ಅಫ್ಘಾನ್ ವಿರುದ್ಧ ಆಂಗ್ಲರಿಗೆ ಅವಮಾನಕರ ಸೋಲು; ಮೀಮ್‌ಗಳ ಸುರಿಮಳೆ! ಕ್ರಿಕೆಟ್ ದಿಗ್ಗಜರ ಮೆಚ್ಚುಗೆ

|

Updated on: Oct 16, 2023 | 6:05 AM

ICC World Cup 2023: ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 284 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 215 ರನ್‌ಗಳಿಗೆ ಆಲೌಟ್ ಆಯಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಈ ಅವಮಾನಕರ ಸೋಲಿನ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಹೊರಹೊಮ್ಮುತ್ತಿವೆ.

ಅಫ್ಘಾನ್ ವಿರುದ್ಧ ಆಂಗ್ಲರಿಗೆ ಅವಮಾನಕರ ಸೋಲು; ಮೀಮ್‌ಗಳ ಸುರಿಮಳೆ! ಕ್ರಿಕೆಟ್ ದಿಗ್ಗಜರ ಮೆಚ್ಚುಗೆ
ಇಂಗ್ಲೆಂಡ್-ಅಫ್ಘಾನಿಸ್ತಾನ
Follow us on

ಹಶ್ಮತುಲ್ಲಾ ಶಾಹಿದಿ (Hashmatullah Shahidi) ನಾಯಕತ್ವದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ತಮ್ಮ 8 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ, ಇಂಗ್ಲೆಂಡ್‌ ತಂಡವನ್ನು (ENG vs AFG) ಸೋಲಿಸಿ ಇತಿಹಾಸ ನಿರ್ಮಿಸಿದೆ. 69 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದ ಅಫ್ಘಾನಿಸ್ತಾನಕ್ಕೆ ಏಕದಿನ ವಿಶ್ವಕಪ್​ನಲ್ಲಿ ಇದು ಎರಡನೇ ಗೆಲುವು. ಈ ಹಿಂದೆ 2015 ರ ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಅಫ್ಘಾನಿಸ್ತಾನ ಗೆದ್ದುಕೊಂಡಿತ್ತು. ಇದೀಗ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಅಫ್ಘಾನ್ ತಂಡಕ್ಕೆ ಬರೋಬ್ಬರಿ 8 ವರ್ಷಗಳ ನಂತರ ಈ ಗೆಲುವು ಲಭಿಸಿದೆ.

215 ರನ್‌ಗಳಿಗೆ ಆಲೌಟ್

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 284 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ 215 ರನ್‌ಗಳಿಗೆ ಆಲೌಟ್ ಆಯಿತು. ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ಈ ಅವಮಾನಕರ ಸೋಲಿನ ನಂತರ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಹೊರಹೊಮ್ಮುತ್ತಿವೆ.

IND vs AFG: ಅಫ್ಘಾನಿಸ್ತಾನವನ್ನು ಸೋಲಿಸಿ ಅನೇಕ ದಾಖಲೆಗಳನ್ನು ಮುರಿದ ಭಾರತ..!

ಇರ್ಫಾನ್ ಪಠಾಣ್ ಅಭಿನಂದನೆ

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಅಫ್ಘಾನಿಸ್ತಾನದ ಈ ದೊಡ್ಡ ಗೆಲುವಿಗೆ ಪೋಸ್ಟ್ ಮಾಡುವ ಮೂಲಕ ಅಫ್ಘಾನ್ ತಂಡವನ್ನು ಅಭಿನಂದಿಸಿದ್ದು, ‘ಅಫ್ಘಾನಿಸ್ತಾನಕ್ಕೆ ಅನೇಕ ಅಭಿನಂದನೆಗಳು. ನೀವು ಎಲ್ಲಾ ವಿಭಾಗಗಳಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ್ದೀರಿ. ಗುರ್ಬಜ್ಜಾ ನೀವು ಅದ್ಭುತ ಇನ್ನಿಂಗ್ಸ್ ಆಡಿದ್ದೀರಿ, ಮಧ್ಯಮ ಓವರ್‌ಗಳಲ್ಲಿ ಇಕ್ರಮ್ ಉತ್ತಮವಾಗಿ ಕಾಣುತ್ತಿದ್ದರು. ಅಫ್ಘಾನಿಸ್ತಾನದ ಬೌಲಿಂಗ್ ಉನ್ನತ ದರ್ಜೆಯದ್ದಾಗಿದೆ’ ಎಂದು ಬರೆದುಕೊಂಡಿದ್ದಾರೆ.

ವಾನ್ ಕಾಲೆಳೆದ ಜಾಫರ್

ಇರ್ಫಾನ್ ಪಠಾಣ್ ಜೊತೆಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಅವರನ್ನು ಟೀಕಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಉಭಯ ತಂಡಗಳು

ಇಂಗ್ಲೆಂಡ್ ತಂಡ: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ

ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತ್ ಶಾಹಿದಿ (ನಾಯಕ),ಮೊಹಮ್ಮದ್ ನಬಿ, ಅಜ್ಮತ್ ಒಮರ್ಜಾಯ್, ಇಕ್ರಮ್ ಅಲಿ ಖಿಲ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ ಫಾರೂಕಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ