ಭಾರತ- ಪಾಕ್ ಮುಖಾಮುಖಿಯಲ್ಲಿ ಯಾರು ಬೆಸ್ಟ್? ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಪಡೆ?
IND vs PAK: ಭಾರತ-ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ 1978ರಲ್ಲಿ ನಡೆದಿತ್ತು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 133 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತದ ಮೇಲೆ ಪಾಕ್ ತಂಡ ಮೇಲುಗೈ ಸಾಧಿಸಿದೆ. ಪಾಕಿಸ್ತಾನ 72 ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ 55 ಪಂದ್ಯಗಳನ್ನು ಗೆದ್ದಿದೆ.
ಏಕದಿನ ವಿಶ್ವಕಪ್ಗೂ ಮೊದಲು, ಭಾರತ ಹಾಗೂ ಪಾಕಿಸ್ತಾನ (India vs Pakistan) ಮತ್ತೊಮ್ಮೆ ಏಷ್ಯಾಕಪ್ 2023 (Asia Cup 2023) ರಲ್ಲಿ ಮುಖಾಮುಖಿಯಾಗುತ್ತಿವೆ . ಏಷ್ಯಾಕಪ್ ಅರ್ಹತಾ ಪಂದ್ಯಗಳ ನಂತರ ಸೆಪ್ಟೆಂಬರ್ 10 ರ ಭಾನುವಾರದಂದು ಸೂಪರ್ 4 ಸುತ್ತಿನಲ್ಲಿ ಬದ್ಧವೈರಿಗಳ ಕಾಳಗ ನಡೆಯಲ್ಲಿದೆ. ಈ ಪಂದ್ಯಕ್ಕೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸುತ್ತಿದ್ದು, ಈ ಹೈವೋಲ್ಟೇಜ್ ಕದನಕ್ಕೆ ಪಾಕ್ ತಂಡ ತನ್ನ ಆಡುವ ಹನ್ನೊಂದರ ಬಳಗವನ್ನು ಸಹ ಪ್ರಕಟಿಸಿದೆ. ಇತ್ತ ಟೀಂ ಇಂಡಿಯಾ (Team India) ಮಾತ್ರ ಎಂದಿನಂತೆ ಟಾಸ್ ಬಳಿಕ ತಂಡವನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಇನ್ನು ಕ್ರಿಕೆಟ್ ಲೋಕದಲ್ಲಿ ಈ ಉಭಯ ತಂಡಗಳ ಒಟ್ಟಾರೆ ಮುಖಾಮುಖಿ ನೋಡಿದಾಗ ಇಲ್ಲಿ ಪಾಕಿಸ್ತಾನ, ಭಾರತದ ಮೇಲೆ ಹಿಡಿತ ಸಾಧಿಸಿರುವುದನ್ನು ಕಾಣಬಹುದಾಗಿದೆ. ಆದರೆ ಕಳೆದ 10 ಪಂದ್ಯಗಳಲ್ಲಿ ಫಲಿತಾಂಶ ನೋಡುವುದಾದರೆ, ಭಾರತದ ಮುಂದೆ ಪಾಕ್ ಆಟ ನಡೆಯದಿರುವುದನ್ನು ನಾವು ನೋಡಬಹುದಾಗಿದೆ.
ಮುಖಾಮುಖಿಯಲ್ಲಿ ಯಾರು ಬೆಸ್ಟ್?
ಭಾರತ-ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ 1978ರಲ್ಲಿ ನಡೆದಿತ್ತು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 133 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತದ ಮೇಲೆ ಪಾಕ್ ತಂಡ ಮೇಲುಗೈ ಸಾಧಿಸಿದೆ. ಪಾಕಿಸ್ತಾನ 72 ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ 55 ಪಂದ್ಯಗಳನ್ನು ಗೆದ್ದಿದೆ. ಇನ್ನುಳಿದ 5 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಆದರೆ ಪಾಕಿಸ್ತಾನ ವಿರುದ್ಧದ ಕಳೆದ 10 ಪಂದ್ಯಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿರುವುದು ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ. ಟೀಂ ಇಂಡಿಯಾ ಇತ್ತೀಚೆಗೆ ಆಡಿರುವ 10ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ. ಇತ್ತ ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇಂದು ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ: ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ ಸ್ಟೇಡಿಯಂ
ಏಷ್ಯಾಕಪ್ ದಾಖಲೆ ಏನು ಹೇಳುತ್ತದೆ?
ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಮೇಲುಗೈ ಸಾಧಿಸಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವೆ ಒಟ್ಟು 14, 50 ಓವರ್‌ಗಳ ಪಂದ್ಯಗಳು ನಡೆದಿವೆ. ಇಲ್ಲಿ ಟೀಂ ಇಂಡಿಯಾ 7 ಬಾರಿ ಗೆಲುವಿನ ಪತಾಕೆ ಹಾರಿಸಿದೆ. ಪಾಕಿಸ್ತಾನ 5 ಬಾರಿ ಜಯ ದಾಖಲಿಸಿದೆ. ಆದರೆ 2004ರಲ್ಲಿ ಇದೇ ಮೈದಾನದಲ್ಲಿ ಟೀಂ ಇಂಡಿಯಾವನ್ನು ಪಾಕಿಸ್ತಾನ 59 ರನ್‌ಗಳಿಂದ ಸೋಲಿಸಿತ್ತು. ಹೀಗಾಗಿ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಪ್ರಯತ್ನಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ