AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಂದೂವರೆ ವರ್ಷ ಡಿಪ್ರೆಶನ್‌ನಲ್ಲಿದ್ದೆ, ಮಾತಾಡೋಕೆ ಯಾರೂ ಇರಲಿಲ್ಲ’; ಅಮಿತ್ ಮಿಶ್ರಾ ನೋವಿನ ಕಥೆ

ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಆರಂಭಿಕ ಕ್ರಿಕೆಟ್ ವೃತ್ತಿಜೀವನದ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಭಾರತ ತಂಡದಿಂದ ಹೊರಬಿದ್ದ ನಂತರ ಒಂದೂವರೆ ವರ್ಷ ಖಿನ್ನತೆಯಿಂದ ಬಳಲಿದ್ದಾಗಿ ಹೇಳಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲೂ ಅವಕಾಶ ಕಳೆದುಕೊಂಡು, ಯಾರ ಬೆಂಬಲವಿಲ್ಲದೆ ಏಕಾಂಗಿಯಾಗಿ ಹೋರಾಡಿ, 2008ರಲ್ಲಿ ತಂಡಕ್ಕೆ ಭವ್ಯವಾಗಿ ಮರಳಿದ ಕಥೆ ಇದು. ಅವರ ಹೋರಾಟವು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

‘ಒಂದೂವರೆ ವರ್ಷ ಡಿಪ್ರೆಶನ್‌ನಲ್ಲಿದ್ದೆ, ಮಾತಾಡೋಕೆ ಯಾರೂ ಇರಲಿಲ್ಲ’; ಅಮಿತ್ ಮಿಶ್ರಾ ನೋವಿನ ಕಥೆ
ಅಮಿತ್ ಮಿಶ್ರಾ
ಪೃಥ್ವಿಶಂಕರ
|

Updated on: Oct 25, 2026 | 6:10 PM

Share

ಟೀಂ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಕ್ರಿಕೆಟ್ ಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ತಂಡದಿಂದ ಹೊರಬಿದ್ದಿದ್ದ ಅವರು, ಆ ಸಮಯದಲ್ಲಿ ಒಂದೂವರೆ ವರ್ಷ ಖಿನ್ನತೆಯಿಂದ ಬಳಲಿದ್ದೆ ಎಂದು ಹೇಳಿಕೊಂಡಿದ್ದಾರೆ. 2003ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಮಿತ್ ಮಿಶ್ರಾ, ಬಳಿಕ ಭಾರತ ತಂಡದಿಂದ ಹೊರಗುಳಿಯಬೇಕಾಯಿತು. ಆ ಸಮಯದಲ್ಲಿ ವೃತ್ತಿಜೀವನದಲ್ಲಿ ಏನು ತಪ್ಪಾಯಿತು ಅನ್ನೋದೇ ಅವರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಮಾಜಿ ಆರಂಭಿಕ ಆಟಗಾರ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಜೊತೆಗಿನ ಸಂವಾದದಲ್ಲಿ ತಮ್ಮ ಜೀವನದ ಕಷ್ಟದ ದಿನಗಳನ್ನು ಅವರು ಹಂಚಿಕೊಂಡಿದ್ದಾರೆ.

ಖಿನ್ನತೆಯಿಂದ ಬಳಲಿದ್ದೆ: ಅಮಿತ್ ಮಿಶ್ರಾ

‘ನಾನು ಒಂದೂವರೆ ವರ್ಷ ಡಿಪ್ರೆಶನ್‌ನಲ್ಲಿದ್ದೆ. ನನ್ನಿಂದ ಏನು ತಪ್ಪಾಯಿತು ಅನ್ನೋ ಯೋಚನೆಯೇ ಯಾವಾಗಲೂ ಕಾಡುತ್ತಿತ್ತು. ಎಲ್ಲ ಕಡೆ ಕ್ರಿಕೆಟ್ ಆಡುತ್ತಿದ್ದರೂ, ನಾನು ಎಲ್ಲಿ ತಪ್ಪು ಮಾಡಿದೆ ಅನ್ನೋ ಪ್ರಶ್ನೆ ಮಾತ್ರ ಮನಸ್ಸಿನಲ್ಲಿ ಇರುತ್ತಿತ್ತು. ಭಾರತ ತಂಡಕ್ಕೆ ಆಯ್ಕೆಯಾದ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ತಂಡದಿಂದ ಹೊರಬಿದ್ದ ಬಳಿಕ ನನ್ನ ವೃತ್ತಿಜೀವನ ನಿಧಾನವಾಗಿ ಕುಸಿಯತೊಡಗಿತು. ದೇಶೀಯ ಕ್ರಿಕೆಟ್‌ನಲ್ಲೂ ಅವಕಾಶಗಳು ಕಡಿಮೆಯಾದವು. ಜೊತೆಗೆ ನನ್ನ ಫಾರ್ಮ್ ಕೂಡ ಕೈಕೊಟ್ಟಿತ್ತು ಎಂದಿದ್ದಾರೆ.

ದೇಶೀಯ ತಂಡಗಳಲ್ಲೂ ಅವಕಾಶ ಸಿಗಲಿಲ್ಲ

‘ನಾನು ಭಾರತ ತಂಡದ ಪರ ಆಡಿದ್ದೆ. ಆಮೇಲೆ ತಂಡದಿಂದ ಹೊರಬಿದ್ದೆ. ದುಲೀಪ್ ಟ್ರೋಫಿಗೂ ಆಯ್ಕೆಯಾಗಲಿಲ್ಲ. ವಲಯಗಳ ಆಧಾರದಲ್ಲಿ ಆಯ್ಕೆಯಾಗುತ್ತಿದ್ದ ಭಾರತ ಎ ತಂಡದಲ್ಲೂ ಅವಕಾಶ ಸಿಗಲಿಲ್ಲ. ನನಗೆ ಏನಾಗುತ್ತಿದೆ ಅನ್ನೋದೇ ಅರ್ಥವಾಗುತ್ತಿರಲಿಲ್ಲ. ಒಂದು ಸೀಸನ್ ಕೂಡ ಚೆನ್ನಾಗಿ ಹೋಗಲಿಲ್ಲ. ಆ ಸಮಯದಲ್ಲಿ ಆಯ್ಕೆಗಾರರೊಬ್ಬರು, ನೀನು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಹೇಳಿದರು. ಆಗ ನನ್ನ ಆಟದ ಬಗ್ಗೆ ಗಂಭೀರವಾಗಿ ಯೋಚಿಸಿದೆ. ಭಾರತ ತಂಡಕ್ಕೆ ಮರಳುವ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದೆ, ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ ಅನ್ನೋದನ್ನು ಅರ್ಥಮಾಡಿಕೊಂಡೆ ಎಂದು ಹೇಳಿದ್ದಾರೆ.

ಮಾತಾಡೋಕೆ ಯಾರೂ ಇರಲಿಲ್ಲ

ಅಮಿತ್ ಮಿಶ್ರಾ ಅವರ ಮಾತುಗಳಲ್ಲಿ ಅತ್ಯಂತ ನೋವು ಮೂಡಿಸುವ ವಿಚಾರವೆಂದರೆ, ಆ ಕಷ್ಟದ ಸಮಯದಲ್ಲಿ ತಮ್ಮ ಮನಸ್ಸಿನ ಮಾತು ಹಂಚಿಕೊಳ್ಳಲು ಯಾರೂ ಇರಲಿಲ್ಲ ಅನ್ನೋದು. ‘ನನ್ನ ಕೆಟ್ಟ ಸಮಯದಲ್ಲಿ ಮಾತಾಡೋಕೆ ಯಾರೂ ಇರಲಿಲ್ಲ. ಮನೆಯವರಿಗೂ ಈ ವಿಚಾರ ಹೇಳಲು ಸಾಧ್ಯವಾಗಲಿಲ್ಲ. ಹೇಳಿದರೆ ಅವರು ಇನ್ನಷ್ಟು ಚಿಂತೆಗೆ ಒಳಗಾಗುತ್ತಾರೆ ಅನ್ನೋ ಭಯವಿತ್ತು. ಯಾರ ಬಳಿಯೂ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಎಲ್ಲವನ್ನೂ ನಾನೊಬ್ಬನೇ ಎದುರಿಸಬೇಕಾಯಿತು. ಆದರೆ, ಒಂದು ಹಂತದಲ್ಲಿ ಪ್ರದರ್ಶನ ಸುಧಾರಿಸದಿದ್ದರೆ ಪರಿಸ್ಥಿತಿ ಬದಲಾಗುವುದಿಲ್ಲ ಅನ್ನೋದನ್ನು ಅರಿತುಕೊಂಡೆ. ಬ್ಯಾಟಿಂಗ್‌ನಲ್ಲೂ ಸುಧಾರಣೆ ಮಾಡಿಕೊಳ್ಳುವಂತೆ ಸೂಚನೆ ಸಿಕ್ಕಾಗ, ಅದರ ಮೇಲೂ ಕೆಲಸ ಮಾಡಿದೆ.

‘ನಾನು ಚೆನ್ನಾಗಿ ಆಡಿದರೆ ಮಾತ್ರ ಅವಕಾಶಗಳು ಸಿಗುತ್ತವೆ ಅನ್ನೋದು ಅರ್ಥವಾಯಿತು. ಒಂದು ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಬಳಿಕ ದುಲೀಪ್ ಟ್ರೋಫಿಗೆ ಆಯ್ಕೆಯಾದೆ. ನನಗೆ ಯಾವುದೇ ಪ್ರಭಾವಿ ವ್ಯಕ್ತಿಯ ಬೆಂಬಲ ಇರಲಿಲ್ಲ. ಹೀಗಾಗಿ ಪ್ರತಿ ಬಾರಿಯೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲೇಬೇಕಿತ್ತು. ನನ್ನ ಕೋಚ್ ಕೂಡ ಇದೇ ಮಾತು ಹೇಳಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ಭರವಸೆ ನೀಡಿ ಮೋಸ ಮಾಡಿದ್ರು’; ಕೊಹ್ಲಿ ವಿರುದ್ಧ ಅಮಿತ್ ಮಿಶ್ರಾ ಗಂಭೀರ ಆರೋಪ

2008ರಲ್ಲಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್!

ಕಷ್ಟದ ದಿನಗಳನ್ನು ಎದುರಿಸಿದ ಅಮಿತ್ ಮಿಶ್ರಾ, ಕೊನೆಗೂ ಅಕ್ಟೋಬರ್ 2008ರಲ್ಲಿ ಭಾರತ ತಂಡಕ್ಕೆ ಮರಳಿದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಭಾರತದ ಪರ 22 ಟೆಸ್ಟ್, 36 ಏಕದಿನ ಪಂದ್ಯಗಳು ಮತ್ತು 10 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲೂ ಅಮಿತ್ ಮಿಶ್ರಾ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 162 ಪಂದ್ಯಗಳಲ್ಲಿ 174 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಪಡೆದ ಏಕೈಕ ಆಟಗಾರ ಎಂಬ ವಿಶೇಷ ದಾಖಲೆಯೂ ಅವರ ಹೆಸರಿನಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ