MI vs RCB, IPL 2023: ಐಪಿಎಲ್ನಲ್ಲಿಂದು ಆರ್ಸಿಬಿ ಪಂದ್ಯ: ಫಾಫ್ ಪಡೆಗೆ ಮುಂಬೈ ಇಂಡಿಯನ್ಸ್ ಸವಾಲು
Mumbai vs Bangalore: ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ಎರಡೂ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿದೆ. ಹೀಗಾಗಿ ವಾಂಖೆಡೆಯಲ್ಲಿ ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಐಪಿಎಲ್ 2023ರ 54ನೇ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡ ಮುಖಾಮುಖಿ ಆಗುತ್ತಿದೆ. ಉಭಯ ತಂಡಗಳು ಆಡಿದ ಆಡಿರುವ 10 ಪಂದ್ಯಗಳಲ್ಲಿ ತಲಾ ಐದು ಸೋಲು, ಗೆಲುವು ಸಾಧಿಸಿ 10 ಅಂಕ ಸಂಪಾದಿಸಿದೆ. ರನ್ರೇಟ್ ಆಧಾರದ ಮೇಲೆ ಆರ್ಸಿಬಿ ಆರನೇ ಸ್ಥಾನದಲ್ಲಿದ್ದರೆ ಮುಂಬೈ ಎಂಟನೇ ಸ್ಥಾನದಲ್ಲಿದೆ. ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಎರಡೂ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ ಆಗಿದೆ. ಹೀಗಾಗಿ ವಾಂಖೆಡೆಯಲ್ಲಿ ಹೈವೋಲ್ಟೇಜ್ ಪಂದ್ಯ ಆಗುವುದು ಖಚಿತ.
ಮುಂಬೈ ಇಂಡಿಯನ್ಸ್:
ಮುಂಬೈ ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಹರಸಾಹಸ ಪಡುತ್ತಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ಅವರ ಸತತ ಕಳಪೆ ಪ್ರದರ್ಶನ ತಂಡಕ್ಕೆ ದೊಡ್ಡ ಚಿಂತೆ. ಈ ಟೂರ್ನಿಯಲ್ಲಿ ಹಿಟ್ಮ್ಯಾನ್ ಕಡೆಯಿಂದ ಉತ್ತಮ ಆಟ ಬಂದಿಲ್ಲ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮ್ರೊನ್ ಗ್ರೀನ್ ಹಾಗೂ ಇಶಾನ್ ಕಿಶನ್ ಫಾರ್ಮ್ನಲ್ಲಿದ್ದು ರನ್ ಕಲೆಹಾಕುತ್ತಿದ್ದಾರೆ. ಗ್ರೀನ್, ಅರ್ಶದ್ ಖಾನ್, ಜೋಫ್ರಾ ಆರ್ಚರ್, ಆಕಾಶ ಮಧ್ವಾಲ್ ಇನ್ನಷ್ಟು ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತಿದ್ದ ಮುಂಬೈ ಗೆಲುವಿನ ಲಯಕ್ಕೆ ಮರಳುತ್ತಾ ನೋಡಬೇಕಿದೆ.
KKR vs PBKS Highlights IPL 2023: ಕೊನೆಯ ಎಸೆತದಲ್ಲಿ ಬೌಂಡರಿ; ಕೋಲ್ಕತ್ತಾಗೆ 5 ವಿಕೆಟ್ ಜಯ
ಆರ್ಸಿಬಿ:
ಇತ್ತ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ. -0.030 ರನ್ರೇಟ್ ಹೊಂದಿದೆ. ಪ್ಲೇ ಆಫ್ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್ನಿಂದ ಗೆದ್ದು + ರನ್ರೇಟ್ಗೆ ಮರಳಬೇಕು. ಹೀಗಾಗಿ ನೂತನ ಯೋಜನೆ ಫಾಫ್ ರೂಪಿಸಬೇಕಿದ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅನುಭವಿಸಿದ ಸೋಲು ದೊಡ್ಡ ಪಾಠ ಎನ್ನಬಹುದು. ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಕಡೆಯಿಂದ ಮಾತ್ರ ಕೊಡುಗೆ ಬರುತ್ತಿದೆ. ಮಹಿಪಾಲ್ ಲುಮ್ರೂರ್ ಮತ್ತೊಮ್ಮೆ ಅಬ್ಬರಿಸಬೇಕಿದೆ. ದಿನೇಶ್ ಕಾರ್ತಿಕ್, ಮ್ಯಾಕ್ಸ್‌ವೆಲ್ ಕಡೆಯಿಂದ ಕೂಡ ರನ್ ಬರಬೇಕು.
ಹಿಂದಿನ ಪಂದ್ಯಕ್ಕೆ ಕೇದರ್ ಜಾಧವ್ ಆಯ್ಕೆ ಆಗಿದ್ದರು. ಆದರೆ, ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಬೌಲಿಂಗ್ನಲ್ಲಿ ಆರ್ಸಿಬಿ ಬೌಲರ್ಗಳು ಕನ್ಸಿಸ್ಟೆನ್ಸಿ ತೋರಿಸುತ್ತಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜ್ಲೆವುಡ್ ತಂತ್ರದೊಂದಿಗೆ ಬೌಲಿಂಗ್ ಮಾಡಬೇಕು. ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಹರ್ಷಲ್ ಪಟೇಲ್ ನೀರಿನಂತೆ ರನ್ ಹರಿಯ ಬಿಡುತ್ತಿದ್ದಾರೆ. ಹನಿಂದು ಹಸರಂಗ ಮತ್ತು ಕರ್ಣ್ ಶರ್ಮಾ ಕೂಡ ಮಾರಕವಾಗಬೇಕಿದೆ. ಒಟ್ಟಾರೆ ತಂಡದಲ್ಲಿ ಏನಾದರು ಬದಲಾವಣೆ ಮಾಡಿದರಷ್ಟೆ ಬೆಂಗಳೂರು ಜಯ ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆ ಆಗಬಹುದು.
ಆರ್ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕೇದರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜ್ಲೆವುಡ್, ಹರ್ಷಲ್ ಪಟೇಲ್, ಸುಯಶ್ ಪ್ರಬ್ ಪಟೇಲ್ , ವಿಜಯ್‌ಕುಮಾರ್ ವೈಶಾಕ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ವೇಯ್ನ್ ಪಾರ್ನೆಲ್, ಸೋನು ಯಾದವ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್.
ಮುಂಬೈ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ರಮಣದೀಪ್ ಸಿಂಗ್, ಡೆವಾಲ್ಡ್ ಬ್ರೆವಿಸ್, ರಾಘವ್ ಗೋಯಲ್, ವಿಷ್ಣು ವಿನೋದ್, ರಿಲೆ ಮೆರೆಡಿತ್, ಶಮ್ಸ್ ಮುಲಾನಿ, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ಹೃತಿಕ್ ಶೋಕೀನ್, ಡುವಾನ್ ಜಾನ್ಸೆನ್, ಸಂದೀಪ್ ವಾರಿಯರ್, ಜೇಸನ್ ಬೆಹ್ರೆಂಡಾರ್ಫ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ