- Kannada News Photo gallery Cricket photos Year Ender 2021 Aakash Chopra named his top five batters and bowlers in Test cricket for the year 2021
Best Batter sand Bowlers Of 2021: 2021ರ ಬೆಸ್ಟ್ ಬ್ಯಾಟ್ಸ್ಮನ್ ಮತ್ತು ಬೆಸ್ಟ್ ಬೌಲರ್ ಯಾರು ಗೊತ್ತೇ?: ಇಲ್ಲಿದೆ ನೋಡಿ
Akash Chopra: ಟೀಮ್ ಇಂಡಿಯಾ ಮಾಜಿ ಆರಂಭಿಕ ಆಕಾಶ್ ಚೋಪ್ರಾ 2021ರ ಸಾಲಿನ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಟಾಪ್ 5 ಬ್ಯಾಟರ್ ಮತ್ತು ಬೌಲರ್ ಅನ್ನು ಹೆಸರಿಸಿದ್ದಾರೆ. ಆಕಾಶ್ ಚೋಪ್ರಾ ತಮ್ಮ ಆಯ್ಕೆಯ ಟಾಪ್ 5 ಬೌಲರ್ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡಿದ್ದಾರೆ ಆದರೂ ಅಕ್ಷರ್ ಪಟೇಲ್ ಅವರನ್ನು ಹೊರಗಿಟ್ಟು ಅಚ್ಚರಿ ಮೂಡಿಸಿದ್ದಾರೆ.
Updated on:Dec 23, 2021 | 3:27 PM

ಹೊಸ ವರ್ಷಕ್ಕೆ ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ ಕ್ರಿಕೆಟ್ ವಲಯದಲ್ಲಿ ಈ 2021ನೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಯಾರು?, ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಯಾರು? ಎಂಬ ಅಂಕಿಅಂಶಗಳ ಹುಡುಕಾಟ ನಡೆಯುತ್ತಿದೆ. ಸದ್ಯ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಕಾಶ್ ಚೋಪ್ರಾ 2021ರ ಸಾಲಿನ ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಟಾಪ್ 5 ಬ್ಯಾಟರ್ ಮತ್ತು ಬೌಲರ್ ಅನ್ನು ಹೆಸರಿಸಿದ್ದಾರೆ.

ಆಕಾಶ್ ಚೋಪ್ರಾ ತಮ್ಮ ಆಯ್ಕೆಯ ಟಾಪ್ 5 ಬೌಲರ್ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡಿದ್ದಾರೆ ಆದರೂ ಅಕ್ಷರ್ ಪಟೇಲ್ ಅವರನ್ನು ಹೊರಗಿಟ್ಟು ಅಚ್ಚರಿ ಮೂಡಿಸಿದ್ದಾರೆ. 2021ರ ಸಾಲಿನಲ್ಲಿ ಅಶ್ವಿನ್ ಬರೋಬ್ಬರಿ 52 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಮೂಲಕ 2021ರ ಸಾಲಿನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್ ಅವರ ಹೆಸರೂ ನನ್ನ ಪಟ್ಟಿಯಲ್ಲಿದೆ ಎಂದಿದ್ದಾರೆ. 19 ಪಂದ್ಯಗಳಿಂದ ಅವರು ಒಟ್ಟು 32 ವಿಕೆಟ್ಗಳನ್ನು ಪಡೆದಿದ್ದಾರೆ. ಶ್ರೀಲಂಕಾ ಮತ್ತು ಭಾರತದಲ್ಲಿ ಟೆಸ್ಟ್ ಆಡಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಚೆನ್ನೈನಲ್ಲಿ ಟೀಮ್ ಇಂಡಿಯಾ ಎದುರು 5 ವಿಕೆಟ್ ಸಾಧನೆ ಮತ್ತು ಶ್ರೀಲಂಕಾ ವಿರುದ್ಧವು 5 ವಿಕೆಟ್ ಸಾಧನೆ ಮೆರೆದು ಗಮನ ಸೆಳೆದಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಯುವ ವೇಗದ ಬೌಲರ್ ಓಲ್ಲೀ ರಾಬಿನ್ಸನ್ ಈ ವರ್ಷ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಪ್ರಚಂಡ ಬೌಲರ್ ಆಗಿ ಬೆಳೆಯುತ್ತಿದ್ದಾರೆ. ಕೇವಲ 5 ಟೆಸ್ಟ್ ಪಂದ್ಯಗಳಿಂದ 28 ವಿಕೆಟ್ಗಳನ್ನು ಉರುಳಿಸಿರುವ ಅವರು ಭವಿಷ್ಯದ ತಾರೆ ಆಗಿ ಉಗಮಿಸಿದ್ದಾರೆ ಎಂದು ತಮ್ಮ ಆಯ್ಕೆ ಮೂರು ಅತ್ಯುತ್ತಮ ಬೌಲರ್ಗಳನ್ನು ಹೆಸರಿಸಿದ್ದಾರೆ.

ಈ ವರ್ಷ ಬೆಸ್ಟ್ ಬೌಲಿಂಗ್ ಹೊರತಂದ ಟಾಪ್ 2 ಬೌಲರ್ಗಳ ಪೈಕಿ ಭಾರತದ ಯುವ ವೇಗಿ ಮೊಹಮ್ಮದ್ ಸಿರಾಜ್ಗೆ ಎರಡನೇ ಸ್ಥಾನ ಕೊಟ್ಟಿದ್ದಾರೆ. ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು 2021ರ ಸಾಲಿನ ಶ್ರೇಷ್ಠ ಟೆಸ್ಟ್ ಬೌಲರ್ ಎಂದು ಜನಪ್ರಿಯ ಕಾಮೆಂಟೇಟರ್ ಕೂಡ ಆಗಿರುವ ಆಕಾಶ್ ಕರೆದಿದ್ದಾರೆ.

ಚೋಪ್ರಾ ಅವರ ಪ್ರಕಾರ 2021ರ ಬೆಸ್ಟ್ ಬ್ಯಾಟ್ಸ್ಮನ್ ಪೈಕಿ 5ನೇ ಸ್ಥಾನವನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರಿಗೆ ನೀಡಿದ್ದಾರೆ. ಇವರು 2021ರ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ತಂಡದ ದಿಮುತ್ ಕರುಣಾರತ್ನೆ ಕನಿಷ್ಠ 500 ರನ್ ಗಳಿಸಿದವರ ಪೈಕಿ ಅತ್ಯುತ್ತಮ ಸರಾಸರಿಯಲ್ಲಿ ಹೊಂದಿದ್ದಾರೆ.

ಫವಾದ್ ಅಲಾಮ್ ಈ ವರ್ಷದಲ್ಲಿ 7 ಪಂದ್ಯಗಳಾಡಿರುವ ಅವರು ಮೂರು ಶತಕಗಳೊಂದಿಗೆ 57.1ರ ಸರಾಸರಿಯಲ್ಲಿ 513 ರನ್ ಗಳಿಸಿದ್ದಾರೆ.ನನ್ನ ಮನಸಿನಲ್ಲಿರುವ ಮತ್ತೊಂದು ಹೆಸರು ಲಹಿರು ತಿರಿಮಾನ್ನೆ ಎಂದಿದ್ದಾರೆ. ಅವರು ಆಡಿದ 7 ಪಂದ್ಯಗಳಲ್ಲಿ 50.6 ರ ಸರಾಸರಿಯಲ್ಲಿ 659 ರನ್ ಗಳಿಸಿದ್ದಾರೆ.

2021ರ ತಮ್ಮ ಅಗ್ರ ಐವರು ಟೆಸ್ಟ್ ಪಂದ್ಯಗಳಲ್ಲಿ ಆಕಾಶ್ ಚೋಪ್ರಾ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ಗೂ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದರೆ.
Published On - 7:26 am, Sat, 18 December 21
