AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಟೀಮ್ ಇಂಡಿಯಾ ವಿರುದ್ದ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಪಾಕಿಸ್ತಾನ್

IND vs PAK: ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಟೀಮ್ ಇಂಡಿಯಾ ಪರ ಅಧ್ಭುತ ಬೌಲಿಂಗ್ ದಾಳಿ ಸಂಘಟಿಸಿದ  ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿದರು.

IND vs PAK: ಟೀಮ್ ಇಂಡಿಯಾ ವಿರುದ್ದ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಪಾಕಿಸ್ತಾನ್
Pakistan Team
TV9 Web
| Edited By: |

Updated on: Aug 28, 2022 | 11:48 PM

Share

India vs Pakistan, Asia Cup 2022: ಏಷ್ಯಾಕಪ್​ನ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದರು. ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪಾಕ್ ಆಟಗಾರರು ತೋಳಿಗೆ ಬ್ಲ್ಯಾಕ್ ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದರು. ಪಾಕಿಸ್ತಾನದ ಖೈಬರ್ ಪಖ್ತೂನ್, ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವಾರು ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಅಲ್ಲದೆ ಅನೇಕರು ಮಂದಿ ಮನೆ ಕಳೆದುಕೊಂಡು ಅತಂತ್ರರಾಗಿದ್ದಾರೆ.

ಈ ಪಾಕೃತಿಕ ವಿಪತ್ತಿನಲ್ಲಿ ಮರಣವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿ, ದೇಶದ ಜನರೊಂದಿಗೆ ನಾವಿದ್ದೇವೆ ಎಂದು ಆತ್ಮ ವಿಶ್ವಾಸ ತುಂಬಲು ಪಾಕ್ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದರು. ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಈ ಪ್ರವಾಹದಲ್ಲಿ 119 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬಲೂಚಿಸ್ತಾನದ ನಾಲ್ವರು, ಗಿಲ್ಗಿಟ್​ನ 6 ಮಂದಿ, ಖೈಬರ್ ಪಖ್ತೂನ್‌ನಿಂದ 31 ಮತ್ತು ಸಿಂಧ್ ಪ್ರಾಂತ್ಯದ 76 ಜನರು ಶನಿವಾರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರವಾಹದಿಂದಾಗಿ 110 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇನ್ನು 72 ಜಿಲ್ಲೆಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳೆಂದು ಘೋಷಿಸಲಾಗಿದೆ. ಹಾಗೆಯೇ ಜಿಯೋ ನ್ಯೂಸ್ ಮಾಹಿತಿಯ ಪ್ರಕಾರ, 9 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿವೆ.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಟೀಮ್ ಇಂಡಿಯಾ ಪರ ಅಧ್ಭುತ ಬೌಲಿಂಗ್ ದಾಳಿ ಸಂಘಟಿಸಿದ  ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿದರು. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಪರಿಣಾಮ ಪಾಕಿಸ್ತಾನ್ ತಂಡವು 19.5 ಓವರ್​ಗಳಲ್ಲಿ 147 ರನ್​ಗಳಿಗೆ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಕಣಕ್ಕಿಳಿದ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ:

ಪಾಕಿಸ್ತಾನ್ ತಂಡ: ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ

ಟೀಮ್ ಇಂಡಿಯಾ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!