AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ಪಾಕ್ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ; ಖಚಿತ ಪಡಿಸಿದ ಬಿಸಿಸಿಐ

IND vs PAK, World Cup 2023: ಈ ಪಂದ್ಯಕ್ಕೂ ಮುನ್ನ ನಡೆಯಲ್ಲಿರುವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿರುವ ಕಲಾವಿದರ ಹೆಸರನ್ನು ಬಿಸಿಸಿಐ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವಿಶೇಷ ಪ್ರದರ್ಶನ ನೀಡಲಿದೆ ಎಂದು ಹೇಳಿದೆ.

ಭಾರತ- ಪಾಕ್ ಪಂದ್ಯಕ್ಕೂ ಮುನ್ನ ವರ್ಣರಂಜಿತ ಕಾರ್ಯಕ್ರಮ; ಖಚಿತ ಪಡಿಸಿದ ಬಿಸಿಸಿಐ
ಭಾರತ- ಪಾಕಿಸ್ತಾನ
ಪೃಥ್ವಿಶಂಕರ
|

Updated on:Oct 13, 2023 | 6:42 AM

Share

ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ ಹೈವೋಲ್ಟೇಜ್ ಕದನಕ್ಕಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಬದ್ಧವೈರಿಗಳ ಕಾಳಗಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಅಕ್ಟೋಬರ್ 14 ರಂದು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಈ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ ಲೋಕದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವೆಂದರೇ ಅದಕ್ಕೆ ಬೇರೆಯದ್ದೇ ಆದ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ವಿಶ್ವಕಪ್ (ICC World Cup 2023)​ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಹೀಗಾಗಿ ಈ ಪಂದ್ಯವನ್ನು ಮತ್ತಷ್ಟು ವಿಶೇಷಗೊಳಿಸುವ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ (BCCI), ಈ ಪಂದ್ಯ ಆರಂಭವಾಗುವುದಕ್ಕೂ ಮುನ್ನ ದೇಶದ ಸ್ಟಾರ್ ಕಲಾವಿದರ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ.

12:30ಕ್ಕೆ ಕಾರ್ಯಕ್ರಮ ಆರಂಭ

ಇದೀಗ ಬಿಸಿಸಿಐ ಈ ಪಂದ್ಯಕ್ಕೂ ಮುನ್ನ ನಡೆಯಲ್ಲಿರುವ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲಿರುವ ಕಲಾವಿದರ ಹೆಸರನ್ನು ಸಹ ಅಧಿಕೃತವಾಗಿ ಬಹಿರಂಗಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ವಿಶೇಷ ಪ್ರದರ್ಶನ ನೀಡಲಿದೆ ಎಂದು ಹೇಳಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆಯುವ ಈ ಕಾರ್ಯಕ್ರಮ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1:30ಕ್ಕೆ ಟಾಸ್ ನಡೆಯಲಿದ್ದು, 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ವೀಕ್ಷಿಸಲು ದೇಶದ ಹಲವು ದೊಡ್ಡ ಕಲಾವಿದರು, ರಾಜಕಾರಣಿಗಳೂ ಆಗಮಿಸಲಿದ್ದಾರೆ ಎಂದು ತಿಳಿಸಿದೆ.

ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಸಂಗೀತ ಸಮಾರಂಭ; ಸಚಿನ್, ರಜನಿಕಾಂತ್, ಅಮಿತಾಬ್​ ಉಪಸ್ಥಿತಿ..!

ಪಂದ್ಯದ ಪೂರ್ವ ಶೋನಲ್ಲಿ ಅರಿಜಿತ್ ಸಿಂಗ್ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ವರ್ಷದ ಐಪಿಎಲ್‌ನ ಸಮಾರೋಪ ಸಮಾರಂಭದಲ್ಲಿಯೂ ಅರಿಜಿತ್ ಸಿಂಗ್ ಕೂಡ ಪ್ರದರ್ಶನ ನೀಡಿದ್ದರು. ಆ ಪ್ರದರ್ಶನವೂ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿಯೇ ನಡೆದಿತ್ತು. ಅರಿಜಿತ್ ಅವರ ಹೊರತಾಗಿ, ಶಂಕರ್ ಮಹಾದೇವನ್ ಮತ್ತು ಪಂಜಾಬಿ ಗಾಯಕ ಸುಖ್ವಿಂದರ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಸಮಾರಂಭದ ಬಗ್ಗೆ ಮತ್ತಷ್ಟು ಮಾಹಿತಿ

  • ಬೆಳಗ್ಗೆ 10 ಗಂಟೆಯಿಂದಯೇ ರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಪ್ರವೇಶಿಸಲು ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ.
  • ಈ ಸಂಗೀತ ಕಾರ್ಯಕ್ರಮವೂ ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ.
  • ಪ್ರೇಕ್ಷಕರು ತಮ್ಮೊಂದಿಗೆ ಪರ್ಸ್, ಮೊಬೈಲ್ ಫೋನ್, ಕ್ಯಾಪ್ ಮತ್ತು ಔಷಧಿಗಳನ್ನು ಕ್ರೀಡಾಂಗಣಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ.
  • ಈ ಸಮಾರಂಭಕ್ಕೆ ಹೆಚ್ಚು ಮುಂಜಾಗೃತೆವಹಿಸಿರುವ ಗುಜರಾತ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಒಳಗೆ ವೈದ್ಯಕೀಯ ಮತ್ತು ಉಚಿತ ನೀರಿನ ವ್ಯವಸ್ಥೆ ಕೂಡ ಮಾಡಿದೆ.

ಉಭಯ ತಂಡಗಳಿಗೂ ಗೆಲುವು ಮುಖ್ಯ

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮೂರನೇ ಪಂದ್ಯ ಇದಾಗಿದೆ. ಉಭಯ ತಂಡಗಳು ಆಡಿದ ಎರಡೂ ಆರಂಭಿಕ ಪಂದ್ಯಗಳನ್ನು ಗೆದ್ದಿವೆ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಮಣಿಸಿದ್ದರೆ, ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತ್ತು. ಇತ್ತ ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿತು. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಪ್ರತಿಷ್ಠೆಯ ಕಣವಾಗಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸಲು ಬಯಸಿವೆ.

Published On - 6:42 am, Fri, 13 October 23