ಏಕದಿನ ವಿಶ್ವಕಪ್‌ಗೆ ಪಂದ್ಯದ ಅಧಿಕಾರಿಗಳನ್ನು ಪ್ರಕಟಿಸಿದ ಐಸಿಸಿ; ಭಾರತದಿಂದ ಇಬ್ಬರಿಗೆ ಅವಕಾಶ
ODI World Cup 2023: ಐಸಿಸಿ ಪ್ರಕಟಿಸಿದ ಪಟ್ಟಿಯಲ್ಲಿ 20 ಪಂದ್ಯದ ಅಧಿಕಾರಿಗಳ ಪಟ್ಟಿಯಲ್ಲಿ ಭಾರತದಿಂದ ಕೇವಲ ಇಬ್ಬರು ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 16 ಅಂಪೈರ್‌ಗಳು ಮತ್ತು 4 ರೆಫರಿಗಳನ್ನು ಸೇರಿಸಲಾಗಿದೆ. ಇನ್ನು ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯಾವಳಿಗೆ ಅಧಿಕಾರಿಗಳನ್ನು ಹೆಸರಿಸಲಾಗಿದ್ದು, ಮೆನನ್ ಮತ್ತು ಧರ್ಮಸೇನಾ ಆನ್ ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಕ್ಟೋಬರ್ 5 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ (ICC ODI World Cup 2023) ಇನ್ನು ಕೆಲವೇ ದಿನ ಬಾಕಿ ಉಳಿದಿವೆ. ಹೀಗಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಲ್ಲಾ 10 ದೇಶಗಳು ತಮ್ಮ ತಮ್ಮ ತಂಡವನ್ನು ಪ್ರಕಟಗೊಳಿಸುತ್ತಿವೆ. ಈ ನಡುವೆ ಐಸಿಸಿ ಕೂಡ 20 ಸದಸ್ಯರ ತನ್ನ ತಂಡವನ್ನು ಪ್ರಕಟಿಸಿದೆ (ICC announces match officials). ವಾಸ್ತವವಾಗಿ ಐಸಿಸಿ ಆಯೋಜಿಸುವ ಯಾವುದೇ ಕ್ರಿಕೆಟ್ ಪಂದ್ಯವನ್ನು ಶಾಂತಿಯುತವಾಗಿ ಪೂರ್ಣಗೊಳಿಸುವ ಜವಾಬ್ದಾರಿ ಪಂದ್ಯದ ಅಧಿಕಾರಿಗಳ ಮೇಲಿರುತ್ತದೆ. ಇದೀಗ ಈ ಮಹಾ ಸಂಗ್ರಾಮವನ್ನು ಯಾವುದೇ ಸಮಸ್ಯೆ ಬಾರದಂತೆ ನಡೆಸುವ ಜವಬ್ದಾರಿಯನ್ನು ಐಸಿಸಿ 20 ಸದಸ್ಯರಿಗೆ ವಹಿಸಿದೆ.
ಐಸಿಸಿ ಪ್ರಕಟಿಸಿದ 20 ಪಂದ್ಯದ ಅಧಿಕಾರಿಗಳ ಪಟ್ಟಿಯಲ್ಲಿ ಭಾರತದಿಂದ ಕೇವಲ ಇಬ್ಬರು ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 16 ಅಂಪೈರ್‌ಗಳು ಮತ್ತು 4 ರೆಫರಿಗಳನ್ನು ಸೇರಿಸಲಾಗಿದೆ. ಇನ್ನು ಅಕ್ಟೋಬರ್ 5 ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯಾವಳಿಗೆ ಅಧಿಕಾರಿಗಳನ್ನು ಹೆಸರಿಸಲಾಗಿದ್ದು, ಮೆನನ್ ಮತ್ತು ಧರ್ಮಸೇನಾ ಆನ್ ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದರೆ, ಟಿವಿ ಅಂಪೈರ್ ಆಗಿ ಪಾಲ್ ವಿಲ್ಸನ್, ನಾಲ್ಕನೇ ಅಂಪೈರ್ ಆಗಿ ಶರ್ಫುದ್ದೌಲಾ ಕಾರ್ಯನಿರ್ವಹಿಸಲಿದ್ದಾರೆ. ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಿರುತ್ತಾರೆ.
World Cup 2023: ಏಕದಿನ ವಿಶ್ವಕಪ್‌ಗಾಗಿ ಕ್ರಿಕೆಟ್ ದೇವರಿಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ
ಪಂದ್ಯದ ಅಧಿಕಾರಿಗಳ ಪಟ್ಟಿ ಹೀಗಿದೆ.
ಅಂಪೈರ್‌ಗಳು
- ಕ್ರಿಸ್ಟೋಫರ್ ಗಫ್ನಿ (ನ್ಯೂಜಿಲೆಂಡ್)
- ಕುಮಾರ್ ಧರ್ಮಸೇನಾ (ಶ್ರೀಲಂಕಾ)
- ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ)
- ಮೈಕೆಲ್ ಗಾಫ್ (ಇಂಗ್ಲೆಂಡ್)
- ನಿತಿನ್ ಮೆನನ್ (ಭಾರತ)
- ಪಾಲ್ ರೈಫಲ್ (ಆಸ್ಟ್ರೇಲಿಯಾ)
- ರಿಚರ್ಡ್ ಇಲ್ಲಿಂಗ್ವರ್ತ್ (ಇಂಗ್ಲೆಂಡ್)
- ರಾಡ್ ಟಕರ್ (ಆಸ್ಟ್ರೇಲಿಯಾ)
- ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್)
- ಅಹ್ಸನ್ ರಜಾ (ಪಾಕಿಸ್ತಾನ)
- ಆಡ್ರಿಯನ್ ಹೋಲ್ಡ್‌ಸ್ಟಾಕ್ (ದಕ್ಷಿಣ ಆಫ್ರಿಕಾ)
- ಪಾಲ್ ವಿಲ್ಸನ್ (ಆಸ್ಟ್ರೇಲಿಯಾ)
- ಶರ್ಫುದ್ದೌಲಾ ಇಬ್ನೆ ಶಾಹಿದ್ (ಬಾಂಗ್ಲಾದೇಶ)
- ಕ್ರಿಸ್ ಬ್ರೌನ್ (ನ್ಯೂಜಿಲೆಂಡ್)
- ಅಲೆಕ್ಸ್ ವಾರ್ಫ್ (ಇಂಗ್ಲೆಂಡ್)
ಮ್ಯಾಚ್ ರೆಫರಿ
- ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ)
- ರಿಚಿ ರಿಚರ್ಡ್ಸನ್ (ವೆಸ್ಟ್ ಇಂಡೀಸ್)
- ಜೆಫ್ ಕ್ರೋವ್ (ನ್ಯೂಜಿಲೆಂಡ್)
- ಜಾವಗಲ್ ಶ್ರೀನಾಥ್ (ಭಾರತ)
JUST IN: Match officials for #CWC23 announced 👇
— ICC (@ICC) September 8, 2023
ಯಾವ ದೇಶದಿಂದ ಎಷ್ಟು ಜನ?
ಇನ್ನು ಈ ಪಟ್ಟಿಯಲ್ಲಿ ಯಾವ ದೇಶದಿಂದ ಎಷ್ಟು ಸದಸ್ಯರು ಆಯ್ಕೆಯಾಗಿದ್ದಾರೆ ಎಂಬುದನ್ನು ನೋಡುವುದಾದರೆ.. ನ್ಯೂಜಿಲೆಂಡ್‌ನಿಂದ ಮೂವರು, ಶ್ರೀಲಂಕಾದಿಂದ ಒಬ್ಬರು, ದಕ್ಷಿಣ ಆಫ್ರಿಕಾದಿಂದ ಇಬ್ಬರು, ಇಂಗ್ಲೆಂಡ್‌ನಿಂದ ಮೂವರು, ಆಸ್ಟ್ರೇಲಿಯಾದಿಂದ ಮೂವರು, ವೆಸ್ಟ್ ಇಂಡೀಸ್‌ನಿಂದ ಇಬ್ಬರು, ಪಾಕಿಸ್ತಾನದಿಂದ ಒಬ್ಬರು, ಬಾಂಗ್ಲಾದೇಶದಿಂದ ಒಬ್ಬರು ಮತ್ತು ಜಿಂಬಾಬ್ವೆಯಿಂದ ಒಬ್ಬ ಸದಸ್ಯರ ವಿಶ್ವಕಪ್‌ಗೆ ಮ್ಯಾಚ್ ಆಫೀಸರ್‌ಗಳಾಗಿ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sat, 9 September 23