ಶಾರ್ಜಾ ಪಿಚ್‌ನಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಎದುರಾಳಿ ತಂಡಕ್ಕೆ ನುಂಗಲಾರದ ತುತ್ತಾದರು. ಇಬ್ಬರು ಸ್ಪಿನ್ನರ್ಗಳ ಅದ್ಭುತ ಪ್ರದರ್ಶನದಿಂದಾಗಿ ಅಫ್ಘಾನಿಸ್ತಾನ 130 ರನ್ಗಳ ಅಂತರದ ಜಯ ಸಾಧಿಸಿದೆ. ಮುಜೀಬ್ ಸ್ಕಾಟ್ಲೆಂಡ್ ವಿರುದ್ಧ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 190 ರನ್ ಗಳಿಸಿತು ಮತ್ತು ಉತ್ತರವಾಗಿ ಸ್ಕಾಟ್ಲೆಂಡ್ ಕೇವಲ 60 ರನ್ ಗಳಿಗೆ ಆಲೌಟ್ ಆಯಿತು. ಮುಜೀಬ್ ಐದು ವಿಕೆಟ್ ಕಬಳಿಸಿದರಲ್ಲದೆ, ರಶೀದ್ ಖಾನ್ 9 ರನ್ ನೀಡಿ 4 ವಿಕೆಟ್ ಪಡೆದರು. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಜೀಬ್ ಉರ್ ರೆಹಮಾನ್ ಅವರ ಮಿಸ್ಟರಿ ಸ್ಪಿನ್ ಸ್ಕಾಟಿಷ್ ಬ್ಯಾಟ್ಸ್‌ಮನ್‌ಗಳ ಗ್ರಹಿಕೆಗೆ ಮೀರಿದೆ. ಮುಜೀಬ್ ಉರ್ ರೆಹಮಾನ್ ಕೇವಲ 5 ಎಸೆತಗಳಲ್ಲಿ 3 ವಿಕೆಟ್ ಪಡೆದರು ಮತ್ತು ತಮ್ಮ ಕೊನೆಯ ಓವರ್ನಲ್ಲಿ ಐದು ವಿಕೆಟ್ಗಳನ್ನು ಪೂರ್ಣಗೊಳಿಸಿದರು.
ಶಾರ್ಜಾ ಪಿಚ್‌ನಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಎದುರಾಳಿ ತಂಡಕ್ಕೆ ನುಂಗಲಾರದ ತುತ್ತಾದರು. ಇಬ್ಬರು ಸ್ಪಿನ್ನರ್ಗಳ ಅದ್ಭುತ ಪ್ರದರ್ಶನದಿಂದಾಗಿ ಅಫ್ಘಾನಿಸ್ತಾನ 130 ರನ್ಗಳ ಅಂತರದ ಜಯ ಸಾಧಿಸಿದೆ.
ರಶೀದ್ ಖಾನ್ ಇನ್ನೊಂದು ವಿಕೆಟ್ ತೆಗೆದುಕೊಂಡಿದ್ದಾರೆ. ಇದು ಸ್ಕಾಟ್ಲೆಂಡ್‌ನ ಅಭೂತಪೂರ್ವ ಕುಸಿತವಾಗಿದೆ. 8.5 ಓವರ್‌ಗಳ ನಂತರ SCO 53/8.
ಬೌಲರ್‌ನ ತುದಿಯಲ್ಲಿ ರನ್ ಔಟ್ ಅವಕಾಶ ತಪ್ಪಿಹೋಯಿತು. ಅದು ಓವರ್‌ಥ್ರೋ ಮೂಲಕ ಬೌಂಡರಿ ಸೇರಿತು. ಆದರೆ ಮುಂದಿನ ಎಸೆತದಲ್ಲೆ ಅವರು ಮತ್ತೊಂದು ವಿಕೆಟ್ ಪಡೆಯುವ ಮೂಲಕ ತಮ್ಮ 5 ನೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 7.5 ಓವರ್‌ಗಳ ನಂತರ SCO 45/7.
ಪವರ್‌ಪ್ಲೇ ಮುಗಿಯುತ್ತಿದ್ದಂತೆ ಸ್ಕಾಟ್ಲೆಂಡ್ ತಮ್ಮ 6ನೇ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಹೆಣಗಾಡುತ್ತಿದೆ. ಮುನ್ಸೆ ಕೇವಲ 6 ರನ್ ಬಾರಿಸಿ ಔಟಾದರು. 6 ಓವರ್‌ಗಳ ನಂತರ SCO 37/5.
ಇನ್ನೊಂದು ವಿಕೆಟ್ ಪತನವಾಗಿದೆ. ಶಹಜಾದ್ ಮೊದಲ ಬಾಲ್‌ನಲ್ಲಿ ಶೂನ್ಯಕ್ಕೆ ಒಂದು ವಿಕೆಟ್ ಪಡೆದಿದ್ದಾರೆ. ಈ ಆಟ ನೋಡಿದರೆ ಸ್ಕಾಟ್ಲೆಂಡ್ 10 ಓವರ್‌ಗಳನ್ನು ಸಹ ಆಡುವುದು ಅನುಮಾನವಾಗಿದೆ. 4.3 ಓವರ್‌ಗಳ ನಂತರ SCO 30/4.
ಮುಜೀಬ್ ತಮ್ಮ ಎರಡನೇ ಓವರ್ನಲ್ಲಿ ಬರೋಬ್ಬರಿ 3 ವಿಕೆಟ್ ಪಡೆದು ಮಿಂಚಿದ್ದಾರೆ. ಸ್ಕಾಟ್ಲೆಂಡ್ ನಾಯಕ ಬೌಲ್ಡ್ ಆದರೆ ಉಳಿದ ಇನ್ನಿಬ್ಬರು ಬ್ಯಾಟರ್ಗಳ ಎಲ್ಬಿಡಬ್ಲ್ಯೂ ಮೂಲಕ ತಮ್ಮ ವಿಕೆಟ್ ಒಪ್ಪಿಸಿ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಬೋಲ್ಡ್! ಮುಜೀಬ್ ಉರ್ ರೆಹಮಾನ್ ಸ್ಕಾಟ್ಲೆಂಡ್ ನಾಯಕ ಕೈಲ್ ಕೊಯೆಟ್ಜರ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿದರು. ಕೋಟ್ಜರ್ 7 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 10 ರನ್ ಗಳಿಸಿದರು.
ಸ್ಕಾಟ್ಲೆಂಡ್ ತನ್ನ ಇನ್ನಿಂಗ್ಸ್ ಅನ್ನು ಉತ್ತಮವಾಗಿ ಮುಂದುವರಿಸಿದೆ. 3ನೇ ಓವರ್ ಅನ್ನು ಕೊನೆಗೊಳಿಸಲು ಕೋಟ್ಜರ್ ಎರಡು ಬೌಂಡರಿಗಳನ್ನು ಹೊಡೆದರು. SCO 27/0
ಜಾರ್ಜ್ ಮುನ್ಸೆ ಎರಡನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಆಡಿ ಫೋರ್ ಪಡೆದರು. ನಂತರ ಇನ್ನೊಂದು ರಿವರ್ಸ್ ಸ್ವೀಪ್‌ನೊಂದಿಗೆ ಸಿಕ್ಸರ್ ಗಳಿಸಿದರು. ಈ ಓವರ್‌ನಿಂದ 11 ರನ್. ಸ್ಕಾಟ್ಲೆಂಡ್ 1 ಓವರ್ನಲ್ಲಿ 11/0,
ಜಾರ್ಜ್ ಮುನ್ಸೆ ಮತ್ತು ಕೈಲ್ ಕೋಟ್ಜರ್ ಇಬ್ಬರು ಸ್ಕಾಟ್ಲೆಂಡ್ ಪರ ಓಪನರ್‌ಗಳಾಗಿದ್ದಾರೆ. ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಅಫ್ಘಾನಿಸ್ತಾನ ಪರ ಬೌಲಿಂಗ್ ಪ್ರಾರಂಭಿಸಲಿದ್ದಾರೆ.
ಅಂತಿಮ ಓವರ್ಗೆ ಅಫ್ಘಾನಿಸ್ತಾನ 4 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದೆ. ತಂಡದ ಆರಂಭಿಕರೆಲ್ಲರು ಅತ್ಯುತ್ತಮ ಇನ್ನಿಂಗ್ಸ್ ಆಡಿದರು ಇದರ ಫಲವಾಗಿ ತಂಡ ಬೃಹತ್ ಮೊತ್ತ ಕಲೆಹಾಕಿದೆ.
ಜೋಶ್ ಡೇವಿ ರೆಹಮಾನುಲ್ಲಾ ಗುರ್ಬಾಜ್ ಅವರ ಅದ್ಭುತ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಬ್ಯಾಟರ್ ಸಂಪೂರ್ಣ ಟಾಸ್ ಅಪ್ ಸ್ಲೈಸ್ ಆಡಿದರು. ಆದರೆ ಫೀಲ್ಡರ್ ಕೈಲ್ ಕೋಟ್ಜರ್ ಎಕ್ಸ್ಟ್ರಾ ಕವರ್‌ನಲ್ಲಿ ಸರಳ ಕ್ಯಾಚ್ ತೆಗೆದುಕೊಂಡರು. ಗುರ್ಬಾಜ್ 37 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿಯ ನೆರವಿನಿಂದ 46 ರನ್ ಗಳಿಸಿದರು.
ಮಾರ್ಕ್ ವ್ಯಾಟ್ ಅವರ ಅಂತಿಮ ಓವರ್‌ನಲ್ಲಿ 14 ರನ್‌ಗಳನ್ನು ಬಿಟ್ಟರು. ಜೊತೆಗೆ ಸ್ಪಿನ್ನರ್ 6 ಕ್ಕಿಂತ ಕಡಿಮೆ ರನ್ ರೇಟ್ನಲ್ಲಿ ತಮ್ಮ ಕೋಟಾ ಮುಗಿಸಿದೆಉ. ಅವರ ಅಂತಿಮ ಅಂಕಿ ಅಂಶಗಳು: 4-0-23-1
ವೀಲ್‌ನ ಅಂತಿಮ ಓವರ್, ಸಿಂಗಲ್ನಿಂದ ಆರಂಭವಾಗಿ ನಂತರ ದೊಡ್ಡ ಸಿಕ್ಸ್ ಬಂತು. ಮುಂದಿನ ಎಸೆತದಲ್ಲಿ ಡಬಲ್ ರನ್ ಬಂತು. ನಂತರ ಈ ಓವರ್‌ನಲ್ಲಿ ಎರಡು ಸಿಂಗಲ್‌ಗಳ ಆದಾರದ ಮೇಲೆ ಅಫ್ಘಾನಿಸ್ತಾನ 150 ರ ಗಡಿ ದಾಟಿದೆ.
ಷರೀಫ್ ತಮ್ಮ ಖಾತೆಯ ಮೂರನೇ ಓವರ್ ಬೌಲ್ ಮಾಡಿದರು. ಮೊದಲ ಚೆಂಡಿನಲ್ಲಿ ಸಿಂಗಲ್. ನಜೀಬ್ ಮತ್ತು ಗುರ್ಬಾಜ್ ಇಲ್ಲಿ ಉತ್ತಮವಾದ ಸಣ್ಣ ಪಾಲುದಾರಿಕೆಯನ್ನು ನಿರ್ಮಿಸಿದ್ದಾರೆ. ನಂತರ ಒಂದು ದೊಡ್ಡ ಸಿಕ್ಸ್ನೊಂದಿಗೆ ಓವರ್ ಮುಕ್ತಾಯ
ವೀಲ್ ಅವರ ಮೂರನೇ ಓವರ್ ಸಿಂಗಲ್‌ನಿಂದ ಪ್ರಾರಂಭವಾಯಿತು. ನಂತರ ನಜೀಬ್ ಈ ಓವರ್ನಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು.
ಗ್ರೀವ್ಸ್ 11 ನೇ ಓವರ್ ಬೌಲ್ ಮಾಡಿದರು. ಮೊದಲ ಬಾಲ್‌ನಲ್ಲಿ ಗುರ್ಬಾಜ್ ಅತ್ಯಂತ ವೇಗವಾಗಿ ಸಿಂಗಲ್ ರನ್ ಮಾಡಿದರು ತದನಂತರ ನಜೀಬ್ ಒಂದು ಉತ್ತಮ ಬೌಂಡರಿ ಬಾರಿಸಿದರು.
ಆರಂಭಿಕರನ್ನು ಕಳೆದುಕೊಂಡಿರುವ ಅಫ್ಘಾನಿಸ್ತಾನದ ಇನ್ನಿಂಗ್ಸ್ ನಿದಾನಗತಿಯಲ್ಲಿ ಸಾಗುತ್ತಿದೆ. ಈಗಾಗಲೇ 12ನೇ ಓವರ್ ಮುಗಿದಿದ್ದು ತಂಡದ ಸ್ಕೋರ್ 2 ವಿಕೆಟ್ ನಷ್ಟಕ್ಕೆ 98 ರನ್ ಆಗಿದೆ. 12ನೇ ಓವರ್ನ ಅಂತಿಮ ಎಸೆತದಲ್ಲಿ ಗುರ್ಬಾಜ್ 1 ಬೌಂಡರಿ ಬಾರಿಸಿ ತಂಡದ ರನ್ ವೇಗ ಹೆಚ್ಚಿಸಿದರು.
10 ಓವರ್‌ಗಳ ಅಂತ್ಯಕ್ಕೆ ಅಫ್ಘಾನ್ ತಂಡ ತನ್ನ ಇಬ್ಬರು ಆರಂಭಿಕರನ್ನು ಕಳೆದುಕೊಂಡಿದೆ. ಆದರೆ ಇಬ್ಬರು ಆರಂಭಿಕರು ಔಟಾಗುವ ಮುನ್ನ ತಂಡಕ್ಕೆ ಬೇಕಾದ ಅಡಿಪಾಯವನ್ನು ಹಾಕಿದ್ದಾರೆ. 10 ಓವರ್‌ಗಳ ಅಂತ್ಯಕ್ಕೆ ಅಫ್ಘಾನ್ ತಂಡ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ.
ಪವರ್‌ಪ್ಲೇಯ ಅಂತಿಮ ಓವರ್ ಅನ್ನು ಬೌಂಡರಿಯೊಂದಿಗೆ ಶಹಜಾದ್ ಪ್ರಾರಂಭಿಸಿದರು. ಆದರೆ ಪವರ್ ಪ್ಲೇ ಅಂತ್ಯಕ್ಕೆ ಅಫ್ಘಾನ್ ತಂಡ ಒಂದು ವಿಕೆಟ್ ಕಳೆದುಕೊಂಡಿದೆ. ಸಫ್ಯಾನ್ ಷರೀಫ್ ವಿಕೆಟ್ ಪಡೆದರು.
ಔಟ್! ಷರೀಫ್ ಶಹಜಾದ್ 22 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ
AFG 5.5 ಓವರ್‌ಗಳಲ್ಲಿ 54/1
5ನೇ ಓವರ್ನಲ್ಲಿ ಅಫ್ಘಾನ್ ತಂಡಕ್ಕೆ ಬರೋಬ್ಬರಿ 16 ರನ್ಗಳು ಹರಿದುಬಂದವು. ಈ ಓವರ್ನಲ್ಲಿ ಆರಂಭಿಕರಿಬ್ಬರು ತಲಾ ಒಂದೊಂದು ಸಿಕ್ಸರ್ ಬಾರಿಸಿದರು.
ಅಫ್ಘಾನ್ ತಂಡದ ಇಬ್ಬರು ಆರಂಭಿಕರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ನಿಂದ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಈಗಾಗಲೇ 4 ಓವರ್ಗಳು ಮುಗಿದಿದ್ದು, ಬ್ಯಾಟಿಂಗ್ ತಂಡವು ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ.
2ನೇ ಓವರ್ನಲ್ಲಿ ಶಹಜಾದ್ ಹಾಗೂ ಹಜರತುಲ್ಲಾ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಮೇತ ತಂಡಕ್ಕೆ ಅಗತ್ಯವಾದ ರನ್ ಕೊಡುಗೆ ನೀಡಿದರು.
ಅಫ್ಘಾನಿಸ್ತಾನ ಇನ್ನಿಂಗ್ಸ್ ಆರಂಭಿಸಿದ ಹಜರತುಲ್ಲಾ ಮತ್ತು ಮೊಹಮ್ಮದ್ ಶಹಜಾದ್. ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ.
ಜಾರ್ಜ್ ಮ್ಯಾನ್ಸೆ, ಕೈಲ್ ಕೋಟ್ಜರ್, ಮ್ಯಾಥ್ಯೂ ಕ್ರಾಸ್, ರಿಚಿ ಬ್ಯಾರಿಂಗ್ಟನ್, ಕ್ಯಾಲಮ್ ಮೆಕ್ಲಿಯೋಡ್, ಮೈಕೆಲ್ ಲಿಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫಯಾನ್ ಷರೀಫ್, ಬ್ರಾಡ್ಲಿ ವೀಲ್
ಹಜರತುಲ್ಲಾ, ಮೊಹಮ್ಮದ್ ಶಹಜಾದ್, ರಹಮಾನುಲ್ಲಾ ಗುರ್ಬಾಜ್, ಅಸ್ಗರ್ ಅಫ್ಘಾನ್, ನಜೀಬುಲ್ಲಾ ಅದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನಾಯಬ್, ರಶೀದ್ ಖಾನ್, ಕರೀಂ ಜನ್ನತ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್
ಟಾಸ್ ಗೆದ್ದ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಹೀಗಾಗಿ ಸ್ಕಾಟ್ಲೆಂಡ್ಗೆ ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದೆ.
Published On - 7:19 pm, Mon, 25 October 21