ಜೋ ರೂಟ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮೈದಾನದಲ್ಲಿ ಸದ್ಯಕ್ಕೆ ಎಲ್ಲವೂ ಅಪಶಕುನದಂತೆ ಕಾಣುತ್ತಿದೆ. ತವರು ನೆಲದಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಸೋತ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲು ಅನುಭವಿಸಿತು. ತಂಡದ ಈ ಫಲಿತಾಂಶಗಳು ಆತ್ಮಗೌರವಕ್ಕೆ ಧಕ್ಕೆಯುಂಟು ಮಾಡುವುದಲ್ಲದೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ರೂಟ್ ತಂಡಕ್ಕೆ ಹಾನಿಯುಂಟುಮಾಡುತ್ತಿದೆ. ಈಗಾಗಲೇ ಪಾಯಿಂಟ್ಸ್ ಪಟ್ಟಿಯಲ್ಲಿ ತೀರಾ ಹಿಂದುಳಿದಿರುವ ಆಂಗ್ಲರ ತಂಡಕ್ಕೆ ಇದೀಗ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಆಶಸ್ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್‌ಗಾಗಿ ಐಸಿಸಿ ಇಂಗ್ಲೆಂಡ್‌ನ ಅಂಕಗಳನ್ನು ಕಡಿತಗೊಳಿಸಿದೆ. ಆ ಟೆಸ್ಟ್‌ನಲ್ಲಿ ಐಸಿಸಿ ಈ ಶಿಕ್ಷೆಗೆ ಈಗಾಗಲೇ 5 ಅಂಕಗಳನ್ನು ಕಡಿತಗೊಳಿಸಿತ್ತು ಆದರೆ ಈಗ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ನಿಗಧಿತ ಸಮಯಕ್ಕೆ ಎಸೆಯಬೇಕಿದ್ದ ಓವರ್ಗಳನ್ನು ಎಸೆದಿರಲಿಲ್ಲ.ಹೀಗಾಗಿ ತಂಡದ 3 ಅಂಕಗಳನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 17, ಶುಕ್ರವಾರದಂದು ಐಸಿಸಿ ಇಂಗ್ಲೆಂಡ್‌ಗೆ ನೀಡಿದ ಶಿಕ್ಷೆಯ ಬಗ್ಗೆ ಹೇಳಿಕೆ ನೀಡಿದ್ದು ICC ಪತ್ರಿಕಾ ಪ್ರಕಟಣೆಯ ಪ್ರಕಾರ, “ಆಸ್ಟ್ರೇಲಿಯ ವಿರುದ್ಧದ ಮೊದಲ ಆಶಸ್ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್‌ಗಾಗಿ ಇಂಗ್ಲೆಂಡ್ 8 ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಕಡಿತಗೊಳಿಸಿದೆ. ಕಳೆದ ಶನಿವಾರ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಇದೇ ತಪ್ಪನ್ನು ಮಾಡಿದಕ್ಕೆ 5 WTC ಪಾಯಿಂಟ್ಗಳನ್ನು ದಂಡ ವಿಧಿಸಿತ್ತು.
ಬ್ರಿಸ್ಬೇನ್‌ನಲ್ಲಿ ಎಲ್ಲಾ ರೀತಿಯಲ್ಲೂ ನಷ್ಟ
ಬ್ರಿಸ್ಬೇನ್ ಟೆಸ್ಟ್ನ ನಾಲ್ಕನೇ ದಿನ ಇಂಗ್ಲೆಂಡ್ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಎದುರಿಸಬೇಕಾಯಿತು. ಇದರೊಂದಿಗೆ ಪ್ರವಾಸಿ ತಂಡ ಐದು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ. ಇಂಗ್ಲೆಂಡಿನ ಈ ದುಃಸ್ಥಿತಿಗೆ ಡಬಲ್ ಶಿಕ್ಷೆಯಿಂದ ಮತ್ತಷ್ಟು ನೋವಾಯಿತು. ನಂತರ ICC ನಿಧಾನಗತಿಯ ಓವರ್‌ರೇಟ್‌ಗಾಗಿ ಇಂಗ್ಲೆಂಡ್‌ಗೆ 5 ಅಂಕಗಳನ್ನು ಮತ್ತು ಇಡೀ ತಂಡದ ಪಂದ್ಯದ ಶುಲ್ಕದ 100% ಕಡಿತಗೊಳಿಸಿತು. ಈಗ ಸುಮಾರು ಒಂದು ವಾರದ ನಂತರ, ಅಡಿಲೇಡ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ ದಂಡದ ಬರೆ ಎಳೆಸಿಕೊಂಡಿದೆ.
16 ಅಂಕ ಗೆದ್ದರೂ 10 ಅಂಕ ಕಳೆದುಕೊಂಡಿತು
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಸೈಕಲ್ ಆಗಸ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಯಿತು. ಇಂಗ್ಲಿಷ್ ತಂಡವು 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ, ಆದರೆ ಅದು ಡ್ರಾ ಆಗಿದೆ. ಈ ಮೂಲಕ ತಂಡಕ್ಕೆ ಒಟ್ಟು 16 ಅಂಕ ಲಭಿಸಿತು. ಆದರೆ ನಿಧಾನಗತಿಯ ಓವರ್ ರೇಟ್ ನಿಂದಾಗಿ ಆಂಗ್ಲರ ತಂಡ ಈ ಪೈಕಿ ಒಟ್ಟು 10 ಅಂಕಗಳನ್ನು ಕಳೆದುಕೊಂಡಿದೆ. ಭಾರತದ ವಿರುದ್ಧ 2 ಅಂಕಗಳ ಹೊಡೆತವನ್ನೂ ಪಡೆದರು. ಈಗ ಇಂಗ್ಲೆಂಡ್ ಕೇವಲ 6 ಅಂಕಗಳನ್ನು ಹೊಂದಿದೆ.