ಹುಡುಗಿಯಾಗಿ ಬದಲಾದ ಅನಯಾ ಬಂಗಾರ್​ಗೆ ಬಿಗ್ ಶಾಕ್ ನೀಡಿದ ಇಸಿಬಿ

Sanjay Bangar Daughter: ಅನಯಾ ಬಂಗಾರ್ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರಿ. ಸಂಜಯ್ ಬಂಗಾರ್ ಟೀಮ್ ಇಂಡಿಯಾ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಹುಡುಗಿಯಾಗಿ ಬದಲಾದ ಅನಯಾ ಬಂಗಾರ್​ಗೆ ಬಿಗ್ ಶಾಕ್ ನೀಡಿದ ಇಸಿಬಿ
ವಿರಾಟ್ ಕೊಹ್ಲಿ ಜೊತೆ ಅನನ್ಯಾ ಬಂಗಾರ್

Updated on: May 03, 2025 | 11:55 AM

ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ (Sanjay Bangar) ಅವರ ಪುತ್ರ ಆರ್ಯನ್ ಹುಡುಗಿಯಾಗಿ ಬದಲಾಗಿ ಅನಯಾ (Anaya Bangar) ಎಂದು ಹೆಸರು ಬದಲಿಸಿಕೊಂಡಿರುವುದು ಗೊತ್ತೇ ಇದೆ. ಹಾರ್ಮೋನ್ ಪರಿವರ್ತಿಸಿಕೊಂಡಿದ್ದು, ಹುಡುಗಿಯಾಗಿರುವ ಅನಯಾ ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು. ಈ ಹಿಂದೆ ಇಂಗ್ಲೆಂಡ್​ನ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದರಿಂದ ಅವರು ಮಹಿಳಾ ತಂಡದಲ್ಲಿ ಮುಂದುವರೆಯುವ ಅವಕಾಶವನ್ನು ಎದುರು ನೋಡಿದ್ದರು. ಆದರೀಗ ಟ್ರಾನ್ಸ್​ಜೆಂಡರ್​ಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಹಿಳಾ ಮತ್ತು ಬಾಲಕಿಯರ ಪಂದ್ಯಗಳಲ್ಲಿ ಟ್ರಾನ್ಸ್​ಜೆಂಡರ್ ಆಟಗಾರ್ತಿಯರು  ಭಾಗವಹಿಸುವುದನ್ನು ನಿಷೇಧಿಸಿದೆ. ಇತ್ತೀಚಿಗೆ ಇಂಗ್ಲೆಂಡ್​ನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಮಹಿಳೆಯರ ಕಾನೂನು ವ್ಯಾಖ್ಯಾನದಿಂದ ಟ್ರಾನ್ಸ್​​ಜೆಂಡರ್‌ಗಳನ್ನು ಹೊರಗಿಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನವೀಕರಿಸಿದ ಕಾನೂನನ್ನು ಅನುಸರಿಸಿ, ಟ್ರಾನ್ಸ್​ಜೆಂಡರ್​ಗಳ ಅರ್ಹತೆಯ ಕುರಿತಾದ ತಮ್ಮ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸುತ್ತಿರುವುದಾಗಿ ಇಸಿಬಿ ತಿಳಿಸಿದೆ.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಅದರಂತೆ ಜೈವಿಕ ಲೈಂಗಿಕತೆಯು ಮಹಿಳೆಯಾಗಿರುವ ಆಟಗಾರ್ತಿಯರಿಗೆ ಮಾತ್ರ ಮಹಿಳಾ ಕ್ರಿಕೆಟ್ ಮತ್ತು ಬಾಲಕಿಯರ ಕ್ರಿಕೆಟ್ ಪಂದ್ಯಗಳಲ್ಲಿ ಆಡಲು ಅರ್ಹತೆ ನೀಡಲಾಗುತ್ತದೆ ಎಂದು ಇಸಿಬಿ ಹೇಳಿಕೆ ತಿಳಿಸಿದೆ. ಟ್ರಾನ್ಸ್​ಜೆಂಡರ್ ಮಹಿಳೆಯರು ಮತ್ತು ಹುಡುಗಿಯರು ಮುಕ್ತ ಮತ್ತು ಮಿಶ್ರ ಕ್ರಿಕೆಟ್ ಆಡುವುದನ್ನು ಮುಂದುವರಿಸಬಹುದು. ಇಸಿಬಿಯ ಈ ನಿರ್ಧಾರದ ವಿರುದ್ಧ ಅನಯಾ ಬಂಗಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇಸಿಬಿ ಅಧಿಕೃತವಾಗಿ ಟ್ರಾನ್ಸ್ ಮಹಿಳೆಯರು ವೃತ್ತಿಪರ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಆಟದ ಮನರಂಜನಾ ಮತ್ತು ತಳಮಟ್ಟದಲ್ಲಿಯೂ ಭಾಗವಹಿಸುವುದನ್ನು ನಿಷೇಧಿಸಿದೆ. ಇದು ಕೇವಲ ನಿಯಮವಲ್ಲ. ಇದು ಒಂದು ಸಂದೇಶ. ನಿಮ್ಮ ಸಮರ್ಪಣೆ, ಪ್ರತಿಭೆ, ಶಿಸ್ತು ಅಥವಾ ವರ್ಷಗಳ ಪರಿವರ್ತನೆ ಏನೇ ಇರಲಿ, ನಿಮ್ಮನ್ನು ಇನ್ನೂ ಉತ್ತಮ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುವ ಸಂದೇಶ. ಈ ಕ್ರೀಡೆಗೆ ತನ್ನ ಸರ್ವಸ್ವವನ್ನು ವ್ಯಕ್ತಿಯಾಗಿ, ಇದು ವೈಯಕ್ತಿಕವೆನಿಸುತ್ತದೆ.

ನಾನು ಕೇವಲ ಟ್ರಾನ್ಸ್​ಜೆಂಡರ್ ಹುಡುಗಿ ಅಲ್ಲ, ನಾನು ಕ್ರಿಕೆಟಿಗ ಕೂಡ. ಇದೇ ಆಟದಲ್ಲಿ ನಾನು ತಾರತಮ್ಯ, ಕಿರುಕುಳವನ್ನು ಎದುರಿಸಿದ್ದೇನೆ. ಈಗ ಸಂಸ್ಥೆಗಳು ನಮ್ಮ ಅಸ್ತಿತ್ವವನ್ನು ಸಂಪೂರ್ಣವಾಗಿ ಅಳಿಸಿಹಾಕುವ ರೇಖೆಗಳನ್ನು ಎಳೆಯುತ್ತಿವೆ. ಅವರು ಪಿಚ್ ಅನ್ನು ನಿಯಂತ್ರಿಸಬಹುದು, ಆದರೆ ಅವರು ಎಂದಿಗೂ ನಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದು ನಮ್ಮ ಇನ್ನಿಂಗ್ಸ್‌ನ ಅಂತ್ಯವಲ್ಲ ಎಂದು ಅನಯಾ ಬಂಗಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅನಯಾ ಬಂಗಾರ್ ಪೋಸ್ಟ್​:

ಐಸಿಸಿ ನಿಲುವೇನು?

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಹ ಟ್ರಾನ್ಸ್​ಜೆಂಡರ್ ಆಟಗಾರ್ತಿಯರನ್ನು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ದೇಶೀಯ ಕ್ರಿಕೆಟ್‌ನಲ್ಲಿ ಈ ನಿಯಮವನ್ನು ಜಾರಿಗೆ ತಂದಿಲ್ಲ. ಮಂಡಳಿ ಬಯಸಿದರೆ, ಅದು ತಮ್ಮ ದೇಶದ ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಟ್ರಾನ್ಸ್‌ಜೆಂಡರ್ ಆಟಗಾರ್ತಿಯರನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್​ವೆಲ್

ಆದರೆ ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಇನ್ಮುಂದೆ ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಟ್ರಾನ್ಸ್‌ಜೆಂಡರ್ ಆಟಗಾರ್ತಿಯರನ್ನು ಆಯ್ಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್​ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಲ್ಲಿದ್ದ ಅನಯಾ ಬಂಗಾರ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 

 

 

Published On - 11:55 am, Sat, 3 May 25