AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಸ್ಮರಣೀಯ ಅರ್ಧಶತಕ; ಭಾರತದ ಇನ್ನಿಂಗ್ಸ್​ಗೆ ಭರವಸೆಯ ದೀಪವಿಟ್ಟ ಆಕಾಶ್

Akash Deep's Maiden Half-Century: ಓವಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಯುವ ವೇಗದ ಬೌಲರ್ ಆಕಾಶ್ ದೀಪ್ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಸಾಯಿ ಸುದರ್ಶನ್ ಅವರ ವಿಕೆಟ್ ಪತನದ ನಂತರ ರಾತ್ರಿ ಕಾವಲುಗಾರನಾಗಿ ಬ್ಯಾಟಿಂಗ್ ಮಾಡಿದ ಆಕಾಶ್, ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಅರ್ಧಶತಕವನ್ನು 70 ಎಸೆತಗಳಲ್ಲಿ ಬಾರಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನೂ ಕಟ್ಟಿದರು.

IND vs ENG: ಸ್ಮರಣೀಯ ಅರ್ಧಶತಕ; ಭಾರತದ ಇನ್ನಿಂಗ್ಸ್​ಗೆ ಭರವಸೆಯ ದೀಪವಿಟ್ಟ ಆಕಾಶ್
Akash Deep
ಪೃಥ್ವಿಶಂಕರ
|

Updated on:Aug 02, 2025 | 5:38 PM

Share

ಓವಲ್​ನಲ್ಲಿ (Oval Test) ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗದ ಬೌಲರ್ ಆಕಾಶ್ ದೀಪ್ (Akash Deep) ಸ್ಮರಣೀಯ ಇನ್ನಿಂಗ್ಸ್ ಆಡಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಚೊಚ್ಚಲ ಅರ್ಧಶತಕವನ್ನು (Maiden Half-Century) ಬಾರಿಸಿದ್ದಾರೆ. ಸಾಯಿ ಸುದರ್ಶನ್ ವಿಕೆಟ್ ಪತನದ ಬಳಿಕ ನೈಟ್‌ವಾಚ್‌ಮನ್ ಬ್ಯಾಟಿಂಗ್​ಗೆ ಬಂದಿದ್ದ ಆಕಾಶ್, ಎರಡನೇ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದರು. ಇದೀಗ ಮೂರನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೆ ಅರ್ಧಶತಕದ ಜೊತೆಯಾಟ ಕಟ್ಟಿರುವ ಆಕಾಶ್ ವೈಯಕ್ತಿಕವಾಗಿಯೂ ಅರ್ಧಶತಕ ಬಾರಿಸಿದ್ದಾರೆ. 70 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ ಆಕಾಶ್ ತಮ್ಮ ಇನ್ನಿಂಗ್ಸ್​ನಲ್ಲಿ ಇದುವರೆಗೆ 9 ಬೌಂಡರಿಗಳನ್ನು ಬಾರಿಸಿದ್ದಾರೆ.

ಮೇಲೆ ಹೇಳಿದಂತೆ 70 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕ ಬಾರಿಸಿದ ಆಕಾಶ್, ಯಶಸ್ವಿ ಜೈಸ್ವಾಲ್ ಅವರೊಂದಿಗೆ 107  ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಭಾರತದ ಸ್ಕೋರ್ 170 ರ ಗಡಿ ದಾಟಿದೆ. ಆದಾಗ್ಯೂ ಆಕಾಶ್ ತಮ್ಮ ಅರ್ಧಶತಕದ ಬಳಿಕ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಅವರು 94 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 66 ರನ್ ಬಾರಿಸಿ ಔಟಾದರು.

2011 ರ ನಂತರ ಮೊದಲ  ಅರ್ಧಶತಕ

ಈ ಅರ್ಧಶತಕದೊಂದಿಗೆ ಆಕಾಶ್ ದೀಪ್, 2011 ರ ನಂತರ ನೈಟ್‌ವಾಚ್‌ಮನ್ ಆಗಿ ಐವತ್ತು ಪ್ಲಸ್ ರನ್ ಬಾರಿಸಿದ ಮೊದಲ ಭಾರತೀಯ ಆಟಗಾರನ ಎನಿಸಿಕೊಂಡಿದ್ದಾರೆ. ಆಕಾಶ್​ಗೂ ಮೊದಲು, ಅಮಿತ್ ಮಿಶ್ರಾ 2011 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನೈಟ್‌ವಾಚ್‌ಮನ್ ಆಗಿ 84 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಅಮಿತ್ ನಂತರ, 14 ವರ್ಷಗಳ ಕಾಲ ಯಾವುದೇ ಭಾರತೀಯ ಆಟಗಾರನಿಗೆ ನೈಟ್‌ವಾಚ್‌ಮನ್ ಆಗಿ ಐವತ್ತು ಪ್ಲಸ್ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಈಗ ಆಕಾಶ್ ದೀಪ್ ಈ ಅದ್ಭುತ ಸಾಧನೆ ಮಾಡಿದ್ದಾರೆ.

IND vs ENG: ಓವಲ್ ಟೆಸ್ಟ್ ನಡುವೆ ಟೀಂ ಇಂಡಿಯಾದಿಂದ ಹೊರಬಿದ್ದ ಜಸ್ಪ್ರೀತ್ ಬುಮ್ರಾ

ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಸ್ಕೋರ್

ಈ ಪಂದ್ಯಕ್ಕೂ ಮೊದಲು, ಆಕಾಶ್ ದೀಪ್ ಅವರ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಸ್ಕೋರ್ 31 ರನ್ ಆಗಿತ್ತು. ಇದೀಗ ಆಕಾಶ್ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕ ಸಿಡಿಸಿದ್ದಾರೆ. ಇಲ್ಲಿಯವರೆಗೆ ಟೀಂ ಇಂಡಿಯಾ ಪರ 10 ಪಂದ್ಯಗಳನ್ನು ಆಡಿರುವ ಅಕಾಶ್ ಬ್ಯಾಟಿಂಗ್​ನಲ್ಲಿ 150 ರನ್‌ ಬಾರಿಸಿದರೆ, 27 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಆಕಾಶ್ ದೀಪ್ 40 ಪಂದ್ಯಗಳಲ್ಲಿ 574 ರನ್ ಗಳಿಸಿದ್ದು, ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ. ಅದೇ ಸಮಯದಲ್ಲಿ, ಅವರು 28 ಲಿಸ್ಟ್-ಎ ಪಂದ್ಯಗಳಲ್ಲಿ 140 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 2 August 25