AFG vs SA: ಸೋತಿದ್ದೇವೆ ನಿಜ, ಆದ್ರೆ ಯಾರನ್ನ ಬೇಕಿದ್ರೂ ಸೋಲಿಸುತ್ತೇವೆ ಎಂಬ ನಂಬಿಕೆ ಮೂಡಿದೆ: ರಶೀದ್ ಖಾನ್

|

Updated on: Jun 27, 2024 | 10:38 AM

T20 World Cup 2024: ಅಫ್ಘಾನಿಸ್ತಾನ್ ತಂಡದ ಟಿ20 ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ. ಚೊಚ್ಚಲ ಬಾರಿಗೆ ಸೆಮಿಫೈನಲ್​ಗೆ ಪ್ರವೇಶಿಸಿದ್ದ ಅಫ್ಘಾನ್ ಪಡೆಯು ನಿರ್ಣಾಯಕ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ ಹೀನಾಯ ಪ್ರದರ್ಶನ ನೀಡಿದೆ. ಈ ಮೂಲಕ 9 ವಿಕೆಟ್​ಗಳಿಂದ ಸೋಲನುಭವಿಸಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.

AFG vs SA: ಸೋತಿದ್ದೇವೆ ನಿಜ, ಆದ್ರೆ ಯಾರನ್ನ ಬೇಕಿದ್ರೂ ಸೋಲಿಸುತ್ತೇವೆ ಎಂಬ ನಂಬಿಕೆ ಮೂಡಿದೆ: ರಶೀದ್ ಖಾನ್
Rashid Khan
Follow us on

T20 World Cup 2024: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿ ಸೌತ್ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು ಸೌತ್ ಆಫ್ರಿಕಾ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿತು.

ಕೇವಲ 23 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಅಫ್ಘಾನಿಸ್ತಾನ್ ತಂಡವು ಅಂತಿಮವಾಗಿ 11.5 ಓವರ್​ಗಳಲ್ಲಿ ಕೇವಲ 56 ರನ್ ಕಲೆಹಾಕಿ ಆಲೌಟ್ ಆಯಿತು. ಇನ್ನು 57 ರನ್​ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 8.5 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುವ ಅಫ್ಘಾನ್ ಪಡೆಯ ಕನಸು ಕೂಡ ಕಮರಿದೆ.

ಈ ಪಂದ್ಯದ ಬಳಿಕ ಮಾತನಾಡಿದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್, ನಮ್ಮ ಪಾಲಿಗೆ ಇದೊಂದು ಕಠಿಣ ಪಂದ್ಯವಾಗಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ನಾವು ಈ ಹಂತದಲ್ಲಿ ಎಡವಿದೆವು. ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡು ಆಡುವಲ್ಲಿ ವಿಫಲವಾದೆವು ಎಂದೇ ಹೇಳಬೇಕಾಗುತ್ತದೆ. ಟಿ20 ಕ್ರಿಕೆಟ್ ಹೇಗಿದೆ ಎಂದರೆ, ನೀವು ಎಲ್ಲಾ ಷರತ್ತುಗಳಿಗೆ ಸಿದ್ಧರಾಗಿರಬೇಕು. ಇಲ್ಲಿ ಸೌತ್ ಆಫ್ರಿಕಾ ತಂಡವು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಅವರು ಮೇಲುಗೈ ಸಾಧಿಸಿದ್ದಾರೆ.

ಇದಾಗ್ಯೂ ಟೂರ್ನಿಯುದ್ದಕ್ಕೂ ನಾವು ಉತ್ತಮ ಯಶಸ್ಸನ್ನು ಪಡೆದಿದ್ದೇವೆ. ಅದರಲ್ಲೂ ನಮ್ಮ ವೇಗಿಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅನುಪಸ್ಥಿತಿಯಲ್ಲಿ, ಸೀಮರ್​ಗಳು ಮತ್ತು ಮೊಹಮ್ಮದ್ ನಬಿ ಅದ್ಭುತವಾಗಿ ಬೌಲ್ ಮಾಡಿದ್ದರು. ಅದು ಸ್ಪಿನ್ನರ್‌ಗಳಾಗಿ ನಮ್ಮ ಕೆಲಸವನ್ನು ಸುಲಭಗೊಳಿಸಿತು ಎಂದು ರಶೀದ್ ಖಾನ್ ಹೇಳಿದ್ದಾರೆ.

ನಾವು ಸೆಮಿಫೈನಲ್ ಸೋಲನ್ನು ಒಪ್ಪಿಕೊಳ್ಳಲೇಬೇಕು. ಅದರಲ್ಲೂ ಸೌತ್ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಸೋತಿದ್ದೇವೆ. ಇವೆಲ್ಲವೂ ನಮಗೆ ಆರಂಭವಷ್ಟೇ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ನಾವು ನೀಡಿದ ಪ್ರದರ್ಶನ ಹೊಸ ಆತ್ಮ ವಿಶ್ವಾಸವನ್ನು ಮೂಡಿಸಿದೆ. ಯಾವುದೇ ತಂಡವನ್ನು ಸೋಲಿಸುವ ನಂಬಿಕೆ ನಮ್ಮ ಆಟಗಾರರಲ್ಲಿ ಮೂಡಿದೆ.

ಹೀಗಾಗಿ ಸೆಮಿಫೈನಲ್ ಸೋಲಿನ ಹೊರತಾಗಿಯೂ ನಾವು ಸಾಕಷ್ಟು ಕಲಿತಿದ್ದೇವೆ. ಅಲ್ಲದೆ ನಮ್ಮಲ್ಲೂ ಅತ್ಯುತ್ತಮ ಕೌಶಲ್ಯವಿದೆ ಎಂಬುದರ ಅರಿವಾಗಿದೆ. ಆದರೆ ಕಠಿಣ ಸಂದರ್ಭಗಳು, ಒತ್ತಡದ ಸಂದರ್ಭಗಳನ್ನು ನಿರ್ವಹಿಸುವುದರ ಬಗ್ಗೆ ನಾವು ಮತ್ತಷ್ಟು ಕಾರ್ಯ ನಿರ್ವಹಿಸಬೇಕಿದೆ. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಕಟ್ಟುವ ಬಗ್ಗೆ ಹೆಚ್ಚಿನ ಅನುಭವ ಬೇಕು. ಹೀಗಾಗಿ ಈ ತಪ್ಪುಗಳನ್ನು ತಿದ್ದಿಕೊಳ್ಳಲು ಇದೊಂದು ಪಾಠ ಎಂಬುದು ನನ್ನ ಭಾವನೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ

ಇನ್ನು ಈ ಸೋಲಿನೊಂದಿಗೆ ನಮ್ಮ ಮತ್ತಷ್ಟು ತಪ್ಪುಗಳು ನಮಗೆ ತಿಳಿದಿದೆ. ಈ ತಪ್ಪುಗಳಿಂದ ಸಾಕಷ್ಟು ಕಲಿಯಲಿದ್ದೇವೆ. ನಾವು ಇಲ್ಲಿಯವರೆಗೆ ಉತ್ತಮ ಫಲಿತಾಂಶಗಳನ್ನು ಸಾಧಿಸಿದ್ದೇವೆ. ಹೀಗಾಗಿ ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಮತ್ತಷ್ಟು ಶ್ರಮವಹಿಸಿ ಬಲಿಷ್ಠರಾಗಿ ಹಿಂತಿರುತ್ತೇವೆ ಎಂದು ರಶೀದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

Published On - 9:02 am, Thu, 27 June 24