KKR vs PBKS Highlights IPL 2023: ಕೊನೆಯ ಎಸೆತದಲ್ಲಿ ಬೌಂಡರಿ; ಕೋಲ್ಕತ್ತಾಗೆ 5 ವಿಕೆಟ್ ಜಯ
Kolkata Knight Riders vs Punjab Kings IPL 2023 Highlights in Kannada: ಇಂದು ಐಪಿಎಲ್ನ 53 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ.
ಐಪಿಎಲ್ನ 53 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಲೀಗ್ನಲ್ಲಿ 5ನೇ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ತಂಡದ ಆರಂಭಿಕರು ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದರ ಫಲವಾಗಿ 20 ಓವರ್‌ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಕೊನೆಯ ಓವರ್‌ನಲ್ಲಿ 6 ರನ್ ಬೇಕಾಗಿದ್ದರೂ, ಕೆಕೆಆರ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮೊದಲ 5 ಎಸೆತಗಳಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ. ಇದರೊಂದಿಗೆ ಡೇಂಜರಸ್ ರಸೆಲ್ ಕೂಡ ರನೌಟ್ ಆದರು. ಆದರೆ ಕೊನೆಯ ಎಸೆತದಲ್ಲಿ ರಿಂಕು ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
LIVE NEWS & UPDATES
-
ರಿಂಕು ಮ್ಯಾಜಿಕ್, ಕೆಕೆಆರ್ಗೆ ಜಯ
ಕೊನೆಯ ಓವರ್‌ನಲ್ಲಿ 6 ರನ್ ಬೇಕಾಗಿದ್ದರೂ, ಕೆಕೆಆರ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮೊದಲ 5 ಎಸೆತಗಳಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ. ಇದರೊಂದಿಗೆ ಡೇಂಜರಸ್ ರಸೆಲ್ ಕೂಡ ರನೌಟ್ ಆದರು. ಆದರೆ ಕೊನೆಯ ಎಸೆತದಲ್ಲಿ ರಿಂಕು ಬೌಂಡರಿ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
-
ರಸೆಲ್ 3 ಸಿಕ್ಸರ್
ಕರನ್ ಬೌಲ್ ಮಾಡಿದ 19ನೇ ಓವರ್‌ನಲ್ಲಿ ರಸೆಲ್ 3 ಸಿಕ್ಸರ್ ಸಿಡಿಸಿದರು. ಒಟ್ಟು ಈ ಓವರ್‌ನಲ್ಲಿ 20 ರನ್ ಬಂದವು. ಕೊನೆಯ ಓವರ್‌ನಲ್ಲಿ 6 ರನ್ ಬೇಕಿದೆ.
-
150 ರನ್ ಪೂರ್ಣ
ಅರ್ಷದೀಪ್ ಬೌಲ್ ಮಾಡಿದ 18ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಇದರೊಂದಿಗೆ ಕೆಕೆಆರ್ 150 ರನ್‌ಗಳ ಗಡಿ ಕೂಡ ದಾಟಿದೆ.
ರಿಂಕು ಸಿಕ್ಸ್
ಎಲ್ಲಿಸ್ ಬೌಲ್ ಮಾಡಿದ 17ನೇ ಓವರ್‌ನಲ್ಲಿ ರಸೆಲ್ ಬೌಂಡರಿ ಬಾರಿಸಿದರೆ, ರಿಂಕು ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
ರಾಣಾ ಔಟ್
ಕೋಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಎರಡನೇ ಅರ್ಧಶತಕ ಗಳಿಸಿ ಔಟಾಗಿದ್ದಾರೆ. ಗೆಲುವಿಗೆ 28 ಎಸೆತಗಳಲ್ಲಿ 56 ರನ್‌ಗಳ ಅಗತ್ಯವಿದೆ.
15 ಓವರ್ ಅಂತ್ಯ
ಕೋಲ್ಕತ್ತಾ ಪರ ಆಂಡ್ರೆ ರಸೆಲ್ 6 ರನ್ ಹಾಗೂ ನಿತೀಶ್ ರಾಣಾ 49 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 30 ಎಸೆತಗಳಲ್ಲಿ 58 ರನ್‌ಗಳ ಅಗತ್ಯವಿದೆ. 15 ಓವರ್‌ಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕೋರ್ – 122/3
ವೆಂಕಟೇಶ್ ಔಟ್
ರಾಹುಲ್ ಚಹರ್ ಬೌಲ್ ಮಾಡಿದ 14ನೇ ಓವರ್‌ನ 2ನೇ ಎಸೆತದಲ್ಲಿ ರಾಣಾ ಬೌಂಡರಿ ಹೊಡೆದರೆ, 4ನೇ ಎಸೆತದಲ್ಲಿ ವೆಂಕಟೇಶ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಕೋಲ್ಕತ್ತಾ ಶತಕ ಪೂರ್ಣ
ಕರನ್ ಬೌಲ್ ಮಾಡಿದ 13ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ರಾಣಾ ಕೆಕೆಆರ್ ಮೊತ್ತವನ್ನು 100ರ ಗಡಿ ದಾಟಿಸಿದರು.
ರಾಣಾ ಅಬ್ಬರ
ಕಳೆದ 2 ಓವರ್ಗಳಲ್ಲಿ ಯಾವುದೇ ಬೌಂಡರಿ ಬಂದಿರಲಿಲ್ಲ. ಹೀಗಾಗಿ 11ನೇ ಓವರ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ರಾಣಾ ಮೊದಲ 3 ಎಸೆತಗಳಲ್ಲಿ ಬೌಂಡರಿ ಬಾರಿಸಿದರು.
10 ಓವರ್ ಅಂತ್ಯ
ರಾಯ್ ವಿಕೆಟ್ ಬಳಿಕ ಕೆಕೆಆರ್ ಇನ್ನಿಂಗ್ಸ್ ನಿಧಾನವಾಗಿ ಸಾಗುತ್ತಿದೆ. ಎರಡು ಓವರ್ಗಳಲ್ಲಿ ಯಾವುದೇ ಬೌಂಡರಿ ಬಂದಿಲ್ಲ. 10 ಓವರ್ ಅಂತ್ಯಕ್ಕೆ ಕೆಕೆಆರ್ 76/2
ಜೇಸನ್ ರಾಯ್ ಔಟ್
ಕೋಲ್ಕತ್ತಾಗೆ ದೊಡ್ಡ ಹೊಡೆತ ಬಿದ್ದಿದೆ. ಬಿರುಸಿನ ಬ್ಯಾಟ್ಸ್‌ಮನ್ ಜೇಸನ್ ರಾಯ್ 8ನೇ ಓವರ್‌ನಲ್ಲಿ ಔಟಾಗಿದ್ದಾರೆ. ಹರ್‌ಪ್ರೀತ್ ಬ್ರಾರ್ ಎಸೆತದಲ್ಲಿ ಶಾರುಖ್ ಖಾನ್ಗೆ ಕ್ಯಾಚಿತ್ತು ಔಟಾದರು.
ಜೇಸನ್ ರಾಯ್ – 38 ರನ್, 24 ಎಸೆತಗಳು 8×4
ರಾಯ್ 2 ಬೌಂಡರಿ
ಈ ಓವರ್ ಕೊನೆಯ 2 ಎಸೆತಗಳಲ್ಲಿ ರಾಯ್ 2 ಬೌಂಡರಿ ಬಾರಿಸಿದರು. ಕೋಲ್ಕತ್ತಾ ಪರ ಜೇಸನ್ ರಾಯ್ 38 ಮತ್ತು ನಿತೀಶ್ ರಾಣಾ 8 ರನ್ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕೋರ್ – 63/1
ಪವರ್ ಪ್ಲೇ ಅಂತ್ಯ, ಅರ್ಧಶತಕ
ಪವರ್ ಪ್ಲೇಯ ಕೊನೆಯ ಓವರ್‌ನಲ್ಲಿ 3 ಬೌಂಡರಿ ಬಂದವು. ಇದರಲ್ಲಿ ಮೊದಲ ಬೌಂಡರಿ ರಾಣಾ ಬ್ಯಾಟ್ನಿಂದ ಬಂದರೆ, ಉಳಿದವು ರಾಯ್ ಬ್ಯಾಟ್ನಿಂದ ಬಂದವು. ಇದರೊಂದಿಗೆ ಕೆಕೆಆರ್ ಅರ್ಧಶತಕ ಗಡಿ ಕೂಡ ದಾಟಿದೆ.
ಗುರ್ಭಾಜ್ ಔಟ್
ಎಲ್ಲಿಸ್ ಬೌಲ್ ಮಾಡಿದ 5ನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಗುರ್ಭಾಜ್ ಎಲ್ಬಿಡಬ್ಲ್ಯೂ ಆಗಿ ಔಟಾದರು.
ಕೆಕೆಆರ್ 39/1
ಗುರ್ಭಾಜ್ ಸಿಕ್ಸರ್
ಅರ್ಷದೀಪ್ ಬೌಲ್ ಮಾಡಿದ 4ನೇ ಓವರ್‌ನಲ್ಲಿ 1 ಸಿಕ್ಸರ್ ಮತ್ತು 2 ಬೌಂಡರಿಗಳು ಬಂದವು. 4 ಓವರ್‌ಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕೋರ್ – 36/0
ರಾಯ್ ಬೌಂಡರಿ
ಅರ್ಷದೀಪ್ ಬೌಲ್ ಮಾಡಿದ 2ನೇ ಓವರ್‌ನ ಮೊದಲ ಎಸೆತದಲ್ಲಿ ಜೇಸನ್ ರಾಯ್ ಬೌಂಡರಿ ಬಾರಿಸಿದರು. 2 ಓವರ್‌ಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕೋರ್ – 10/0
ಕೋಲ್ಕತ್ತಾದ ಇನ್ನಿಂಗ್ಸ್ ಆರಂಭ
ಕೋಲ್ಕತ್ತಾದ ಇನ್ನಿಂಗ್ಸ್ ಆರಂಭವಾಗಿದೆ. ಜೇಸನ್ ರಾಯ್ ಅವರೊಂದಿಗೆ ರಹಮಾನುಲ್ಲಾ ಗುರ್ಬಾಜ್ ಇನ್ನಿಂಗ್ಸ್ ತೆರೆಯಲು ಬಂದಿದ್ದಾರೆ. ಕೋಲ್ಕತ್ತಾ ಸುಯಾಶ್ ಬದಲಿಗೆ ಜೇಸನ್ ಅವರನ್ನು ಪ್ರಭಾವಿ ಆಟಗಾರನನ್ನಾಗಿ ಆಯ್ಕೆ ಮಾಡಿದೆ. ಅದೇ ಸಮಯದಲ್ಲಿ, ಪಂಜಾಬ್ ಭಾನುಕಾ ಬದಲಿಗೆ ನಾಥನ್ ಎಲ್ಲಿಸ್ ಅವರನ್ನು ಪ್ರಭಾವಿ ಆಟಗಾರನಾಗಿ ಆಯ್ಕೆ ಮಾಡಿದೆ.
180 ರನ್ ಟಾರ್ಗೆಟ್
ಕೊನೆಯ ಓವರ್‌ನಲ್ಲಿ ಒಟ್ಟು 21 ರನ್ ಬಂದವು. ಅಂತಿಮವಾಗಿ ಪಂಜಾಬ್ 7 ವಿಕೆಟ್ ಕಳೆದುಕೊಂಡು 179 ರನ್ ಟಾರ್ಗೆಟ್ ನೀಡಿದೆ.
ಶಾರುಖ್ ಅಬ್ಬರ
20ನೇ ಓವರ್‌ನ ಮೊದಲ 3 ಎಸೆತಗಳಲ್ಲಿ ಶಾರುಖ್ 3 ಬೌಂಡರಿ ಬಾರಿಸಿದರು. ಇದರಲ್ಲಿ 1 ಸಿಕ್ಸರ್ ಸೇರಿದರೆ, ಇನ್ನೇರಡು ಬೌಂಡರಿ ಬಂದವು.
150 ರನ್ ಪೂರ್ಣ
19ನೇ ಓವರ್‌ನಲ್ಲಿ 2 ಬೌಂಡರಿ ಬಾರಿಸಿದ ಶಾರುಖ್ ಖಾನ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದಾರೆ.
ಸ್ಯಾಮ್ ಕರನ್ ಔಟ್
ಸ್ಯಾಮ್ ಕರನ್ ಔಟ್ ಆಗಿದ್ದಾರೆ. 18ನೇ ಓವರ್‌ನ ಎರಡನೇ ಎಸೆತದಲ್ಲಿ ಔಟಾದರು. ವಿಕೆಟ್‌ಕೀಪರ್ ಗುರ್ಬಾಜ್ ಮತ್ತೊಮ್ಮೆ ಅದ್ಭುತ ಕ್ಯಾಚ್ ಪಡೆದರು.
ಸ್ಯಾಮ್ ಕರನ್ – 4 ರನ್, 9 ಎಸೆತಗಳು
ರಿಷಿ ಔಟ್
17ನೇ ಓವರ್‌ನ ಕೊನೆಯ ಎಸೆತದಲ್ಲಿ ರಿಷಿ ಧವನ್ ಕ್ಲೀನ್ ಬೌಲ್ಡ್ ಆದರು.
ಧವನ್ ಸಿಕ್ಸ್
ವರುಣ್ ಬೌಲ್ ಮಾಡಿದ 17ನೇ ಓವರ್‌ನ ಮೊದಲ ಎಸೆತದಲ್ಲಿ ರಿಷಿ ಧವನ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
ಧವನ್ ಔಟ್
ಕೆಕೆಆರ್ ನಾಯಕ ಪಂಜಾಬ್ ನಾಯಕನ ವಿಕೆಟ್ ಉರುಳಿಸಿದ್ದಾರೆ. ರಾಣಾ ಬೌಲ್ ಮಾಡಿದ 15ನೇ ಓವರ್‌ನಲ್ಲಿ ಧವನ್ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಧವನ್ ಅರ್ಧಶತಕ
ನರೈನ್ ಬೌಲ್ ಮಾಡಿದ 14ನೇ ಓವರ್‌ನ 3ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಧವನ್ ಅರ್ಧಶತಕ ಪೂರೈಸಿದರು.
ಜಿತೇಶ್ ಔಟ್
ವರುಣ್ ಬೌಲ್ ಮಾಡಿದ 13ನೇ ಓವರ್‌ನಲ್ಲಿ ಜಿತೇಶ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಪಂಜಾಬ್ ಶತಕ ಪೂರ್ಣ
12ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿದ ಧವನ್ ಪಂಜಾಬ್ ಮೊತ್ತವನ್ನು 100ರ ಗಡಿ ದಾಟಿಸಿದರು.
ಜಿತೇಶ್ ಸಿಕ್ಸರ್
ಸುಯ್ಯಾಶ್ ಶರ್ಮಾ ಬೌಲ್ ಮಾಡಿದ 11ನೇ ಓವರ್‌ನಲ್ಲಿ ಜಿತೇಶ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. 11 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 93/3
10 ಓವರ್ ಅಂತ್ಯ
ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ 33 ರನ್ ಹಾಗೂ ಜಿತೇಶ್ ಶರ್ಮಾ 13 ರನ್ ಗಳಿಸಿ ಆಡುತ್ತಿದ್ದಾರೆ. ಇಲ್ಲಿಂದ ದೊಡ್ಡ ಗುರಿ ನೀಡಲು ಪಂಜಾಬ್ ತಂಡ ಪ್ರಯತ್ನಿಸಲಿದೆ. 10 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 82/3
9 ಓವರ್ ಅಂತ್ಯ
ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ 32 ರನ್ ಹಾಗೂ ಜಿತೇಶ್ ಶರ್ಮಾ 11 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಜಿತೇಶ್ ಶರ್ಮಾ ಇಂದಿನ ಪಂದ್ಯದ ಮೊದಲ ಸಿಕ್ಸರ್ ಬಾರಿಸಿದರು. 9 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 79/3
7 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 64/3
ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ 26 ರನ್ ಹಾಗೂ ಜಿತೇಶ್ ಶರ್ಮಾ 2 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಧವನ್ 1 ಬೌಂಡರಿ ಬಾರಿಸಿದರು. 7 ಓವರ್‌ಗಳ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 64/3
ಲಿವಿಂಗ್ಸ್ಟನ್ ಔಟ್
ಪವರ್ ಪ್ಲೇಯ ಕೊನೆಯ ಓವರ್‌ನ ಮೂರನೇ ಎಸೆತದಲ್ಲಿ ವರುಣ್, ಲಿವಿಂಗ್ಸ್ಟನ್ರನ್ನು ಎಲ್ಬಿ ಬಲೆಗೆ ಬೀಳಿಸಿದರು.
ಹ್ಯಾಟ್ರಿಕ್ ಬೌಂಡರಿ
ರಸೆಲ್ ಬೌಲ್ ಮಾಡಿದ 5ನೇ ಓವರ್‌ನಲ್ಲಿ ಲಿವಿಂಗ್ಸ್ಟನ್ 3 ಬೌಂಡರಿ ಹೊಡೆದರು.
ಶೂನ್ಯಕ್ಕೆ ರಾಜಪಕ್ಸೆ ಔಟ್
ಪ್ರಭ್ಸಿಮ್ರಾನ್ ವಿಕೆಟ್ ಬಳಿಕ ಬಂದಿದ್ದ ರಾಜಪಕ್ಸೆ ಕೂಡ ಯಾವುದೇ ರನ್ ಬಾರಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹರ್ಷಿತ್ ಈ ವಿಕೆಟ್ ಉರುಳಿಸಿದರು.
ಧವನ್ ಬೌಂಡರಿ
ಅರೋರ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ಧವನ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಹೊಡೆದರು.
ಪ್ರಭ್ಸಿಮ್ರಾನ್ ಔಟ್
ರಾಣಾ ಬೌಲ್ ಮಾಡಿದ 2ನೇ ಓವರ್‌ನಲ್ಲಿ 2 ಬೌಂಡರಿ ಬಾರಿಸಿದ ಪ್ರಭ್ಸಿಮ್ರಾನ್ ಓವರ್‌ನ ಕೊನೆಯ ಎಸೆತದಲ್ಲಿ ಕೀಪರ್ಗೆ ಕ್ಯಾಚಿತ್ತು ಔಟಾದರು.
ಮೂರು ಬೌಂಡರಿ
ಮೊದಲ ಓವರ್‌ನಲ್ಲೇ ಪ್ರಭ್ಸಿಮ್ರಾನ್ 3 ಬೌಂಡರಿ ಬಾರಿಸಿದರು. 1 ಓವರ್ ನಂತರ ಪಂಜಾಬ್ ಕಿಂಗ್ಸ್ ಸ್ಕೋರ್ – 12/0
ಪಂಜಾಬ್ ಇನ್ನಿಂಗ್ಸ್ ಆರಂಭ
ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಪಂಜಾಬ್ ಕಿಂಗ್ಸ್ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ. ವೈಭವ್ ಅರೋರಾ ಬೌಲಿಂಗ್ ಆರಂಭಿಸಿದ್ದಾರೆ.
ಪಂಜಾಬ್ ಕಿಂಗ್ಸ್
ಶಿಖರ್ ಧವನ್ (ನಾಯಕ), ಪ್ರಬ್ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ಸ್ಟೋನ್, ಜೀತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್ ಮತ್ತು ಅರ್ಶ್ದೀಪ್ ಸಿಂಗ್.
ಕೋಲ್ಕತ್ತಾ ನೈಟ್ ರೈಡರ್ಸ್
ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಟಾಸ್ ಗೆದ್ದ ಪಂಜಾಬ್
ಟಾಸ್ ಗೆದ್ದ ಪಂಜಾಬ್ ನಾಯಕ ಶಿಖರ್ ಧವನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - May 08,2023 7:00 PM