AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಆಗಮನವಾಗುತ್ತಿದ್ದಂತೆ ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!

Asia Cup 2023: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಬಿಗ್​ ಅಪ್​ಡೇಟ್ ಹೊರಬಿದ್ದಿದ್ದು, ಮೀಸಲು ವಿಕೆಟ್‌ಕೀಪರ್- ಬ್ಯಾಟರ್ ಆಗಿ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

ರಾಹುಲ್ ಆಗಮನವಾಗುತ್ತಿದ್ದಂತೆ ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!
ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್
ಪೃಥ್ವಿಶಂಕರ
|

Updated on: Sep 09, 2023 | 8:27 AM

Share

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ (India vs Pakistan) ಪಾಳಯದಿಂದ ಬಿಗ್​ ಅಪ್​ಡೇಟ್ ಹೊರಬಿದ್ದಿದ್ದು, ಮೀಸಲು ವಿಕೆಟ್‌ಕೀಪರ್- ಬ್ಯಾಟರ್ ಆಗಿ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದ ಸಂಜು ಸ್ಯಾಮ್ಸನ್‌ರನ್ನು (Sanju Samson) ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿಕೊಳ್ಳುವ ತವಕದಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul) ಅಭ್ಯಾಸದ ಸಮಯದಲ್ಲಿ ಕೊಂಚ ತೊಂದರೆಗೀಡಾದವರಂತೆ ಕಂಡುಬಂದಿದ್ದರಿಂದ ಅವರನ್ನು ಏಷ್ಯಾಕಪ್‌ನ (Asia Cup 2023) ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಿರಲಿಲ್ಲ. ಹೀಗಾಗಿ ರಾಹುಲ್ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್‌ರನ್ನು ತಂಡದ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದರೀಗ ರಾಹುಲ್ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಂಡಿರುವುದರಿಂದ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅವರೀಗ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ವರದಿಯಾಗಿದೆ.

ಮೊದಲೆರಡು ಪಂದ್ಯಗಳಿಗೆ ರಾಹುಲ್ ಗೈರು

ಈ ಕಾಂಟಿನೆಂಟಲ್ ಟೂರ್ನಮೆಂಟ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ವೇಳೆ ರಾಹುಲ್ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಕೆಎಲ್ ರಾಹುಲ್ ಪಾಕ್ ವಿರುದ್ಧದ ಲೀಗ್​ ಪಂದ್ಯವನ್ನು ಆಡುವುದಿಲ್ಲ ಎಂದಿದ್ದರು. ಅಲ್ಲದೆ ಒಂದು ವೇಳೆ ರಾಹುಲ್ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂಬ ವರದಿ ಬಂದರೆ ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್‌ರನ್ನು ಆಡಿಸಲಾಗುವುದು. ಹೀಗಾಗಿ ಸಂಜು ಅವರನ್ನು ತಂಡದಲ್ಲಿ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗುತ್ತಿದೆ ಎಂದಿದ್ದರು. ಆದರೆ ಆ ಬಳಿಕ ಮಾಹಿತಿ ನೀಡಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರಾಹುಲ್ ಲೀಗ್ ಹಂತದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದಿದ್ದರು.

Asia Cup 2023: ಸ್ಟಾರ್ ಆಟಗಾರನ ರೀ ಎಂಟ್ರಿ; ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!

ತಂಡ ಸೇರಿಕೊಂಡ ರಾಹುಲ್

ಹೀಗಾಗಿ ರಾಹುಲ್ ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧದ ಲೀಗ್​ ಹಂತದ ಪಂದ್ಯವನ್ನು ಆಡಿರಲಿಲ್ಲ. ಆದರೆ ಇದೀಗ ಸಂಪೂರ್ಣ ಫಿಟ್ ಆಗಿರುವ ರಾಹುಲ್, ಪಾಕಿಸ್ತಾನ ವಿರುದ್ಧದ ಸೂಪರ್ 4 ಸುತ್ತಿನ ಪಂದ್ಯಕ್ಕೂ ಮುನ್ನ ಕೊಲಂಬೊದಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಹಾಗೆಯೇ ತಂಡದೊಂದಿಗೆ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ.

ತವರಿಗೆ ಸಂಜು ವಾಪಸ್ಸ್

ಹೀಗಾಗಿ ಪಾಕ್ ವಿರುದ್ಧ ರಾಹುಲ್ ಕಣಕ್ಕಿಳಿಯವುದು ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೆ ತಂಡದಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಆಯ್ಕೆಯಾಗಿ ಇಶಾನ್ ಕಿಶನ್ ಇರುವುದರಿಂದ ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಅವಕಾಶ ಸಿಗುವುದು ಅಸಂಭವ. ಆದ್ದರಿಂದ ತಂಡಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಸಂಜುರನ್ನು ಇದೀಗ ತಂಡದಿಂದ ಬಿಡುಗಡೆ ಮಾಡಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ