ಐಪಿಎಲ್‌ನಲ್ಲಿ 150 ಕೋಟಿ ರೂ. ಪರ್ಸ್ ಇಲ್ಲ, 12 ತಂಡಗಳೂ ಇಲ್ಲ; ಬಿಸಿಸಿಐ ಸ್ಪಷ್ಟನೆ
ಐಪಿಎಲ್ 2028ರಲ್ಲಿ 12 ತಂಡಗಳು ಮತ್ತು ಆಟಗಾರರ ಪರ್ಸ್ ಹೆಚ್ಚಳದ ವದಂತಿಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಿಸುವ ಅಥವಾ ತಂಡಗಳ ಪರ್ಸ್ ಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಸಿಸಿಐ ಪ್ರಸ್ತುತ 2027ರ ಐಪಿಎಲ್ ಆಯೋಜನೆಗೆ ಮಾತ್ರ ಗಮನ ನೀಡುತ್ತಿದೆ, ಇದು 20ನೇ ಆವೃತ್ತಿಯಾಗಿದ್ದು, ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆದಿದೆ.

Devajit SaikiaImage Credit source: PTI
2027 ರ ಐಪಿಎಲ್ ಮಿನಿ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕವೇ ಕೆಲವು ಆಟಗಾರರನ್ನು ತಮ್ಮ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸದಲ್ಲಿ ನಿರತವಾಗಿವೆ. ಈ ನಡುವೆ ಐಪಿಎಲ್ ಬಗ್ಗೆ ಮಹತ್ವದ ಗಾಳಿ ಸುದ್ದಿಯೊಂದು ಹುಟ್ಟಿಕೊಂಡಿತ್ತು. ಅದೇನೆಂದರೆ 2028 ರ ಐಪಿಎಲ್ನಿಂದ 10 ತಂಡಗಳ ಬದಲಿಗೆ 12 ತಂಡಗಳು ಕಣಕ್ಕಿಳಿಯುತ್ತವೆ ಎಂಬುದು. ಆದರೀಗ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪಷ್ಟನೆ ನೀಡಿದ್ದು, ಐಪಿಎಲ್‌ನಲ್ಲಿ ಈಗಿರುವ 10 ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಬಿಸಿಸಿಐ ಮುಂದಿಲ್ಲ. ಈ ಬಗ್ಗೆ ಮಂಡಳಿಯಲ್ಲಿ ಅನೌಪಚಾರಿಕವಾಗಿಯೂ ಚರ್ಚೆ ನಡೆದಿಲ್ಲ ಎಂದಿದ್ದಾರೆ.
Published On - 8:04 pm, Wed, 11 November 26
Follow Us
