6,6,4,6,4…! ಕೇವಲ 5 ಎಸೆತಗಳಲ್ಲಿ ಪಾಕ್ ಬೌಲರ್​ ಹುಟ್ಟಡಗಿಸಿದ ರೋಹಿತ್! ವಿಡಿಯೋ ನೋಡಿ

|

Updated on: Sep 11, 2023 | 7:19 AM

Rohit Sharma: ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ 56 ರನ್‌ಗಳ ಇನಿಂಗ್ಸ್ ಆಡಿದರು. ಒಂದು ಸಮಯದಲ್ಲಿ ರೋಹಿತ್ 50 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಿದ್ದರು. ಆದರೆ ಇದರ ಹೊರತಾಗಿಯೂ ಅವರು ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

6,6,4,6,4...! ಕೇವಲ 5 ಎಸೆತಗಳಲ್ಲಿ ಪಾಕ್ ಬೌಲರ್​ ಹುಟ್ಟಡಗಿಸಿದ ರೋಹಿತ್! ವಿಡಿಯೋ ನೋಡಿ
ರೋಹಿತ್ ಶರ್ಮಾ
Follow us on

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನಕ್ಕೆ ನಿರೀಕ್ಷೆಯಂತೆ ಮಳೆ ಅಡ್ಡಿಪಡಿಸಿದೆ. ಭಾರತದ ಅರ್ಧ ಇನ್ನಿಂಗ್ ಮುಗಿಯುವ ವೇಳಗೆ ಎಂಟ್ರಿಕೊಟ್ಟ ಮಳೆರಾಯ ಆನಂತರ ಆಟಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಈ ಪಂದ್ಯಕ್ಕೆ ಮೀಸಲು ದಿನವನ್ನು ಇರಿಸಲಾಗಿರುವುದರಿಂದ ಇಂದು ಪಂದ್ಯ ಪೂರ್ಣಗೊಳ್ಳಲಿದೆ. ಇನ್ನು ಭಾರತದ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ.. ಪಂದ್ಯದ ಆರಂಭಕ್ಕೂ ಮುನ್ನ ಬಾಬರ್ ಪಡೆಯ ಬೌಲರ್‌ಗಳನ್ನು ಯಾರ್ಯಾರು ಹೊಗಳಿದ್ದರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ಟೀಂ ಇಂಡಿಯಾದ (Team India) ಆರಂಭಿಕರು ನೀಡಿದ್ದಾರೆ. ರೋಹಿತ್ (Rohit Sharma) ಹಾಗೂ ಗಿಲ್ (Shubman Gill) ತಲಾ ಅರ್ಧಶತಕ ಸಿಡಿಸುವುದರೊಂದಿಗೆ ಟೀಂ ಇಂಡಿಯಾಕ್ಕೆ ಅದ್ಭುತ ಆರಂಭ ಒದಗಿಸಿಕೊಟ್ಟಿದ್ದಾರೆ. ಈ ಎರಡು ಅರ್ಧಶತಕಗಳಿಗೆ ಮಿಗಿಲಾಗಿ, ಈ ಇಬ್ಬರು ಆರಂಭಿಕರು ಪಾಕ್ ಬೌಲಿಂಗ್ ವಿಭಾಗದ ತ್ರಿವಳಿ ವೇಗಿಗಳನ್ನು ದಂಡಿಸಿದ ರೀತಿ ಮಾತ್ರ ಟೀಂ ಇಂಡಿಯಾ ಅಭಿಮಾನಿಗಳನ್ನು ಹುಚ್ಚೆದು ಕುಣಿಯುಂತೆ ಮಾಡಿತು. ವೇಗಿಗಳ ಹೊರತಾಗಿ ಸ್ಪಿನ್ ವಿಭಾಗಕ್ಕೆ ನಡುಕ ಹುಟ್ಟಿಸಿದ ರೋಹಿತ್, ಪಾಕ್ ತಂಡದ ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಅವರ 5 ಎಸೆತಗಳಲ್ಲಿ 26 ರನ್ ಚಚ್ಚಿದ್ದು ಮಾತ್ರ ರೋಹಿತ್ ಇನ್ನಿಂಗ್ಸ್​ನ ಹೈಲೈಟ್ಸ್ ಆಗಿತ್ತು.

ಭಾರತದ ಇನ್ನಿಂಗ್ಸ್​ನ 13ನೇ ಓವರ್‌ ಬೌಲ್ ಮಾಡಲು ಶಾದಾಬ್ ಖಾನ್ ಬಂದರು. ಈ ವೇಳೆ ಅವರ ಮೊದಲ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ಬಂದವು. ಆದರೆ ಇದಾದ ನಂತರ ರೋಹಿತ್ ಶರ್ಮಾ ಉಗ್ರರೂಪ ತಾಳಿ, ಶಾದಾಬ್ ಅವರ ನಾಲ್ಕನೇ ಎಸೆತವನ್ನು ಕೌವ್ಸ್ ಕಾರ್ನರ್​ನಲ್ಲಿ ಸಿಕ್ಸರ್ ಬಾರಿಸಿದರು. ಶಾದಾಬ್, ಮುಂದೆ ಬೌಲ್ ಮಾಡಿದ ಶಾರ್ಟ್ ಬಾಲ್ ಅನ್ನು ರೋಹಿತ್ ಸ್ಕ್ವೇರ್ ಲೆಗ್ ಓವರ್​ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಇನ್ನ ಈ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ರೋಹಿತ್, ಇದರ ನಂತರ, ಶಾದಾಬ್ ಖಾನ್ ಅವರ ಮುಂದಿನ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

56 ರನ್​ಗಳಿಗೆ ವಿಕೆಟ್ ಒಪ್ಪಿಸಿದ ರೋಹಿತ್

ಇನ್ನು ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧದ ಈ ಪಂದ್ಯದಲ್ಲಿ 56 ರನ್‌ಗಳ ಇನಿಂಗ್ಸ್ ಆಡಿದರು. ಒಂದು ಸಮಯದಲ್ಲಿ ರೋಹಿತ್ 50 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಿದ್ದರು. ಆದರೆ ಇದರ ಹೊರತಾಗಿಯೂ ಅವರು ಕೇವಲ 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಶಾದಾಬ್ ಖಾನ್, ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು. ಆದರೆ ಅದಕ್ಕೂ ಮೊದಲು ರೋಹಿತ್, ಶುಭ್​ಮನ್ ಅವರೊಂದಿಗೆ ಮೊದಲ ವಿಕೆಟ್‌ಗೆ 121 ರನ್​ಗಳ ಜೊತೆಯಾಟ ಹಂಚಿಕೊಂಡರು.

IND vs PAK: ಪಾಕ್ ತಂಡ ಮಾಡಿಕೊಂಡಿರುವ ಎಡವಟ್ಟಿನ ಲಾಭ ಪಡೆಯುತ್ತಾ ಟೀಂ ಇಂಡಿಯಾ?

ಮತ್ತೊಂದು ದಾಖಲೆ ಬರೆದ ರೋಹಿತ್

56 ರನ್‌ಗಳ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತೊಂದು ದೊಡ್ಡ ದಾಖಲೆ ಬರೆದಿದ್ದು, ಶಾಹೀನ್ ಅಫ್ರಿದಿ ಅವರ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ ಮೊದಲ ಬಾರಿಗೆ ಬ್ಯಾಟ್ಸ್‌ಮನ್ ಒಬ್ಬ, ಈ ಪಾಕಿಸ್ತಾನಿ ಬೌಲರ್ ವಿರುದ್ಧ ಮೊದಲ 6 ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ದಾಖಲೆಯನ್ನು ಹಿಟ್​ಮ್ಯಾನ್ ಬರೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 am, Mon, 11 September 23