Virat Kohli: ವಿರಾಟ್ ಕೊಹ್ಲಿಯ ಸಾಧನೆಯ ಪಯಣ ಇನ್ನು ಮುಗಿದಿಲ್ಲ: ಸೌರವ್ ಗಂಗೂಲಿ
IND vs NZ, ICC World Cup 2023: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಕಿಂಗ್ ಕೊಹ್ಲಿಯ ಈ ಸಾಧನೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ. ಅವರು ತಮ್ಮ ಸಾಧನೆಯ ಪಯಣ ಇನ್ನು ಮುಗಿದಿಲ್ಲ ಎಂದಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಕಿಂಗ್ ಕೊಹ್ಲಿಯ ಈ ಸಾಧನೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆ ಮಾಡಿದ್ದಾರೆ. 50ನೇ ಏಕದಿನ ಶತಕಗಳನ್ನು ಸಿಡಿಸಿದ ಏಕೈಕ ಆಟಗಾರರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅವರ 50ನೇ ಏಕದಿನ ಶತಕದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಇದು ಅದ್ಭುತ ಇನ್ನಿಂಗ್ಸ್. ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಅದ್ಭುತ ದಾಖಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಮತ್ತೊಂದು ಸ್ವಾರ್ಥಿ 100’: ವಿರಾಟ್ ಕೊಹ್ಲಿ 50ನೇ ಶತಕ, ಮೊಹಮ್ಮದ್ ಹಫೀಜ್ ಕಾಲೆಳೆದ ಮೈಕಲ್ ವಾನ್
ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಯಾರಾದರೂ ಮುರಿಯಲು ಸಾಧ್ಯವೇ ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸಿದ್ದು, ‘ನನಗೆ ಅದರ ಬಗ್ಗೆ ಗೊತ್ತಿಲ್ಲ. ಆದರೆ ಈ ಸಾಧನೆಯನ್ನು ಹಿಂದಿಕ್ಕಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಮತ್ತು ವಿರಾಟ್ ಕೊಹ್ಲಿ ತಮ್ಮ ಸಾಧನೆಯ ಪಯಣ ಇನ್ನು ಮುಗಿದಿಲ್ಲ ಎಂದಿದ್ದಾರೆ.
VIDEO | “It’s outstanding. (Virat Kohli’s) 50th ODI century is phenomenal,” says former Indian cricketer @SGanguly99 after Virat Kohli hit his 50th ODI century to break Sachin Tendulkar’s record of 49 centuries in World Cup semi-final match against New Zealand at Mumbai’s… pic.twitter.com/QVML5CKo4Z
— Press Trust of India (@PTI_News) November 15, 2023
ಭಾರತೀಯ ಕ್ರಿಕೆಟ್ ತಂಡದ ಆಟದ ಬಗ್ಗೆ ಮಾತನಾಡಿದ ಅವರು, ಮೆನ್ ಇನ್ ಬ್ಲೂ ಪ್ರದರ್ಶನದಿಂದ ತುಂಬಾ ಸಂತೋಷವಾಗಿದೆ. ‘ಭಾರತ ತಂಡ ನಿಜವಾಗಿಯೂ ಉತ್ತಮವಾಗಿ ಆಡುತ್ತಿದೆ. ತಂಡದಲ್ಲಿ ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ರೋಹಿತ್, ಗಿಲ್, ವಿರಾಟ್, ಅಯ್ಯರ್, ಬೌಲರ್‌ಗಳು, ಸ್ಪಿನ್ನರ್‌ಗಳು, ಇದು ಸಂಪೂರ್ಣ ತಂಡವಾಗಿದೆ. ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದಾರೆ. ಈ ಪಂದ್ಯವನ್ನು ಭಾರತ ಗೆಲ್ಲಲಿ ಮತ್ತು ನಂತರ ನಾವು ಫೈನಲ್ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕ ಹುಡುಗ ಈಗ ‘ವಿರಾಟ್’; ಕಿಂಗ್ ದಾಖಲೆಯ ಆಟಕ್ಕೆ ಕ್ರಿಕೆಟ್ ದೇವರ ಭಾವನಾತ್ಮಕ ಪೋಸ್ಟ್
ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿಯ ಶತಕವನ್ನು ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಸಾಧನೆಗೆ ಎದ್ದು ನಿಂತು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಕೊಹ್ಲಿಯ ಈ ಶತಕವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.