ಕೊಲಂಬೊದಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ; ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್..!
Colombo Weather Report: ಈ ಉಭಯ ತಂಡಗಳ ಕದನವು ಕೊಲಂಬೊದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ ಹವಾಮಾನ ವರದಿ ಪ್ರಕಾರ ಆ ಸಮಯದಲ್ಲಿ ಕೊಲಂಬೊದಲ್ಲಿ ಶೇಕಡಾ 92 ರಷ್ಟು ಮಳೆಯಾಗಲಿದೆ. ಅಲ್ಲದೆ ಪಂದ್ಯಕ್ಕೆ ಒಂದು ಗಂಟೆ ಮೊದಲು 91 ಪ್ರತಿಶತ ಮಳೆಯಾಗಲಿದೆ.
ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್ 2023 (Asia Cup 2023)ರ ಸೂಪರ್ 4 ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಸಿದ್ಧವಾಗಿದೆ . ಈ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ (India vs Pakistan) ಎರಡನೇ ಬಾರಿಗೆ ಕಣಕ್ಕಿಳಿಯಲ್ಲಿವೆ. ಇದಕ್ಕೂ ಮುನ್ನ ಎರಡೂ ತಂಡಗಳು ಲೀಗ್ ಸುತ್ತಿನಲ್ಲಿ ಮುಖಾಮುಖಿಯಾಗಿದ್ದವು. ಆದರೆ ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಈ ಸೂಪರ್ 4 ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಮೀಸಲು ದಿನವನ್ನು ಇಡಲಾಗಿದೆ. ಹಾಗಾಗಿ ಈಗ ಪಂದ್ಯ ಪೂರ್ಣಗೊಳ್ಳುವುದಂತೂ ಖಚಿತ. ಆದರೆ ಇಂದು ಕೊಲಂಬೊದಲ್ಲಿ ಭಾರಿ ಮಳೆಯಾಗುವ ಸೂಚನೆ ಇದ್ದು, ಮೀಸಲು ದಿನವೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ವಾಸ್ತವವಾಗಿ ನಿನ್ನೆ ನಡೆದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಸೂಪರ್ 4 ಸುತ್ತಿನ ಪಂದ್ಯ ಕೂಡ ಕೊಲಂಬೊದಲ್ಲಿಯೇ ನಡೆಯಿತು. ಆದರೆ ಪಂದ್ಯದ ವೇಳೆ ಮಳೆ ಬಾರದಿರುವ ಕಾರಣ ಪಂದ್ಯ ಯಾವುದೇ ಅಡ್ಡಿ ಇಲ್ಲದೆ ಪೂರ್ಣಗೊಂಡಿತು. ಪಂದ್ಯದುದ್ದಕ್ಕೂ ಮೋಡ ಕವಿದ ವಾತಾವರಣವಿದ್ದರೂ ಮಳೆ ಮಾತ್ರ ಪೂರ್ಣ ಬ್ರೇಕ್ ಪಡೆದಿತ್ತು. ಆದರೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿದೆ.
ಇಂದು ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ: ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ಪ್ರೇಮದಾಸ ಸ್ಟೇಡಿಯಂ
ಭಾರೀ ಮಳೆಯ ಮುನ್ಸೂಚನೆ
ಈ ಉಭಯ ತಂಡಗಳ ಕದನವು ಕೊಲಂಬೊದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ ಹವಾಮಾನ ವರದಿ ಪ್ರಕಾರ ಆ ಸಮಯದಲ್ಲಿ ಕೊಲಂಬೊದಲ್ಲಿ ಶೇಕಡಾ 92 ರಷ್ಟು ಮಳೆಯಾಗಲಿದೆ. ಅಲ್ಲದೆ ಪಂದ್ಯಕ್ಕೆ ಒಂದು ಗಂಟೆ ಮೊದಲು 91 ಪ್ರತಿಶತ ಮಳೆಯಾಗಲಿದೆ. ಹಾಗೆಯೇ ಸಂಜೆ 4 ಗಂಟೆಯ ವೇಳೆಗೆ ಮಳೆಯ ಸಂಭವನೀಯತೆ ಶೇ. 87 ಪ್ರತಿಶತವಾಗಿದ್ದು, ರಾತ್ರಿ 11 ಗಂಟೆಯವರೆಗೂ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ವರದಿಯಾಗಿದೆ.
ಮೀಸಲು ದಿನದ ಕಥೆ ಏನು?
ಸೆಪ್ಟೆಂಬರ್ 10ಕ್ಕೆ ಹೋಲಿಸಿದರೆ ಸೆಪ್ಟೆಂಬರ್ 11ರ ಹವಾಮಾನ ನೋಡಿದರೆ ಕೊಂಚ ಸಮಾಧಾನವಿದ್ದರೂ ಇಲ್ಲಿಯೂ ಮಳೆಯಾಗುವ ಸೂಚನೆ ಸಿಕ್ಕಿದೆ. ಒಂದೇ ಒಂದು ಒಳ್ಳೆಯ ಸಂಗತಿಯೆಂದರೆ, ದಿನದ ಮೊದಲಾರ್ಧದಲ್ಲಿ ಮಾತ್ರ ಮಳೆ ಬೀಳಲಿದೆ ಎಂದು ವರದಿಯಾಗಿದೆ. ದಿನ ಕಳೆದಂತೆ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಸೆಪ್ಟೆಂಬರ್ 11 ರಂದು ಸಂಜೆಯ ಹೊತ್ತಿಗೆ, ಕೊಲಂಬೊದಲ್ಲಿ ಮಳೆಯ ಸಾಧ್ಯತೆಯು 64 ಪ್ರತಿಶತದಷ್ಟು ಕಡಿಮೆಯಾಗಲಿದೆ. ಹೀಗಾಗಿ ಮೀಸಲು ದಿನದಂದು ಪಂದ್ಯ ಪೂರ್ಣಗೊಳ್ಳುವುದು ಖಚಿತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ