ಪಾಕ್ ತಂಡ
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ತಂಡ ಸುಮಾರು ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ಏಷ್ಯನ್ ಗದ್ದುಗೆ ಏರಿದೆ. ದುಬೈನಲ್ಲಿ ನಡೆದ ಏಷ್ಯಾಕಪ್‌ನ (Asia Cup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿ ಶ್ರೀಲಂಕಾ ಪ್ರಶಸ್ತಿ ಗೆದ್ದುಕೊಂಡಿತು. ಈ ಮೂಲಕ ಶ್ರೀಲಂಕಾ 2014 ರಿಂದ ಮೊದಲ ಬಾರಿಗೆ ಏಷ್ಯನ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು. ಇದು ಲಂಕಾ ತಂಡದ ಆರನೇ ಏಷ್ಯಾಕಪ್ ಪ್ರಶಸ್ತಿಯಾಗಿದೆ. ಗ್ರೂಪ್ ಸುತ್ತಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲಿನ ನಂತರ ಪುಟಿದ್ದೇದ್ದ ಲಂಕಾ ತಂಡ ಯಾವುದೇ ಪಂದ್ಯದಲ್ಲಿ ಸೋಲನುಭವಿಸಲಿಲ್ಲ. ಜೊತೆಗೆ ಸೂಪರ್ 4ರಲ್ಲಿಯೂ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿತ್ತು.
ತಪ್ಪುಗಳ ಭಾರ ಹೊತ್ತ ಪಾಕಿಸ್ತಾನ
ಟೂರ್ನಿಯುದ್ದಕ್ಕೂ ಪಾಕಿಸ್ತಾನ ತಂಡ ಅಮೋಘ ಆಟ ಪ್ರದರ್ಶಿಸಿತು. ಆದರೆ ಫೈನಲ್‌ಗೂ ಮುನ್ನ ಅಡಿದ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಸೆಣಸಿ ಸೋಲನುಭವಿಸಿತ್ತು. ಫೈನಲ್‌ನಲ್ಲಿಯೂ ಅದೇ ಫಲಿತಾಂಶ ಹೊರಬಿತ್ತು. ಪಾಕ್ ತಂಡದ ಈ ಸೋಲಿಗೆ ಅವರ ಸ್ವಯಂಕೃತ ತಪ್ಪುಗಳೇ ಕಾರಣವಾದವು. ಈ ಫೈನಲ್ನಲ್ಲಿ ಪಾಕಿಸ್ತಾನ ತಂಡ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಎಲ್ಲಿಯೂ 100% ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನ ಸೋಲಿಗೆ ಕಾರಣಗಳೇನು?
- ಪಾಕ್ ತಂಡದ ಈ ಸೋಲಿಗೆ ಪ್ರಮುಖ ಕಾರಣ ತಂಡದ ನಾಯಕ ಬಾಬರ್ ಅಜಮ್. ಈ ಸರಣಿಯುದ್ದಕ್ಕೂ ಬಾಬರ್ ಬ್ಯಾಟ್ ಅಬ್ಬರಿಸಲೇ ಇಲ್ಲ. ಎಂದಿನಂತೆಯೇ ಈ ಪಂದ್ಯದಲ್ಲೂ ಬಾಬರ್ ಕೇವಲ ಕೇವಲ ಐದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಇನಿಂಗ್ಸ್‌ನ ಆರಂಭದಲ್ಲಿ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿದ ಕಾರಣ ಶ್ರೀಲಂಕಾಗೆ ಇದು ಲಾಭವಾಯಿತು.
- ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿ ಪಾಕಿಸ್ತಾನದ ಯಾವುದೇ ಬ್ಯಾಟ್ಸ್‌ಮನ್ ಅವಶ್ಯಕ ಇನ್ನಿಂಗ್ಸ್ ಆಡಲಿಲ್ಲ. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಉಳಿದಂತೆ ತಂಡದ ಏಳು ಬ್ಯಾಟ್ಸ್‌ಮನ್‌ಗಳು 10ಕ್ಕಿಂತ ಕಡಿಮೆ ವೈಯಕ್ತಿಕ ಸ್ಕೋರ್‌ನಲ್ಲಿ ಔಟಾದರು.
- ರಿಜ್ವಾನ್ ಕೂಡ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದೆ ತಂಡದ ಸೋಲಿಗೆ ಮತ್ತೊಂದು ಪ್ರಮುಖ ಕಾರಣವಾಯಿತು. ರಿಜ್ವಾನ್ ಬರೋಬ್ಬರಿ 49 ಎಸೆತಗಳನ್ನು ಎದುರಿಸಿ ಕೇವಲ 55 ರನ್ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ ಅವರು ಕೇವಲ ಒಂದು ಸಿಕ್ಸರ್ ಬಾರಿಸಲಷ್ಟೇ ಶಕ್ತರಾದರು. ಹೀಗಾಗಿ 171 ರನ್‌ಗಳ ಸ್ಕೋರ್ ಬೆನ್ನಟ್ಟಿದ ಪಾಂಕ್ ತಂಡಕ್ಕೆ ರಿಜ್ವಾನ್ ಬ್ಯಾಟಿಂಗ್ ಯಾವ ರೀತಿಯ ಸಹಾವನ್ನು ಮಾಡಲಿಲ್ಲ
- ಪಾಕಿಸ್ತಾನದ ಸೋಲಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಅವರ ಕಳಪೆ ಫೀಲ್ಡಿಂಗ್. 18ನೇ ಓವರ್ ನಲ್ಲಿ ಭಾನುಕಾ ರಾಜಪಕ್ಸೆ ನೀಡಿದ ಕ್ಯಾಚ್ ಅನ್ನು ಹ್ಯಾರಿಸ್ ರೌಫ್ ಕೈಬಿಟ್ಟರು. ಬಳಿಕ ಕೊನೆಯ ಓವರ್‌ನಲ್ಲೂ ಶಾದಾಬ್ ಮತ್ತು ಆಸಿಫ್ ನಡುವಿನ ಸಂವಹನದ ಕೊರತೆಯಿಂದಾಗಿ ಇಬ್ಬರು ಸೇರಿ ಕ್ಯಾಚ್ ಕೈಚೆಲ್ಲಿದರು. ಎರಡು ಜೀವದಾನ ಪಡೆದ ಭಾನುಕಾ ರಾಜಪಕ್ಸೆ 45 ಎಸೆತಗಳಲ್ಲಿ 71 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
- ವನಿಂದು ಹಸರಂಗ ಅವರನ್ನು ಪಾಕ್ ತಂಡ ಕಡೆಗಣಿಸಿದ್ದೆ ಅವರ ಸೋಲಿಗೆ ಮತ್ತೊಂದು ಕಾರಣವಾಗಿದೆ. ಮೊದಲು ಬ್ಯಾಟ್‌ನಿಂದ 21 ಎಸೆತಗಳಲ್ಲಿ 36 ರನ್‌ಗಳ ಕೊಡುಗೆ ನೀಡಿದ ಹಸರಂಗ, ಬಳಿಕ ಬೌಲಿಂಗ್ನಲ್ಲಿ ಒಂದೇ ಓವರ್ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು.