Ashes: ಹೇರ್ ಕಟ್ ಮಾಡಿಸಿಕೊಂಡು ಹಣ ಪಾವತಿಸಲಿಲ್ವ ಅಲೆಕ್ಸ್ ಕ್ಯಾರಿ? ಡೆಡ್ ಲೈನ್ ನೀಡಿದ ಕ್ಷೌರಿಕ..!

ENG vs AUS: ಮೂರನೇ ಟೆಸ್ಟ್​ನಲ್ಲಿ ಹುಟ್ಟಿಕೊಂಡಿರುವ ಹೊಸ ವಿವಾದದಿಂದಾಗಿ ಆಸೀಸ್ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ.

Ashes: ಹೇರ್ ಕಟ್ ಮಾಡಿಸಿಕೊಂಡು ಹಣ ಪಾವತಿಸಲಿಲ್ವ ಅಲೆಕ್ಸ್ ಕ್ಯಾರಿ? ಡೆಡ್ ಲೈನ್ ನೀಡಿದ ಕ್ಷೌರಿಕ..!
ಅಲೆಕ್ಸ್ ಕ್ಯಾರಿ, ಕ್ಷೌರಿಕ
Follow us
ಪೃಥ್ವಿಶಂಕರ
|

Updated on: Jul 09, 2023 | 11:23 AM

ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಸರಣಿ (Ashes 2023) ಆಟಕ್ಕಿಂತ ಹೆಚ್ಚಾಗಿ ಇತರ ಘಟನೆಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಆಸೀಸ್ ಆಟಗಾರರನ್ನು ಇಂಗ್ಲೆಂಡ್ ಪ್ರೇಕ್ಷಕರು ನಿಂದಿಸಿದನ್ನು ಹಿಡಿದು, ಬೈರ್​ಸ್ಟೋ (Jonny Bairstow) ರನ್​ ಔಟ್​ವರೆಗೆ ಮೊದಲೆರಡು ಟೆಸ್ಟ್​ ಪಂದ್ಯಗಳು ಸಾಕಷ್ಟು ಸುದ್ದಿಯಾಗಿದ್ದವು. ಇದೀಗ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಕೂಡ ಹೊಸ ವಿವಾದದೊಂದಿಗೆ ಸುದ್ದಿಯಾಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಆ್ಯಶಸ್ ಸರಣಿಗೆ ಇಂಗ್ಲೆಂಡ್ ಆತಿಥ್ಯವಹಿಸಿದೆ. ಆದರೆ ಆತಿಥೇಯ ಆಂಗ್ಲ ಪಡೆ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ. ಇದು ಇಂಗ್ಲೆಂಡ್ ತಂಡ ಹಾಗೂ ಅದರ ಅಭಿಮಾನಿಗಳ ನಿದ್ದೆಗೆಡಿಸಿದೆ. ಹೀಗಾಗಿ ಪಂದ್ಯ ನಡೆಯುವ ಪ್ರತಿದಿನ ಒಂದಿಲ್ಲೊಂದು ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಮೂರನೇ ಟೆಸ್ಟ್​ನಲ್ಲಿ ಹುಟ್ಟಿಕೊಂಡಿರುವ ಹೊಸ ವಿವಾದದಿಂದಾಗಿ ಆಸೀಸ್ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (Alex Carey) ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ.

ವಾಸ್ತವವಾಗಿ ಲಂಡನ್‌ನಲ್ಲಿರುವ ಕ್ಷೌರಿಕನೊಬ್ಬ, ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ವಿರುದ್ಧ ಮುಜುಗರದ ಆರೋಪವನ್ನು ಹೊರಿಸಿದ್ದಾನೆ. ಕ್ಷೌರಿಕ ಹೊರಿಸಿರುವ ಆರೋಪದ ಪ್ರಕಾರ, ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ನನ್ನ ಅಂಗಡಿಯಲ್ಲಿ ಹೇರ್ ಕಟ್ ಮಾಡಿಸಿಕೊಂಡು ಹಣ ಪಾವತಿಸದೆ ತೆರಳಿದ್ದಾರೆ ಎಂಬ ಸುದ್ದಿಯನ್ನು ಇಂಗ್ಲಿಷ್ ಟ್ಯಾಬ್ಲಾಯ್ಡ್ ‘ದಿ ಸನ್’ ಪ್ರಕಟಿಸಿದೆ.

ENG vs AUS: 47 ವರ್ಷಗಳ ಬಳಿಕ ಲಾರ್ಡ್ಸ್‌ ಮೈದಾನದಲ್ಲಿ ಆಸೀಸ್​ಗೆ ಮಣ್ಣು ಮುಕ್ಕಿಸಿದ ಇಂಗ್ಲೆಂಡ್..!

ಕ್ಷೌರಿಕನ ಆರೋಪವೇನು?

ಸುದ್ದಿಯಲ್ಲಿ ಪ್ರಕಟವಾಗಿರುವಂತೆ, ಕ್ಷೌರಿಕ ಆಡಮ್ ಮಹಮೂದ್ ಹೊರಿಸಿರುವ ಆರೋಪವೆಂದರೆ, ಹೆಡಿಂಗ್ಲಿ ಟೆಸ್ಟ್‌ನ ಮೊದಲ ದಿನದಾಟ ಮುಗಿದ ಬಳಿಕ ಅಲೆಕ್ಸ್ ಕ್ಯಾರಿ ಅವರು ತಮ್ಮ ಸಹ ಆಟಗಾರರಾದ ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಅವರೊಂದಿಗೆ ತಮ್ಮ ಸಲೂನ್‌ಗೆ ಬಂದರು. ಬಳಿಕ ಎಲ್ಲರೂ ಕೂದಲು ಮತ್ತು ಗಡ್ಡವನ್ನು ತೆಗೆಸಿಕೊಂಡರು. ಆ ಬಳಿಕ ಹಣ ಪಾವತಿಸುವ ವೇಳೆ ಅಲೆಕ್ಸ್ ಕ್ಯಾರಿ ತನ್ನ ಬಳಿ ಹಣವಿಲ್ಲ ಎಂದರು. ಸಲೂನ್‌ನಿಂದ ಆಸ್ಟ್ರೇಲಿಯಾ ಟೀಂ ತಂಗಿರುವ ಹೋಟೆಲ್‌ಗೆ ಕೇವಲ 5 ನಿಮಿಷಗಳ ದೂರವಿತ್ತು. ಹೀಗಾಗಿ ಕ್ಯಾರಿ ಹೋಟೆಲ್​ಗೆ ತೆರಳಿ ಹಣ ತಂದು ಕೊಡಬಹುದಿತ್ತು. ಅಥವಾ ನಗದು ಯಂತ್ರವೂ ಇತ್ತು. ಅದರಲ್ಲಿ ಕ್ಯಾರಿ ಹಣ ಪಾವತಿಸಬಹುದಿತ್ತು.

ಆದರೆ ಕ್ಯಾರಿ ಹಣವನ್ನು ವರ್ಗಾಯಿಸುವುದಾಗಿ ಹೇಳಿ ಸಲೂನ್​ನಿಂದ ತೆರಳಿದರು. ಆದರೆ ಇದುವರೆಗೂ ಕ್ಯಾರಿ ಕಣ ಪಾವತಿಸಿಲ್ಲ. ಬಹುಶಃ ಅವರು ಮರೆತಿರಬಹುದು. ಹೀಗಾಗಿ ನಾನು ಹಣ ಪಾವತಿಸಲು ಅಲೆಕ್ಸ್ ಕ್ಯಾರಿಗೆ ಸೋಮವಾರದವರೆಗೆ ಕಾಲಾವಕಾಶ ನೀಡಿದ್ದೇನೆ. ಒಂದು ವೇಳೆ ಕ್ಯಾರಿ 30 ಪೌಂಡ್​ಗಳನ್ನು ಪಾವತಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಲೂನ್​ನ ಕ್ಷೌರಿಕ ಆಡಮ್ ಮಹಮೂದ್ ಹೇಳಿದ್ದಾರೆ.

ಆಸೀಸ್ ತಂಡ ಹೇಳಿದ್ದೇನು?

ಆದರೆ, ಕ್ಷೌರಿಕ ಹೊರಿಸಿರುವ ಈ ಆರೋಪವನ್ನು ಆಸ್ಟ್ರೇಲಿಯಾ ತಂಡ ಸಂಪೂರ್ಣವಾಗಿ ನಿರಾಕರಿಸಿದೆ. ಈ ಬಗ್ಗೆ ಮಾತನಾಡಿರುವ ಸ್ಟೀವ್ ಸ್ಮಿತ್, ಲಂಡನ್‌ನಲ್ಲಿದ್ದಾಗ ಕ್ಷೌರಕ್ಕೆ ಕ್ಯಾರಿ ಹೋಗಿಲ್ಲ. ವಾರ್ನರ್ ಜೊತೆ ಕ್ಯಾರಿ ಸಲೂನ್​ಗೆ ತೆರಳಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಇಂಗ್ಲೆಂಡಿಗರು ಈ ರೀತಿಯ ಆರೋಪವನ್ನು ಏಕೆ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿರುವ ಸ್ಮಿತ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಬೈರ್​ಸ್ಟೋ ಅವರನ್ನು ರನ್​ ಔಟ್ ಮಾಡಿದ ಬಳಿಕ ಅಲೆಕ್ಸ್ ಕ್ಯಾರಿ ಇಂಗ್ಲೆಂಡ್ ಅಭಿಮಾನಿಗಳಿಗೆ ವಿಲನ್ ಆಗಿದ್ದಾರೆ. ಹೀಗಾಗಿ ಕ್ಯಾರಿಗೆ ವಂಚಕ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ