KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Oct 04, 2021 | 3:38 PM

Ajay Jadeja: ಭಾರತ ಕ್ರಿಕೆಟ್ ತಂಡದ ನಾಯಕನಾಗಲು ನಿಮ್ಮ ಸ್ವಂತ ಆಲೋಚನೆ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಹೊಂದಿರಬೇಕು. ಆದರೆ ಕೆಎಲ್ ರಾಹುಲ್ ನಲ್ಲಿ ನಾನು ಈ ರೀತಿಯ ಯಾವುದೇ ಗುಣಗಳನ್ನೂ ನೋಡಿಲ್ಲ.

KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ
KL Rahul
Follow us on

ಟೀಮ್ ಇಂಡಿಯಾ (Team India) ಮಾಜಿ ಬ್ಯಾಟ್ಸ್​ಮನ್ ಅಜಯ್ ಜಡೇಜಾ (Ajay Jadeja) ಪಂಜಾಬ್ ಕಿಂಗ್ಸ್ (Punjab Kings)​ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಅವರ ನಾಯಕತ್ವದ ಗುಣಗಳ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದಾರೆ. ಹೀಗೆ ಪ್ರಶ್ನೆಗಳನ್ನು ಎತ್ತಲು ಮುಖ್ಯ ಕಾರಣ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಬಿಂಬಿತವಾಗಿರುವುದು. ಈ ಬಗ್ಗೆ ಮಾತನಾಡಿರುವ ಜಡೇಜಾ, ಕೆಎಲ್​ಆರ್ ಅವರಿಗೆ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಅವರು ಪಂಜಾಬ್ ಕಿಂಗ್ಸ್​ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದರೂ ಯಶಸ್ವಿಯಾಗಿಲ್ಲ ಎಂದಿದ್ದಾರೆ. ಇದುವರೆಗೆ ರಾಹುಲ್ ಐಪಿಎಲ್​ನಲ್ಲಿ 25 ಪಂದ್ಯಗಳಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಪಂಜಾಬ್ ಕಿಂಗ್ಸ್​ ಗೆದ್ದಿರುವುದು ಕೇವಲ 11 ಬಾರಿ ಮಾತ್ರ. ಅಂದರೆ 14 ಪಂದ್ಯಗಳಲ್ಲಿ ರಾಹುಲ್ ಮುನ್ನಡೆಸಿದ ತಂಡ ಸೋಲನುಭವಿಸಿದೆ. ಇದೀಗ ಆರ್​ಸಿಬಿ ವಿರುದ್ದ ಸೋಲುವ ಮೂಲಕ ಈ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ ಪಂಜಾಬ್ 8 ರಲ್ಲಿ ಪರಾಜಯಗೊಂಡಿದೆ.

ರಾಹುಲ್ ನಾಯಕನಾಗಿ ಯಶಸ್ವಿಯಾಗುವುದು ಅನುಮಾನ. ಅದು ತುಂಬಾ ಶಾಂತ ಸ್ವಭಾವದಿಂದ ಮಾತನಾಡುತ್ತಾರೆ. ಅವರ ನಡವಳಿಕೆ ಬಹಳ ಮೃದುವಾಗಿರುತ್ತದೆ. ಈ ಗುಣಗಳು ನಿಮ್ಮನ್ನು ಆಟದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಮಾಡಬಹುದು. ಆದರೆ ನಾಯಕನಾಗಿ, ಇದು ಪ್ರತಿ ಬಾರಿಯೂ ಕೆಲಸ ಮಾಡುವುದಿಲ್ಲ. ನೀವು ಕೆಎಲ್ ರಾಹುಲ್ ಅನ್ನು ನೋಡಿ, ಅವರು ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್​ ತಂಡದ ನಾಯಕರಾಗಿದ್ದಾರೆ. ಆದರೆ ಅವರು ಎಂದಿಗೂ ನಾಯಕ ಎಂದು ನಾನು ಭಾವಿಸುವುದಿಲ್ಲ. ಆರ್​ಸಿಬಿ ವಿರುದ್ದದ ಪಂದ್ಯದಲ್ಲಿ ತಂಡದಲ್ಲಿ ಮಾಡಲಾದ ಬದಲಾವಣೆಗಳನ್ನೇ ನೋಡಿ, ಕೆಎಲ್ ರಾಹುಲ್ ಇದನ್ನು ಮಾಡಿದ್ದಾರೆ ಎಂದು ನೀವು ಭಾವಿಸುತ್ತೀರಾ ? ಎಂದು ಜಡೇಜಾ ಪ್ರಶ್ನಿಸಿದರು.

ಭಾರತ ಕ್ರಿಕೆಟ್ ತಂಡದ ನಾಯಕನಾಗಲು ನಿಮ್ಮ ಸ್ವಂತ ಆಲೋಚನೆ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಹೊಂದಿರಬೇಕು. ಆದರೆ ಕೆಎಲ್ ರಾಹುಲ್ ನಲ್ಲಿ ನಾನು ಈ ರೀತಿಯ ಯಾವುದೇ ಗುಣಗಳನ್ನೂ ನೋಡಿಲ್ಲ. ಏಕೆಂದರೆ ಅವರು ತುಂಬಾ ಮೃದುವಾಗಿ ಮಾತನಾಡುತ್ತಾನೆ ಮತ್ತು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಾನೆ. ಮುಂದೊಂದು ದಿನ ರಾಹುಲ್ ಭಾರತ ತಂಡದ ನಾಯಕನಾದರೆ, ಅವರು ತಮ್ಮ ಜವಾಬ್ದಾರಿಯನ್ನು ದೀರ್ಘಕಾಲ ನಿರ್ವಹಿಸಬಹುದು ಎಂಬುದು ನಿಜ. ಏಕೆಂದರೆ ಎಲ್ಲವನ್ನೂ ಸರಿಹೊಂದಿಸುವ ವ್ಯಕ್ತಿ ಮಾತ್ರ ಈ ಹುದ್ದೆಯಲ್ಲಿ ದೀರ್ಘಕಾಲ ಉಳಿಯಬಹುದು. ಆದರೆ ಭಾರತೀಯ ನಾಯಕನಿಗೆ ತನ್ನದೇ ಆದ ಆಲೋಚನೆ ಇರಬೇಕು. ಏಕೆಂದರೆ ಐಪಿಎಲ್ ತಂಡದ ಕಮಾಂಡ್ ತೆಗೆದುಕೊಳ್ಳುವುದಕ್ಕೂ ಮತ್ತು ಭಾರತೀಯ ತಂಡದ ನಾಯಕತ್ವಕ್ಕೂ ದೊಡ್ಡ ವ್ಯತ್ಯಾಸವಿದೆ. ಹೀಗಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ರಾಹುಲ್ ಸಮರ್ಥರಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಅಜಯ್ ಜಡೇಜಾ ಹೇಳಿದರು.

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(Ajay Jadeja Questions KL Rahul’s Captaincy Skills)