IPL 2024: ಕೆಎಲ್ ರಾಹುಲ್ ನಾಯಕ: ಗೌತಮ್ ಗಂಭೀರ್ ಗ್ಲೋಬಲ್ ಮೆಂಟರ್

Lucknow Super Giants: ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಕಾರ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಸ್ಪಿನ್ ಕೋಚ್ ಸಲಹೆಗಾರ ಶ್ರೀಧರನ್ ಶ್ರೀರಾಮ್ ಅವರು ಅಸಿಸ್ಟೆಂಟ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

IPL 2024: ಕೆಎಲ್ ರಾಹುಲ್ ನಾಯಕ: ಗೌತಮ್ ಗಂಭೀರ್ ಗ್ಲೋಬಲ್ ಮೆಂಟರ್
Gautam Gambhir and KL Rahul
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 09, 2023 | 4:00 PM

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) ಮುಂಬರುವ ಸೀಸನ್​ಗಾಗಿ ಲಕ್ನೋ ಸೂಪರ್ ಜೈಂಟ್ಸ್‌ ನಾಯಕ ಹಾಗೂ ಕೋಚಿಂಗ್ ಸಿಬ್ಬಂದಿಗಳನ್ನು ಘೋಷಿಸಿದೆ. ಅದರಂತೆ ಮುಂದಿನ ಸೀಸನ್​ನಲ್ಲೂ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಗೌತಮ್ ಗಂಭೀರ್ ಅವರನ್ನು ಗ್ಲೋಬಲ್ ಮೆಂಟರ್ ಎಂದು ಹೆಸರಿಸಲಾಗಿದೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಕಾರ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಸ್ಪಿನ್ ಕೋಚ್ ಸಲಹೆಗಾರ ಶ್ರೀಧರನ್ ಶ್ರೀರಾಮ್ ಅವರು ಅಸಿಸ್ಟೆಂಟ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಹಾಗೆಯೇ ಸಹಾಯಕ ಕೋಚ್‌ಗಳಾಗಿ ವಿಜಯ್ ದಹಿಯಾ, ಪ್ರವೀಣ್ ತಾಂಬೆ ಮತ್ತು ದಕ್ಷಿಣ ಆಫ್ರಿಕಾದ ಮೊರ್ನೆ ಮೊರ್ಕೆಲ್ ಮತ್ತು ಜಾಂಟಿ ರೋಡ್ಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಗ್ಲೋಬಲ್ ಮೆಂಟರ್ ಗಂಭೀರ್?

ಗೌತಮ್ ಗಂಭೀರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಗ್ಲೋಬಲ್ ಮೆಂಟರ್ ಎಂದು ಹೆಸರಿಸಲಾಗಿದೆ. ಕಳೆದ ಸೀಸನ್​ನಲ್ಲಿ ಲಕ್ನೋ ತಂಡದ ಮೆಂಟರ್ ಆಗಿದ್ದ ಗಂಭೀರ್ ಅವರನ್ನು ಇದೀಗ ಗ್ಲೋಬಲ್ ಮೆಂಟರ್ ಹೆಸರಿಸಿರುವುದು ವಿಶೇಷ. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಇತರೆ ಲೀಗ್​ಗಳಲ್ಲೂ ತಂಡಗಳನ್ನು ಖರೀದಿಸುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಗಂಭೀರ್ ಅವರಿಗೆ ಗ್ಲೋಬಲ್ ಮೆಂಟರ್ ಸ್ಥಾನ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ/ಕೋಚಿಂಗ್ ಸಿಬ್ಬಂದಿಗಳು:

  1. ನಾಯಕ – ಕೆಎಲ್ ರಾಹುಲ್
  2. ಗ್ಲೋಬಲ್ ಮೆಂಟರ್ – ಗೌತಮ್ ಗಂಭೀರ್
  3. ಮುಖ್ಯ ಕೋಚ್ – ಜಸ್ಟಿನ್ ಲ್ಯಾಂಗರ್ (ಆಸ್ಟ್ರೇಲಿಯಾ)
  4. ಸಹಾಯಕ ಕೋಚ್​ಗಳು- ಶ್ರೀಧರನ್ ಶ್ರೀರಾಮ್ ಮತ್ತು ವಿಜಯ್ ದಹಿಯಾ
  5. ಬೌಲಿಂಗ್ ಕೋಚ್ – ಮೋರ್ನೆ ಮೋರ್ಕೆಲ್ (ಸೌತ್ ಆಫ್ರಿಕಾ)
  6. ಸ್ಪಿನ್ ಬೌಲಿಂಗ್ ಕೋಚ್ – ಪ್ರವೀಣ್ ತಾಂಬೆ
  7. ಫೀಲ್ಡಿಂಗ್ ಕೋಚ್ – ಜಾಂಟಿ ರೋಡ್ಸ್​ (ಸೌತ್ ಆಫ್ರಿಕಾ)
  8. ಕಾರ್ಯತಂತ್ರದ ಸಲಹೆಗಾರ- ಎಂಎಸ್​ಕೆ ಪ್ರಸಾದ್.

ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಯುದ್ಧವೀರ್ ಚರಕ್, ನವೀನ್-ಉಲ್-ಹಕ್ , ಸ್ವಪ್ನಿಲ್ ಸಿಂಗ್ , ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ , ಡೇನಿಯಲ್ ಸ್ಯಾಮ್ಸ್ , ರೊಮಾರಿಯೋ ಶೆಫರ್ಡ್ , ಯಶ್ ಠಾಕೂರ್ , ಜಯದೇವ್ ಉನಾದ್ಕಟ್ , ನಿಕೋಲಸ್ ಪೂರನ್.

ಲಕ್ನೋ ಸೂಪರ್ ಜೈಂಟ್ಸ್​ ಪ್ರಸ್ತುತ ತಂಡದಲ್ಲಿ ಒಟ್ಟು 28 ಆಟಗಾರರಿದ್ದಾರೆ. ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಇವರಲ್ಲಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲಿದ್ದು, ಇದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಿಡ್ಡಿಂಗ್​ನಲ್ಲಿ ಕಾಣಿಸಿಕೊಳ್ಳಲಿದೆ.

Published On - 3:56 pm, Sat, 9 September 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ