Virat Kohli: ಪಾಕ್ ಜೆರ್ಸಿಯಲ್ಲಿ ಕೊಹ್ಲಿ ಮಿಂಚಿಂಗ್…!
India vs Pakistan: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು.
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತೇ ಇದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡದಲ್ಲೇ ಕೆಲ ಅಭಿಮಾನಿಗಳಿದ್ದಾರೆ. ಇನ್ನು ಕೊಹ್ಲಿಯ ಹವಾ ಪಾಕಿಸ್ತಾನದಲ್ಲೂ ಇರುವುದು ಕೂಡ ಗೊತ್ತೇ ಇದೆ. ಇವೆಲ್ಲದರ ನಡುವೆ ಭಾರತ – ಪಾಕಿಸ್ತಾನ್ ನಡುವಣ ಹೈವೊಲ್ಟೇಜ್ ಪಂದ್ಯದ ವೇಳೆ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಈ ಅಭಿಮಾನಿಯು ಪಾಕಿಸ್ತಾನ್ ತಂಡಕ್ಕೆ ಸಪೋರ್ಟ್ ಮಾಡಲು ಬಂದಿದ್ದರು. ಹೀಗಾಗಿಯೇ ಪಾಕಿಸ್ತಾನ್ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅತ್ತ ವಿರಾಟ್ ಕೊಹ್ಲಿಯ ಅಭಿಮಾನಿ ಕೂಡ ಆಗಿರುವ ಈ ಪಾಕ್ ಫ್ಯಾನ್ ತನ್ನ ಪಾಕಿಸ್ತಾನ್ ಜೆರ್ಸಿಗೆ ಕೊಹ್ಲಿಯ ಹೆಸರನ್ನು ಬರೆಸಿಕೊಂಡಿದ್ದರು. ಈ ಮೂಲಕ ಪಾಕ್ ತಂಡಕ್ಕೆ ಬೆಂಬಲ ಸೂಚಿಸುತ್ತಾ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸುತ್ತಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನಂಬರ್ 18 ಪಾಕಿಸ್ತಾನ್ ಜೆರ್ಸಿಯಲ್ಲಿದ್ದ ವಿರಾಟ್ ಕೊಹ್ಲಿ ಅಭಿಮಾನಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಫೋಟೋಗೆ ಭಾರತದ ಕಿಂಗ್ ಕೊಹ್ಲಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
A Pakistani fan with Virat Kohli’s Name Jersey in the stadium. pic.twitter.com/iGlmLh5LDw
— CricketMAN2 (@ImTanujSingh) August 28, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದ ಪಾಕ್ ಪಡೆಯು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದ್ದರು.