ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ODI ಶತಕವನ್ನು ಗಳಿಸಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಮೊದಲ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಸದ್ಯ ವಿರಾಟ್ ಕೊಹ್ಲಿಯ ಐತಿಹಾಸಿಕ ಸಾಧನೆ ಬಳಿಕ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕಾಲೆಳೆದಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡ್ನ್ಸ್ಲ್ಲಿ ನಡೆದ ಪಂದ್ಯದಲ್ಲಿ ತನ್ನ 49 ನೇ ODI ಶತಕದ ನಂತರ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆದಿದ್ದ ಮೊಹಮ್ಮದ್ ಹಫೀಜ್ರನ್ನು ಕೆಣಕಿದ್ದಾರೆ. ಹಫೀಜ್ರನ್ನು ಟ್ಯಾಗ್ ಮಾಡಿರುವ ಮೈಕಲ್ ವಾನ್, ‘ಮತ್ತೊಂದು ಸ್ವಾರ್ಥಿ ನೂರು’ ಎಂದು ತಮ್ಮ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Virat Kohli Century: 50ನೇ ಏಕದಿನ ಶತಕ; ಕ್ರಿಕೆಟ್ ದೇವರ ದಾಖಲೆ ಮುರಿದ ಕಿಂಗ್..!
49ನೇ ಏಕದಿನ ಶತಕದ ನಂತರ ವಿರಾಟ್ ಕೊಹ್ಲಿಯನ್ನು ಮೊಹಮ್ಮದ್ ಹಫೀಜ್ ಸ್ವಾರ್ಥಿ ಎಂದು ಕರೆದಿದ್ದರು. ನಾನು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್‌ನಲ್ಲಿ ಸ್ವಾರ್ಥದ ಭಾವನೆಯನ್ನು ಕಂಡಿದ್ದೇನೆ. ಇದು ಈ ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ ಸಂಭವಿಸಿದೆ. 49 ನೇ ಓವರ್‌ನಲ್ಲಿ ಅವರು ಶತಕವನ್ನು ತಲುಪಲು ಸಿಂಗಲ್ ತೆಗೆದುಕೊಳ್ಳಲು ನೋಡುತ್ತಿದ್ದರು. ಅವರು ತಂಡಕ್ಕಾಗಿ ಆಡಲಿಲ್ಲ.
Another selfish 100 @MHafeez22 😜😜😜😜
— Michael Vaughan (@MichaelVaughan) November 15, 2023
ರೋಹಿತ್ ಶರ್ಮಾ ಕೂಡ ಸ್ವಾರ್ಥಿ ಆಟವನ್ನು ಆಡಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಏಕೆಂದರೆ ಅವರು ಭಾರತ ತಂಡಕ್ಕಾಗಿ ಆಡುತ್ತಿದ್ದಾರೆ ಹೊರತು ತಮಗಾಗಿ ಅಲ್ಲ ಎಂದು ಈ ಹಿಂದೆ ಮೊಹಮ್ಮದ್ ಹಫೀಜ್ ಹೇಳಿದ್ದರು.
ಇದನ್ನೂ ಓದಿ: Virat Kohli: ಏಕದಿನದಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ..!
ಹಫೀಜ್ ಹೇಳಿಕೆಗಳನ್ನು ಅಲ್ಲಗಳೆದಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಭಾರತ ತಂಡವು ಅತ್ಯುತ್ತಮ ಕ್ರಿಕೆಟ್ ಆಡುವ 8 ತಂಡಗಳನ್ನು ಸೋಲಿಸಿದೆ. ಕಷ್ಟಕರ ಪಿಚ್‌ನಲ್ಲಿ ಸಹ ವಿರಾಟ್ ಕೊಹ್ಲಿ ತಮ್ಮ 50 ನೇ ODI ಶತಕವನ್ನು ಗಳಿಸಿದ್ದಾರೆ. ನಿಮ್ಮ ಹೇಳಿಕೆ ಸಂಪೂರ್ಣ ಅಸಂಬದ್ಧ ಎಂದು ಮೊಹಮ್ಮದ್ ಹಫೀಜ್ ವಿರುದ್ಧ ಮೈಕಲ್ ವಾನ್ ಕಿಡಿದ್ದಾರೆ.
ವಿರಾಟ್ ಕೊಹ್ಲಿ ಸ್ವಾರ್ಥಿ ಆಟಗಾರ ಎಂಬ ವಿಚಾರವಾಗಿ ಇಬ್ಬರು ಮಾಜಿ ಕ್ರಿಕೆಟಿಗರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ ಸಮರವೇ ನಡೆದಿತ್ತು. ಅದು ಈಗಲೂ ಮುಂದುವರೆದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ