ಯಾಕ್ ಟು ಬ್ಯಾಕ್ ಸಿಕ್ಸ್

    10 ಓವರ್ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 88 ರನ್ ಗಳಿಸಿದೆ.

    ಈ ಓವರ್​ನ 3ನೇ ಎಸೆತವನ್ನು ಗಾಯಕ್ವಾಡ್ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್​ಗಟ್ಟಿದರೆ, 4ನೇ ಎಸೆತವನ್ನು ಕವ್ಸ್ ಕಾರ್ನರ್​ನಲ್ಲಿ ಸಿಕ್ಸರ್​ಗಟ್ಟಿದರು.

    ಇದೇ ಓವರ್​ನಲ್ಲಿ ರುತುರಾಜ್ ಅರ್ಧಶತಕ ಪೂರೈಸಿದರು.

    ಡೆವೊನ್ ಕಾನ್ವೇ 35* (23)

    ರುತುರಾಜ್ ಗಾಯಕ್ವಾಡ್ 50* (37)

  • 20 May 2023 03:55 PM (IST)

    ಚೆನ್ನೈ ಅರ್ಧಶತಕ ಪೂರ್ಣ

    ನೋಕಿಯಾ ಎಸೆದ 5ನೇ ಓವರ್​ನ 3 ಮತ್ತು 4ನೇ ಎಸೆತವನ್ನು ಕಾನ್ವೇ ಬೌಂಡರಿಗಟ್ಟಿದರು

    ಇದರೊಂದಿಗೆ ಚೆನ್ನೈನ ಅರ್ಧಶತಕ ಕೂಡ ಪೂರ್ಣಗೊಂಡಿದೆ.

    ಡೆವೊನ್ ಕಾನ್ವೇ 27* (14)

    ರುತುರಾಜ್ ಗಾಯಕ್ವಾಡ್ 21* (16)

  • 20 May 2023 03:50 PM (IST)

    ರುತುರಾಜ್ ಸಿಕ್ಸ್

    4ನೇ ಓವರ್​ನ 3ನೇ ಎಸೆತವನ್ನು ರುತುರಾಜ್ ಓವರ್ ಎಕ್ಸ್​ಟ್ರಾ ಕವರ್​ನಲ್ಲಿ ಸಿಕ್ಸರ್​ಗಟ್ಟಿದರು.

    ಚೆನ್ನೈ 41/0

  • 20 May 2023 03:46 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಖಲೀಲ್ ಬೌಲ್ ಮಾಡಿದ 3ನೇ ಓವರ್​ನಲ್ಲಿ 11 ರನ್ ಬಂದವು

    ಈ ಓವರ್​ನ ಕೊನೆಯ 2 ಎಸೆತವನ್ನೂ ಕಾನ್ವೇ ಬೌಂಡರಿಗಟ್ಟಿದರು

    ಚೆನ್ನೈ 30/0

  • 20 May 2023 03:41 PM (IST)

    ಕಾನ್ವೇ ಸಿಕ್ಸ್

    2ನೇ ಓವರ್​ನಲ್ಲಿ 13 ರನ್ ಬಂದವು

    ಓವರ್​ನ 4ನೇ ಎಸೆತವನ್ನು ಕಾನ್ವೇ ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.

  • 20 May 2023 03:35 PM (IST)

    ಚೆನ್ನೈ ಇನ್ನಿಂಗ್ಸ್ ಆರಂಭ

    ರುತುರಾಜ್ ಹಾಗೂ ಕಾನ್ವೇ ಇನ್ನಿಂಗ್ಸ್ ಆರಂಭಿಸಿದ್ದಾರೆ

    ಡೆಲ್ಲಿ ಪರ ಖಲೀಲ್ ಮೊದಲು ಓವರ್ ಬೌಲ್ ಮಾಡಿದರು

    ಓವರ್​ನ 5ನೇ ಎಸೆತದಲ್ಲಿ ರುತುರಾಜ್ ಬೌಂಡರಿ ಹೊಡೆದರು.

  • 20 May 2023 03:18 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರುತುರಾಜ್ ಗಾಯಕ್‌ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಕೀಪರ್/ನಾಯಕ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

  • 20 May 2023 03:17 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ಕೀಪರ್), ರಿಲೆ ರೊಸ್ಸೋ, ಯಶ್ ಧುಲ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಚೇತನ್ ಜಕಾರಿಯಾ, ಖಲೀಲ್ ಅಹ್ಮದ್, ಎನ್ರಿಕ್ ನೋಕಿಯಾ.

  • 20 May 2023 03:02 PM (IST)

    ಟಾಸ್ ಗೆದ್ದ ಚೆನ್ನೈ

    ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 20,2023 3:01 PM

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ