ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2022) ಭಾರತ ಕ್ರಿಕೆಟ್ ತಂಡ ಗೆಲುವಿನ ಮೂಲಕ ತನ್ನ ಅಭಿಯಾನ ಆರಂಭಿಸಿದೆ. ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬದ್ದವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮನಮಮೋಹಕ ಪ್ರದರ್ಶನ ನೀಡಿದ ಭಾರತ (India vs Pakistan) 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಮಿಂಚಿದರೆ, ಬ್ಯಾಟಿಂಗ್ನಲ್ಲಿ ಕೂಡ ಹಾರ್ದಿಕ್ ಸ್ಫೋಟಕ ಆಟವಾಡಿದರು. ರವೀಂದ್ರ ಜಡೇಜಾ ಹಾಗೂ 100ನೇ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಕೂಡ ಉಪಯುಕ್ತ ಕಾಣಿಕೆ ನೀಡಿದರು. ಕಠಿಣ ಟಾರ್ಗೆಟ್ ಅಲ್ಲದಿದ್ದರೂ ಭಾರತ ಗುರಿ ತಲುಪಲು ಕೊನೆಯ ಓವರ್ ವರೆಗೂ ಹೋರಾಡ ಬೇಕಾಯಿತು.
ಕೊನೆಯ 20ನೇ ಓವರ್ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್ನಲ್ಲಿದ್ದರು. ಬಾಬರ್ ಲೆಗ್ ಸ್ಪಿನ್ನರ್ ಮೊಹಮ್ಮದ್ ನವಾಜ್ಗೆ ಬೌಲಿಂಗ್ ನೀಡಿದರು. ಆದರೆ, ಅಚ್ಚರಿ ಎಂಬಂತೆ ಜಡೇಜಾ ಅವರು ನವಾಜ್ರ ಮೊದಲ ಎಸೆದಲ್ಲೇ ಕ್ಲೀನ್ ಬೌಲ್ಡ್ ಆದರು. ಈ ಮೂಲಕ 29 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿದ್ದ ಜಡ್ಡು 35 ರನ್ಗೆ ಔಟಾದರು. ಈ ಸಂದರ್ಭ ಕ್ರೀಸ್ಗೆ ಬಂದ ದಿನೇಶ್ ಕಾರ್ತಿಕ್ ಎರಡನೇ ಎಸೆತದಲ್ಲಿ 1 ರನ್ ಕಲೆಹಾಕಲಷ್ಟೆ ಸಾಧ್ಯವಾಯಿತು. ಹೀಗಾಗಿ 4 ಎಸೆತಗಲ್ಲಿ 6 ರನ್ ಬೇಕಾಗಿತ್ತು.
ಮೂರನೇ ಎಸೆತ ಹಾರ್ದಿಕ್ ಪಾಂಡ್ಯ ಕಡೆಯಿಂದ ಡಾಟ್ ಆಯಿತು. ಆಗ ಪಂದ್ಯದ ಕಾವು ಮತ್ತಷ್ಟು ಹೆಚ್ಚಿತು. ಒಂದು ದೊಡ್ಡ ಹೊಡೆತ ಭಾರತಕ್ಕೆ ಅತಿ ಮುಖ್ಯವಾಗಿತ್ತು. ಆದರೆ, ಈ ಒತ್ತಡವನ್ನು ಹಾರ್ದಿಕ್ ಅಚ್ಚುಕಟ್ಟಾಗಿ ನಿರ್ವಹಿಸಿದರು. 4ನೇ ಎಸೆತದ ಕ್ವಿಕ್ ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಅರಿತ ಪಾಂಡ್ಯ ಲಾಂಗ್ಆನ್ನಲ್ಲಿ ಫ್ಲಾಟ್ ಸಿಕ್ಸ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ಗಳ ಗೆಲುವು ಕಂಡಿತು. ಈ ಅಮೋಘ ಪ್ರದರ್ಶನಕ್ಕಾಗಿ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.
— Guess Karo (@KuchNahiUkhada) August 29, 2022
What a win for our #TeamIndia in this nail biting match against arch rivals!!
Congratulations for a flying start in Asia cup. #INDvsPAK pic.twitter.com/j93TOmBGkY
— Anurag Thakur (@ianuragthakur) August 28, 2022
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಮುಖ್ಯ ವಿಕೆಟ್ ಕಳೆದುಕೊಂಡಿತು. ನಾಯಕ ಬಾಬರ್ ಅಜಮ್ 10 ರನ್ ಗಳಿಸಿದ್ದಾಗ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು. ಫಖರ್ ಜಮಾನ್ ಕೂಡ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ರಿಜ್ವಾನ್ ಮತ್ತು ಇಫ್ತಿಕಾರ್ ನಡುವೆ 45 ರನ್ ಗಳ ಜೊತೆಯಾಟ ತಂಡಕ್ಕೆ ಕೊಂಚ ನೆಮ್ಮದಿ ನೀಡಿತು. ಆದರೆ ಹಾರ್ದಿಕ್ ಪಾಂಡ್ಯಾ 28 ರನ್ ಗಳಿಸಿದ್ದ ಇಫ್ತಿಕರ್ ಅವರನ್ನು ಔಟ್ ಮಾಡಿದರು. 42 ಎಸೆತಗಳಲ್ಲಿ 43 ರನ್ ಗಳಿಸಿದ್ದ ರಿಜ್ವಾನ್ ಮತ್ತು 2 ರನ್ ಗಳಿಸಿದ್ದ ಕುಶ್ದಿಲ್ ಶಾ ಅವರನ್ನು ಕೂಡ ಹಾರ್ದಿಕ್ ಪೆವಿಲಿಯನ್ಗೆ ಅಟ್ಟಿದರು.
ಕೊನೆಯ ಹಂತದಲ್ಲಿ ಭುವನೇಶ್ವರ್ ಕುಮಾರ್ಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ, ಧಹಾನಿ ಸಿಕ್ಸರ್ ಸಿಡಿಸಿ ಪಾಕ್ ಸ್ಕೋರ್ ಹೆಚ್ಚಿಸಿದರು. ಅಂತಿಮವಾಗಿ ಪಾಕಿಸ್ತಾನ 19.5 ಓವರುಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಭುವನೇಶ್ವರ್ 26 ರನ್ ಗೆ 4 ವಿಕೆಟ್ ಪಡೆದರೆ, ಹಾರ್ದಿಕ್ 3 ವಿಕೆಟ್ ಕಿತ್ತು ಮಿಂಚಿದರು.
Published On - 7:57 am, Mon, 29 August 22