AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಹೌದು… ಸೋಲಿಗೆ ನಾನೇ ಕಾರಣ! ಸೋಲಿನ ಹೊಣೆ ಹೊತ್ತ ಪಾಕ್ ತಂಡದ ಸ್ಟಾರ್ ಆಲ್​ರೌಂಡರ್

Asia Cup 2022: ಪ್ರಶಸ್ತಿ ಪಂದ್ಯದ ಸೋಲಿಗೆ ಪಾಕ್ ಮಾಡಿದ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಪಾಕ್ ತಂಡದ ಸೋಲಿನ ಬಾರವನ್ನು ತಾನೋಬ್ಬನೇ ಹೊರುವುದಾಗಿ ತಂಡದ ಆಟಗಾರ ಹೇಳಿಕೊಂಡಿದ್ದಾನೆ.

Asia Cup 2022: ಹೌದು... ಸೋಲಿಗೆ ನಾನೇ ಕಾರಣ! ಸೋಲಿನ ಹೊಣೆ ಹೊತ್ತ ಪಾಕ್ ತಂಡದ ಸ್ಟಾರ್ ಆಲ್​ರೌಂಡರ್
TV9 Web
| Edited By: |

Updated on: Sep 12, 2022 | 3:28 PM

Share

ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ತಂಡ ಏಷ್ಯಾಕಪ್ (Asia Cup 2022) ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಫೈನಲ್‌ನಲ್ಲಿ ಪಾಕಿಸ್ತಾನ 23 ರನ್‌ಗಳಿಂದ ಶ್ರೀಲಂಕಾ ಎದುರು ಸೋಲನುಭವಿಸಿ 3ನೇ ಬಾರಿಗೆ ಎಷ್ಯನ್ ಚಾಂಪಿಯನ್ ಆಗುವ ಅವಕಾಶದಿಂದ ವಂಚಿತವಾಯಿತು. ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಸತತ ಎರಡನೇ ಬಾರಿಗೆ ಪಾಕಿಸ್ತಾನ (Pakistan Vs Sri Lanka) ತಂಡವನ್ನು ಸೋಲಿಸಿತು. ಇದಕ್ಕೂ ಮುನ್ನ ಸೂಪರ್ 4ರ ಕೊನೆಯ ಪಂದ್ಯದಲ್ಲಿ ಪಾಕ್ ತಂಡ ಮುಜುಗರದ ಸೋಲನುಭವಿಸಿತ್ತು. ಆದರೆ ಪ್ರಶಸ್ತಿ ಪಂದ್ಯದ ಸೋಲಿಗೆ ಪಾಕ್ ಮಾಡಿದ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಪಾಕ್ ತಂಡದ ಸೋಲಿನ ಬಾರವನ್ನು ತಾನೋಬ್ಬನೇ ಹೊರುವುದಾಗಿ ತಂಡದ ಆಟಗಾರ ಹೇಳಿಕೊಂಡಿದ್ದಾನೆ.

ಕ್ಯಾಚ್‌ ಬಿಟ್ಟಿದ್ದಕ್ಕೆ ಕ್ಷಮೆಯಾಚಿಸಿದ ಶಾದಾಬ್

ಫೈನಲ್‌ನಲ್ಲಿ ತಂಡ ಸೇರಿಕೊಂಡಿದ್ದ ಶಾದಾಬ್, ಸೋಲಿನ ನಂತರ ಟ್ವೀಟ್ ಮಾಡಿ, ಕ್ಷಮಿಸಿ, ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ನಾನು ನನ್ನ ತಂಡವನ್ನು ನಿರಾಸೆಗೊಳಿಸಿದೆ. ನಸೀಮ್, ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್ ಮತ್ತು ಇಡೀ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಮೊಹಮ್ಮದ್ ರಿಜ್ವಾನ್ ದಿಟ್ಟ ಹೋರಾಟ ನಡೆಸಿದರು. ಇಡೀ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿತು ಎಂದಿದ್ದಾರೆ. ಜೊತೆಗೆ ಫೈನಲ್​ಗೆ ಶ್ರೀಲಂಕಾ ತಂಡವನ್ನು ಶಾದಾಬ್ ಅಭಿನಂದಿಸಿದ್ದಾರೆ.

ವಾಸ್ತವವಾಗಿ, ಸೂಪರ್ 4 ರ ಕೊನೆಯ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆ ಪಂದ್ಯದಲ್ಲಿ ಶ್ರೀಲಂಕಾ, ಪಾಕ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ಶಾದಾಬ್ 4 ಓವರ್‌ ಬೌಲ್ ಮಾಡಿ 28 ರನ್ ನೀಡಿದ್ದರು. ಆ ಬಳಿಕ ಅವರು ಬ್ಯಾಟ್‌ನಿಂದ 8 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಫೀಲ್ಡಿಂಗ್​ನಲ್ಲಿ ದುಬಾರಿಯಾದ ಶಾದಾಬ್, ಲಂಕಾ ತಂಡದ ಮ್ಯಾಚ್ ವಿನ್ನರ್ ಭಾನುಕಾ ರಾಜಪಕ್ಸೆ ಅವರ ಕ್ಯಾಚ್ ಕೈಚೆಲ್ಲಿದರು. ಇದು ಪಾಕ್ ತಂಡಕ್ಕೆ ಸೋಲಿನ ಭಾರ ಹೊರುವಂತೆ ಮಾಡಿತು.

ಬಿಗ್ ಕ್ಯಾಚ್ ಕೈ ತಪ್ಪಿತು

ವಾಸ್ತವವಾಗಿ, ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ ಓವರ್‌ನಲ್ಲಿ 6 ವಿಕೆಟ್‌ಗೆ 170 ರನ್ ಗಳಿಸಿತು. ಆದರೆ ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೇವಲ 58 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ರಾಜಪಕ್ಸೆ ಜವಾಬ್ದಾರಿ ವಹಿಸಿಕೊಂಡು ಕೊನೆಯವರೆಗೂ ಮೈದಾನದಲ್ಲಿ ನಿಂತರು. ಅವರು 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಆದರೆ ರೌಫ್ ಎಸೆದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಶಾದಾಬ್ ರಾಜಪಕ್ಸೆ ಅವರ ಕ್ಯಾಚ್ ಅನ್ನು ಲಾಂಗ್ ಆನ್‌ನಲ್ಲಿ ಕೈಬಿಟ್ಟರು. ಆಗ ಅವರು 45 ರನ್ ಗಳಿಸಿ ಆಡುತ್ತಿದ್ದರು. ಇದಾದ ಬಳಿಕ ಮತ್ತೊಂದು ಕ್ಯಾಚ್ ಕೈಬಿಟ್ಟರು. ಬಳಿಕ 19ನೇ ಓವರ್‌ನಲ್ಲೂ ಎರಡನೇ ಕ್ಯಾಚ್ ಕೈಬಿಟ್ಟರು. ವಾಸ್ತವವಾಗಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶಾದಾಬ್, ಸಹ ಆಟಗಾರ ಆಸಿಫ್ ಅಲಿಗೆ ಡಿಕ್ಕಿ ಹೊಡೆದು ಚೆಂಡನ್ನು ಮಿಸ್ ಮಾಡಿಕೊಂಡರು.

ಅಂತಿಮ ಓವರ್​ನಲ್ಲಿ ಬ್ಯಾಟ್​ ಬೀಸುತ್ತಿದ್ದ ರಾಜಪಕ್ಸೆ, ಡೀಪ್ ಮಿಡ್‌ವಿಕೆಟ್‌ನಲ್ಲಿ ಬಿಗ್ ಶಾಟ್ ಆಡಿದರು. ಆಸಿಫ್ ಮತ್ತು ಶಾದಾಬ್ ಇಬ್ಬರೂ ಕ್ಯಾಚ್ ತೆಗೆದುಕೊಳ್ಳಲು ಓಡಿದರು. ಆಸಿಫ್ ಬಹುತೇಕ ಚೆಂಡನ್ನು ಹಿಡಿದಿದ್ದರು, ಆದರೆ ಶಾದಾಬ್ ಮಾಡಿದ ಡೈವ್, ಕ್ಯಾಚ್ ಕೈತಪ್ಪುವಂತೆ ಮಾಡಿತು. ಇತ್ತ ಶಾದಾಬ್ ಕೂಡ ಚೆಂಡನ್ನು ಹಿಡಿಯಲಾಗಲಿಲ್ಲ, ಅತ್ತ ಚೆಂಡನ್ನು ಆಸಿಫ್ ಕೈಯಲ್ಲೂ ಬಿಡಲಿಲ್ಲ. ಹೀಗಾಗಿ ಚೆಂಡು ಬೌಂಡರಿ ದಾಟಿ 6 ರನ್ ಗಳಿಸಿತು. ಶ್ರೀಲಂಕಾ ನೀಡಿದ 171 ರನ್‌ಗಳ ಗುರಿಗೆ ಉತ್ತರವಾಗಿ ಪಾಕಿಸ್ತಾನ ತಂಡವನ್ನು 147 ರನ್‌ಗಳಿಗೆ ಆಲೌಟ್​ ಆಯಿತು.

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​