AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 9 ಕ್ರಿಕೆಟ್ ದೇವರ ಪಾಲಿಗೆ ಬಹಳ ವಿಶೇಷ ದಿನ ಏಕೆ ಗೊತ್ತಾ? ಈ ವಿಡಿಯೋ ನೋಡಿ

Sachin Tendulkar: ಸಚಿನ್ ತೆಂಡೂಲ್ಕರ್ ಅವರಿಗೆ ಸೆಪ್ಟೆಂಬರ್ 9 ಅವಿಸ್ಮರಣೀಯ ದಿನವೆಂದರೆ ತಪ್ಪಾಗಲಾರದು. ಏಕೆಂದರೆ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬರೋಬ್ಬರಿ 1725 ದಿನಗಳ ಬಳಿಕ ಸಚಿನ್ ಬ್ಯಾಟ್​ ಈ ದಿನದಂದು ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ ಆಗಸದತ್ತ ಮುಖಮಾಡಿತ್ತು.

ಸೆಪ್ಟೆಂಬರ್ 9 ಕ್ರಿಕೆಟ್ ದೇವರ ಪಾಲಿಗೆ ಬಹಳ ವಿಶೇಷ ದಿನ ಏಕೆ ಗೊತ್ತಾ? ಈ ವಿಡಿಯೋ ನೋಡಿ
ಸಚಿನ್ ತೆಂಡೂಲ್ಕರ್
ಪೃಥ್ವಿಶಂಕರ
|

Updated on: Sep 09, 2023 | 12:45 PM

Share

ಸಚಿನ್ ತೆಂಡೂಲ್ಕರ್ (Sachin Tendulkar)… ಕ್ರಿಕೆಟ್ ಲೋಕದಲ್ಲಿ ಈ ಹೆಸರನ್ನು ಕೇಳದವರಿಲ್ಲ. ತನ್ನ ಆಘಾದ ಪ್ರತಿಭೆಯಿಂದ ಕ್ರಿಕೆಟ್ ಲೋಕದಲ್ಲಿ ಅದೇಷ್ಟೋ ದಾಖಲೆಗಳನ್ನು ಬರೆದ ಸಚಿನ್ ತೆಂಡೂಲ್ಕರ್ ಭಾರತವಲ್ಲದೆ, ವಿಶ್ವ ಕ್ರಿಕೆಟ್​ನ ಐಕಾನ್ ಆಗಿದ್ದಾರೆ. ಎರಡು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ತೆಂಡೂಲ್ಕರ್ ಸೃಷ್ಟಿಸಿದ ದಾಖಲೆಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿರುವುದು ತೆಂಡೂಲ್ಕರ್ ಅವರ ಅಸಂಖ್ಯಾತ ದಾಖಲೆಗಳಲ್ಲಿ ಪ್ರಮುಖವಾಗಿದೆ. ಇಂತಹ ಅಸಾಮಾನ್ಯ ಪ್ರತಿಭೆಗೆ ಈ ದಿನ ಅಂದರೆ, ಸೆಪ್ಟೆಂಬರ್ 9 ಅವಿಸ್ಮರಣೀಯ ದಿನವೆಂದರೆ ತಪ್ಪಾಗಲಾರದು. ಏಕೆಂದರೆ ಟೀಂ ಇಂಡಿಯಾ (Team India) ಪರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ (ODI Cricket) ಪದಾರ್ಪಣೆ ಮಾಡಿದ ಬರೋಬ್ಬರಿ 1725 ದಿನಗಳ ಬಳಿಕ ಸಚಿನ್ ಬ್ಯಾಟ್​ ಈ ದಿನದಂದು ಏಕದಿನ ಮಾದರಿಯಲ್ಲಿ ಮೊದಲ ಬಾರಿಗೆ ಆಗಸದತ್ತ ಮುಖಮಾಡಿತ್ತು.

1725 ದಿನಗಳ ಕಾಯುವಿಕೆ

1989 ರ ನವೆಂಬರ್ 15 ರಂದು ಭಾರತದ ಪರ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸಚಿನ್, ಅದೇ ವರ್ಷದ ಡಿಸೆಂಬರ್​ನಂದು ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್​ನಲ್ಲಿ 1990 ರ ಆಗಸ್ಟ್​ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದ ಸಚಿನ್, ಏಕದಿನ ಶತಕಕ್ಕಾಗಿ ಬಹಳ ಬೆವರು ಹರಿಸಬೇಕಾಯ್ತು. 1989 ರಲ್ಲೇ ಸಚಿನ್ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರಾದರೂ, ಅವರು ತಮ್ಮ ಚೊಚ್ಚಲ ಏಕದಿನ ಶತಕಕ್ಕಾಗಿ 1725 ದಿನಗಳನ್ನು ಕಾಯಬೇಕಾಯ್ತು.

ಆಸೀಸ್ ವಿರುದ್ಧ ಚೊಚ್ಚಲ ಶತಕ

ಪ್ರಸ್ತುತ ಟೀಂ ಇಂಡಿಯಾ ಏಷ್ಯಾಕಪ್​ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನವನ್ನು ಎದುರಿಸಲು ತಯಾರಾಗಿರುವ ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಸೆಪ್ಟೆಂಬರ್ 9, 1994 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಸಚಿನ್, ತಮ್ಮ ಏಕದಿನ ಶತಕದ ಬರವನ್ನು ಅಂತಿಮವಾಗಿ ನೀಗಿಸಿಕೊಂಡಿದ್ದರು. ಐದು ವರ್ಷಗಳ ಹಿಂದೆಯೇ ಏಕದಿನ ಕ್ರಿಕೆಟ್‌ಗೆ ಸಚಿನ್ ಕಾಲಿಟ್ಟಿದ್ದರಾದರೂ ಅವರಿಗೆ ಒಂದೇ ಒಂದು ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಆಸೀಸ್ ವಿರುದ್ಧದ ಪಂದ್ಯದಲ್ಲಿ 130 ಎಸೆತಗಳನ್ನು ಎದುರಿಸಿದ್ದ ಸಚಿನ್, 110 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಏಕದಿನ ಶತಕದ ಬರವನ್ನು ನೀಗಿಸಿಕೊಂಡಿದ್ದರು. ಅಲ್ಲದೆ ಆ ಪಂದ್ಯವನ್ನು ಭಾರತ 31 ರನ್‌ಗಳಿಂದ ಗೆಲ್ಲುವಲ್ಲಿ ಸಚಿನ್ ಆಡಿದ ಇನ್ನಿಂಗ್ಸ್ ಅತ್ಯಂತ ನಿರ್ಣಾಯಕವಾಗಿತ್ತು.

ಆ ಪಂದ್ಯದಲ್ಲಿ ಮನೋಜ್ ಪ್ರಭಾಕರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ತೆಂಡೂಲ್ಕರ್ ಮುರಿಯದ ವಿಕೆಟ್​ಗೆ 87 ರನ್‌ಗಳ ಜೊತೆಯಾಟ ನೀಡಿದರು. ಆದರೆ ಪ್ರಭಾಕರ್ 20 ರನ್​ ಬಾರಿಸಿ ಪೆವಲಿಯನ್ ಸೇರಿಕೊಂಡರು. ಆದರೆ ಆಸೀಸ್ ದೈತ್ಯ ಬೌಲಿಂಗ್ ಮುಂದೆ ನಿರರ್ಗಳವಾಗಿ ಬ್ಯಾಟ್ ಬೀಸಿದ್ದ ಸಚಿನ್ ತಮ್ಮ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ ಕೂಡ ಸಿಡಿಸಿದ್ದರು. ಅಲ್ಲಿಂದ ಆರಂಭವಾದ ಸಚಿನ್ ಅವರ ಶತಕಗಳ ಭೇಟೆ ಅಂತಿಮವಾಗಿ ಶತಕಗಳ ಶತಕಕ್ಕೆ ಬಂದು ನಿಂತಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ