IND vs PAK: ಭಾರತ- ಪಾಕ್ ಪಂದ್ಯಕ್ಕೆ ಮಳೆಕಾಟ; ಟಾಸ್ ವಿಳಂಬ ಸಾಧ್ಯತೆ

|

Updated on: Sep 02, 2023 | 2:11 PM

IND vs PAK: ಪಲ್ಲೆಕೆಲೆಯಲ್ಲಿ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದಾಗಿ ಉಭಯ ತಂಡಗಳ ನಡುವಿನ ಕದನದ ಟಾಸ್​ ವಿಳಂಬವಾಗಬಹುದು ಎಂದು ವರದಿಯಾಗಿದೆ. ವಾಸ್ತವವಾಗಿ ಈ ಮೊದಲೇ ಈ ಪಂದ್ಯಕ್ಕೆ ಮಳೆ ಕಾಟ ಕೊಡಲಿದೆ ಎಂದು ವರದಿಯಾಗಿದೆ. ಅದರಂತ ಪಂದ್ಯದ ದಿನದ ಮುಂಜಾನೆಯಿಂದಲೂ ಪಲ್ಲೆಕೆಲೆಯಲ್ಲಿ ಮಳೆ ಬೀಳುತ್ತಿದೆ.

IND vs PAK: ಭಾರತ- ಪಾಕ್ ಪಂದ್ಯಕ್ಕೆ ಮಳೆಕಾಟ; ಟಾಸ್ ವಿಳಂಬ ಸಾಧ್ಯತೆ
ಪಲ್ಲೆಕೆಲೆ ಮೈದಾನ
Follow us on

ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಕದನ ಇಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಅದಕ್ಕೂ ಮೊದಲು ಅಂದರೆ ಪಂದ್ಯ ಆರಂಭವಾವು ಅರ್ಧ ಗಂಟೆಗೂ ಮುನ್ನ ಟಾಸ್ ನಡೆಯಲ್ಲಿದೆ. ಆದರೆ ಪ್ರಸ್ತುತ ವರದಿಗಳ ಪ್ರಕಾರ, ಪಲ್ಲೆಕೆಲೆಯಲ್ಲಿ (Pallekele Weather Update) ಮಳೆ ಎಡಬಿಡದೆ ಸುರಿಯುತ್ತಿರುವುದರಿಂದಾಗಿ ಉಭಯ ತಂಡಗಳ ನಡುವಿನ ಕದನದ ಟಾಸ್​ ವಿಳಂಬವಾಗಬಹುದು ಎಂದು ವರದಿಯಾಗಿದೆ. ವಾಸ್ತವವಾಗಿ ಈ ಮೊದಲೇ ಈ ಪಂದ್ಯಕ್ಕೆ ಮಳೆ ಕಾಟ ಕೊಡಲಿದೆ ಎಂದು ವರದಿಯಾಗಿತ್ತು. ಅದರಂತೆ ಪಂದ್ಯದ ದಿನದ ಮುಂಜಾನೆಯಿಂದಲೂ ಪಲ್ಲೆಕೆಲೆಯಲ್ಲಿ ಮಳೆ ಬೀಳುತ್ತಿದೆ. ಆಗೊಮ್ಮೆ ಈಗೊಮ್ಮೆ ಮಳೆರಾಯ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದನಾದರೂ, ಪೂರ್ಣ ಪಂದ್ಯ ನಡೆಯುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪಲ್ಲೆಕೆಲೆಯಲ್ಲಿ ತುಂತುರು ಮಳೆಯಾಗುತ್ತದೆ. ಹೀಗಾಗಿ ಮೈದಾನದ ಪಿಚ್​ ಅನ್ನು ಹೊದಿಕೆಗಳಿಂದ ಮುಚ್ಚಲಾಗಿದೆ. ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ವರುಣ ಕೊಂಚ ವಿರಾಮ ತೆಗೆದುಕೊಂಡಿದ್ದ. ಹೀಗಾಗಿ ಪಿಚ್​ನಿಂದ ಹೊದಿಕೆಗಳನ್ನು ತೆಗೆಯಲಾಗಿತ್ತು. ಅಲ್ಲದೆ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಪಂದ್ಯ ಆರಂಭಕ್ಕೆ ಇನ್ನು 30 ನಿಮಿಷ ಬಾಕಿ ಇರುವಾಗ ಮತ್ತೆ ಮಳೆರಾಯ ಎಂಟ್ರಿಕೊಟ್ಟಿದ್ದಾನೆ. ಹೀಗಾಗಿ ಮತ್ತೆ ಪಿಚ್​ ಅನ್ನು ಹೊದಿಕೆಗಳಿಂದ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಕ್ಯಾಂಡಿಯಲ್ಲಿ ರೆಡ್ ಅಲರ್ಟ್​ ಘೋಷಣೆ

ಹವಾಮಾನ ಇಲಾಖೆ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿದಂತೆ ಕ್ಯಾಂಡಿಯಲ್ಲಿ ನಡೆಯಲಿರುವ ಹೆಚ್ಚಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡ್ಡಿಯುಂಟು ಮಾಡುವ ಆತಂಕವಿದೆ. ಇಂದು ನಡೆಯುತ್ತಿರುವ ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ದಿನದಂದು ಹಗಲಿನಲ್ಲಿ ಶೇಕಡ 70ರಷ್ಟು ಮಳೆಯಾಗುವ ಮುನ್ಸೂಚನೆಯಿದೆ. ಇನ್ನು ರಾತ್ರಿ ಸಂದರ್ಭದಲ್ಲಿ 87% ಭಾಗದಲ್ಲಿ ಮಳೆಯಾಗುವ ಸಂಭವವಿದೆ ಎಂದು ವರದಿಯಾಗಿದೆ. ಅಲ್ಲದೆ ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಳೆ ಸತತವಾಗಿ ಸುರಿಯುವ ಲಕ್ಷಣಗಳು ಇರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹವಾಮಾನ ಇಲಾಖೆ ನೀಡಿರುವ ವರದಿಯನ್ನು ನೋಡಿದರೆ, ಈ ಬಹು ನಿರೀಕ್ಷಿತ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗುವುದು ನಿಶ್ಚಿತ. ಕೋಟ್ಯಂತರ ಅಭಿಮಾನಿಗಳು ಕಾಯುತ್ತಿರುವ ಪಂದ್ಯ ಮಳೆಯಿಂದಾಗಿ ರದ್ದಾದರೆ ನಿರಾಸೆಯೂಂಟಾಗುವುದು ಖಂಡಿತ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sat, 2 September 23