The Hundred: 23 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್! 278ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಸುನಾಮಿ ಎಬ್ಬಿಸಿದ ರಸೆಲ್

| Updated By: ಪೃಥ್ವಿಶಂಕರ

Updated on: Aug 19, 2022 | 3:16 PM

Andre Russell: ಈ ಪಂದ್ಯದಲ್ಲಿ ರಸೆಲ್ 23 ಎಸೆತಗಳನ್ನು ಎದುರಿಸಿ 64 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ 278.26 ಸ್ಟ್ರೈಕ್ ರೇಟ್‌ನಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು.

The Hundred: 23 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್! 278ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಸುನಾಮಿ ಎಬ್ಬಿಸಿದ ರಸೆಲ್
Follow us on

ಆಂಡ್ರೆ ರಸೆಲ್ (Andre Russell), ಬೌಲರ್‌ಗಳು ಭಯಪಡುವ ಹೆಸರು. ಈ ಬ್ಯಾಟ್ಸ್‌ಮನ್‌ನ ಬ್ಯಾಟ್ ಅಬ್ಬರಿಸುತ್ತಿರುವಾಗ ಬೌಲರ್‌ಗಳಿಗೆ ತಲೆನೋವು ಶುರುವಾಗುತ್ತದೆ. ರಸೆಲ್ ಬ್ಯಾಟಿಂಗ್ ಆರಂಭಿಸಿದರೆಂದರೆ ಬೌಂಡರಿ, ಸಿಕ್ಸರ್​ಗಳ ಬಿರುಗಾಳಿಯಲ್ಲಿ ಎದುರಾಳಿ ತಂಡ ಕೋಚಿ ಹೋಗುವುದಂತೂ ಖಂಡಿತ. ಮತ್ತೊಮ್ಮೆ ರಸೆಲ್ ತನ್ನ ಬಿರುಸಿನ ಬ್ಯಾಟಿಂಗ್‌ನಿಂದ ಈ ಕೆಲಸ ಮಾಡಿ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿದ್ದಾರೆ. ಕೇವಲ ಐದು ಎಸೆತಗಳಲ್ಲಿ, ರಸ್ಸೆಲ್ ಕೋಲಾಹಲ ಸೃಷ್ಟಿಸಿದರು.

ಇಂಗ್ಲೆಂಡ್‌ನ ಟೂರ್ನಮೆಂಟ್ ದಿ ಹಂಡ್ರೆಡ್‌ ಪಂದ್ಯಾವಳಿಯಲ್ಲಿ ಸದರ್ನ್ ಬ್ರೇವ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಟೂರ್ನಿಯಲ್ಲಿ ರಸೆಲ್ ಮ್ಯಾಂಚೆಸ್ಟರ್ ಪರ ಆಡುತ್ತಿದ್ದಾರೆ. ಅವರು ತಮ್ಮ ಬಿರುಗಾಳಿಯ ಶೈಲಿಯಲ್ಲಿ ಬ್ಯಾಟ್ ಬೀಸಿ ತಮ್ಮ ತಂಡದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ತಂಡ ಮೂರು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಮತ್ತೊಂದೆಡೆ, ಸದರ್ನ್ ಬ್ರೇವ್ ತಂಡ 84 ಎಸೆತಗಳಲ್ಲಿ 120 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮ್ಯಾಂಚೆಸ್ಟರ್ 68 ರನ್‌ಗಳ ಜಯ ಸಾಧಿಸಿತು.

ಐದು ಎಸೆತಗಳಲ್ಲಿ 24 ರನ್

ಈ ಪಂದ್ಯದಲ್ಲಿ ರಸೆಲ್ 23 ಎಸೆತಗಳನ್ನು ಎದುರಿಸಿ 64 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ 278.26 ಸ್ಟ್ರೈಕ್ ರೇಟ್‌ನಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ ಕೊನೆಯ ಐದು ಎಸೆತಗಳಲ್ಲಿ ರಸೆಲ್ ಅದ್ಭುತ ಪ್ರದರ್ಶನ ನೀಡಿದರು. ಈ ಐದು ಎಸೆತಗಳಲ್ಲಿ ಮೈಕೆಲ್ ಹೊಗನ್ ಅವರ ಓವರ್​ನಲ್ಲಿ ರಸೆಲ್, ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ತಂಡ ಬೃಹತ್ ಸ್ಕೋರ್ ಪೆರಿಸುವಲ್ಲಿ ನೆರವಾದರು. ಈ ಮೂಲಕ ಹೊಗನ್ ಎಸೆದ ಕೊನೆಯ ಐದು ಎಸೆತಗಳಲ್ಲಿ ಅವರು ಒಟ್ಟು 24 ರನ್ ಗಳಿಸಿದರು. ಇದರ ಆಧಾರದ ಮೇಲೆ, ಮ್ಯಾಂಚೆಸ್ಟರ್ ತಂಡವು ಬೃಹತ್ ಸ್ಕೋರ್ ತಲುಪಲು ಸಾಧ್ಯವಾಯಿತು. ಆ ಗುರಿಯನ್ನು ಮುಟ್ಟಲು ಸರ್ಡಾನ್ ತಂಡಕ್ಕೆ ಅಸಾಧ್ಯವಾಯಿತು.

ಮಿಕ್ಕ ಬ್ಯಾಟ್ಸ್‌ಮನ್‌ಗಳ ಅದ್ಭುತ ಪ್ರದರ್ಶನ

ರಸೆಲ್ ಹೊರತಾಗಿ ಇನ್ನೂ ಇಬ್ಬರು ಮ್ಯಾಂಚೆಸ್ಟರ್ ಬ್ಯಾಟ್ಸ್‌ಮನ್‌ಗಳು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು. ಮ್ಯಾಂಚೆಸ್ಟರ್ ನಾಯಕ ಜೋಸ್ ಬಟ್ಲರ್ ತಮ್ಮ ಐಪಿಎಲ್ ಫಾರ್ಮ್ ಮುಂದುವರೆಸಿ ಅರ್ಧಶತಕ ಬಾರಿಸಿದರು. ಈ ಪಂದ್ಯದಲ್ಲಿ ಅವರು 42 ಎಸೆತಗಳಲ್ಲಿ 68 ರನ್ ಗಳಿಸಿದರು. ಬಟ್ಲರ್ ಐಪಿಎಲ್-2022ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ, ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರನ್ನು ಹೊರತುಪಡಿಸಿ, ಅವರ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿ 22 ಎಸೆತಗಳಲ್ಲಿ ನಾಲ್ಕು ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 38 ರನ್ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ ಸದರ್ನ್ ಬ್ರೇವ್ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಜಾರ್ಜ್ ಗಾರ್ಟನ್ ತಂಡದ ಪರ ಗರಿಷ್ಠ 25 ರನ್ ಗಳಿಸಿದರು. ನಾಯಕ ಜೇಮ್ಸ್ ವಿನ್ಸ್ 20 ರನ್ ಕೊಡುಗೆ ನೀಡಿದರು. ಪಾಲ್ ವಾಲ್ಟರ್ ಮೂರು ವಿಕೆಟ್ ಪಡೆದರು.

Published On - 3:15 pm, Fri, 19 August 22