ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಭಾರತ 445 ರನ್ಗಳಿಗೆ ಆಲೌಟ್ ಆದರೆ, ಅತ್ತ ತಿರುಗೇಟು ನೀಡುತ್ತಿರುವ ಆಂಗ್ಲರು ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿದೆ. ಈ ಪಂದ್ಯದ ಮೂಲಕ ಭಾರತ ಪರ ಸರ್ಫರಾಜ್ ಖಾನ್ ಹಾಗೂ ಧ್ರುವ್ ಜುರೆಲ್ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದರು. ಇಬ್ಬರು ಕೂಡ ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ತಂದೆಗೆ ಆನಂದ್ ಮಹೀಂದ್ರ ಅವರು ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗುವ ಮೂಲಕ ಆನಂದ್ ಮಹೀಂದ್ರಾ ಮತ್ತೊಮ್ಮೆ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಥಾರ್‌ಗೆ ಉಡುಗೊರೆಯ ಬಗ್ಗೆ ಘೋಷಿಸಿದರು, “ಕಠಿಣ ಪರಿಶ್ರಮ, ಶೌರ್ಯ, ತಾಳ್ಮೆ ಮಗುವಿನಲ್ಲಿ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣ ಯಾವುದು?. ಸ್ಪೂರ್ತಿದಾಯಕ ಪೋಷಕರಾಗಿರುವುದರಿಂದ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ ಅದು ನನ್ನ ಸಂತೋಷ ಮತ್ತು ಗೌರವ,” ಎಂದು ಬರೆದುಕೊಂಡಿದ್ದಾರೆ.
ಟೆಸ್ಟ್ನಲ್ಲಿ ಅಶ್ವಿನ್ ಐತಿಹಾಸಿಕ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ..!
“Himmat nahin chodna, bas!”
Hard work. Courage. Patience.
What better qualities than those for a father to inspire in a child?
For being an inspirational parent, it would be my privilege & honour if Naushad Khan would accept the gift of a Thar. pic.twitter.com/fnWkoJD6Dp
— anand mahindra (@anandmahindra) February 16, 2024
ಸರ್ಫರಾಜ್ ಖಾನ್ ಅವರ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ರಾಜ್‌ಕೋಟ್‌ಗೆ ಬರುವುದಿಲ್ಲ, ಬಂದರೆ ಆತ ಒತ್ತಡಕ್ಕೆ ಒಳಗಾಗುತ್ತಾನೆ ಎಂದು ಅವರ ತಂದೆ ನೌಶಾದ್ ಖಾನ್ ಹೇಳಿದ್ದರಂತೆ. ಆದರೆ, ಇವರ ಈ ನಿರ್ಧಾರವನ್ನು ಬದಲಾಯಿಸಿದ್ದು ಸೂರ್ಯಕುಮಾರ್ ಯಾದವ್. ಸೂರ್ಯನ ಒಂದು ಸಂದೇಶದಿಂದಾಗಿ ಅವರು ರಾಜ್‌ಕೋಟ್‌ಗೆ ಬರುವಂತಾಯಿತು.
ಐತಿಹಾಸಿಕ ಜಯ ಸಾಧಿಸಿದ ಕಿವೀಸ್ಗೆ ನಂ.1 ಪಟ್ಟ; ಭಾರತಕ್ಕೆ ಹೆಚ್ಚಾಯ್ತು ಸಂಕಷ್ಟ..!
ಸೂರ್ಯಕುಮಾರ್ ಯಾದವ್ ತಮ್ಮ ಸಂದೇಶದಲ್ಲಿ, “ನಾನು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನಾನು ಕಳೆದ ವರ್ಷ ಮಾರ್ಚ್‌ನಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ, ನನ್ನ ಟೆಸ್ಟ್ ಕ್ಯಾಪ್ ಪಡೆಯುವಾಗ ನನ್ನ ಪೋಷಕರು ನನ್ನೊಂದಿಗೆ ಇದ್ದರು. ಈ ಕ್ಷಣ ಬಹಳ ವಿಶೇಷವಾಗಿತ್ತು. ಈ ಕ್ಷಣಗಳು ಪುನಃ ಬರುವುದಿಲ್ಲ. ಅದಕ್ಕಾಗಿಯೇ ನೀವು ಖಂಡಿತವಾಗಿಯೂ ಹೋಗಬೇಕು,” ಎಂದು ನೌಶಾದ್ ಖಾನ್ಗೆ ಮೆಸೇಜ್ ಮಾಡಿದ್ದರಂತೆ.
ರಾಜ್ಕೋಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸರ್ಫರಾಜ್ 62 ಎಸೆತಗಳಲ್ಲಿ 62 ರನ್ ಗಳಿಸಿದರು. ಆದರೆ, ಇವರು ಔಟಾಗಿದ್ದು ದುರಾದೃಷ್ಟಕರ ರೀತಿಯಲ್ಲಿತ್ತು. ಔಟ್ ಆಗುವ ಮೊದಲು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಕೆಲ ದಾಖಲೆ ಕೂಡ ನಿರ್ಮಾಣ ಮಾಡಿದರು. ಇದೀಗ ಮುಂದಿನ ಇನ್ನಿಂಗ್ಸ್ ಮತ್ತು ನಾಲ್ಕನೇ ಟೆಸ್ಟ್ನಲ್ಲಿ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕೆಲ ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ಯುವ ಪ್ಲೇಯರ್ಸ್ ಅವರನ್ನೇ ಭಾರತ ಈ ಪಂದ್ಯದಲ್ಲಿ ನೆಚ್ಚಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:19 am, Sat, 17 February 24