- Kannada News Photo gallery Cricket photos RCB is in trouble When Royal Challengers Bangalore Next Match Who is next opponent IPL 2023 Kannada News
RCB: ಸಂಕಷ್ಟದಲ್ಲಿರುವ ಆರ್ಸಿಬಿಯ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?
DC vs RCB, IPL 2023: ಆರ್ಸಿಬಿ ಪ್ಲೇ ಆಫ್ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್ನಿಂದ ಗೆದ್ದು + ರನ್ರೇಟ್ಗೆ ಮರಳಬೇಕು. ಹಾಗಾದರೆ, ಬೆಂಗಳೂರಿನ ಮುಂದಿನ ಎದುರಾಳಿ ಯಾರು?.
Updated on: May 07, 2023 | 10:28 AM

ಎಂದಿನಿಂತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ ಸಂಕಷ್ಟದಲ್ಲಿದೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಆರ್ಸಿಬಿಯ ಮುಂದಿನ ಹಾದಿ ದುರ್ಗಮವಾಗಿದೆ.

ಸದ್ಯ ಫಾಫ್ ಪಡೆ ಆಡಿರುವ ಹತ್ತು ಪಂದ್ಯಗಳಲ್ಲಿ ತಲಾ ಐದರಲ್ಲಿ ಗೆಲುವು, ಐದರಲ್ಲಿ ಸೋಲು ಕಂಡು ಒಟ್ಟು 10 ಅಂಕ ಸಂಪಾದಿಸಿ -0.209 ರನ್ರೇಟ್ ಹೊಂದಿ ಐದನೇ ಸ್ಥಾನದಲ್ಲಿದೆ. ವಿಶೇಷ ಎಂದರೆ ಆರ್ಸಿಬಿ ಜೊತೆ ಇತರೆ ಮೂರು ತಂಡ ಕೂಡ 10 ಅಂಕ ಹೊಂದಿ ಪೈಪೋಟಿ ನೀಡುತ್ತಿದೆ.

ಇದೀಗ ಆರ್ಸಿಬಿ ಪ್ಲೇ ಆಫ್ಗೆ ಕ್ವಾಲಿಫೈ ಆಗಬೇಕಾದರೆ ಮುಂಬರುವ ಎಲ್ಲ ಪಂದ್ಯ ಮಹತ್ವದ್ದಾಗಿದೆ. ಕೇವಲ ಗೆದ್ದರಷ್ಟೆ ಸಾಲದು, ಕನಿಷ್ಠ ಎರಡು ಪಂದ್ಯಗಳಲ್ಲಿ ದೊಡ್ಡ ರನ್ನಿಂದ ಗೆದ್ದು + ರನ್ರೇಟ್ಗೆ ಮರಳಬೇಕು. ಹಾಗಾದರೆ, ಬೆಂಗಳೂರಿನ ಮುಂದಿನ ಎದುರಾಳಿ ಯಾರು?.

ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ. 09 ಮಂಗಳವಾರದಂದು ಈ ಪಂದ್ಯ ನಡೆಯಲಿದೆ.

ಇದಾದ ಬಳಿಕ ಮೂರು ಪಂದ್ಯ ಆಡಲಿದೆ. ಮೇ. 14 ರಂದು ರಾಜಸ್ಥಾನ್ ರಾಯಲ್ಸ್, ಮೇ 18 ಸನ್ರೈಸರ್ಸ್ ಹೈದರಾಬಾದ್ ಮತ್ತು ಕೊನೆಯದಾಗಿ ಮೇ 21 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಕಾದಾಟ ನಡೆಸಲಿದೆ.

ಆರ್ಸಿಬಿ ಜೊತೆ ರಾಜಸ್ಥಾನ್, ಮುಂಬೈ ಹಾಗೂ ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 10 ಅಂಕ ಸಂಪಾದಿಸಿದೆ. ಹೀಗಾಗಿ ಬೆಂಗಳೂರಿಗೆ ಕಠಿಣ ಪೈಪೋಟಿ ಇದೆ. ರನ್ರೇಟ್ ಆಧಾರದ ಮೇಲೆ ಆರ್ಆರ್ 4ನೇ ಸ್ಥಾನದಲ್ಲಿದೆ, ಆರ್ಸಿಬಿ 5, ಮುಂಬೈ ಮತ್ತು ಪಂಜಾಬ್ ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿದೆ.

ಶನಿವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಕೊಹ್ಲಿ 55 ರನ್, ಲುಮ್ರೂರ್ ಅಜೇಯ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 16.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 187 ರನ್ ಸಿಡಿಸಿ ಗೆಲುವು ಕಂಡಿತು. ಪಿಲಿಪ್ ಸಾಲ್ಟ್ 87 ರನ್ ಚಚ್ಚಿದರು.



















