Asia Cup 2023: ಸ್ಟಾರ್ ಆಟಗಾರನ ರೀ ಎಂಟ್ರಿ; ಏಷ್ಯಾಕಪ್ ತಂಡದಿಂದ ಸಂಜು ಸ್ಯಾಮ್ಸನ್​ಗೆ ಗೇಟ್​ಪಾಸ್..!

Sanju Samson: ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಏಕದಿನ ಮತ್ತು ಟಿ 20 ಐ ಸರಣಿಯಲ್ಲಿ ಸಿಕ್ಕ ಸೀಮಿತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಏಷ್ಯಾಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

|

Updated on: Aug 17, 2023 | 11:11 AM

ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಏಕದಿನ ಮತ್ತು ಟಿ 20 ಐ ಸರಣಿಯಲ್ಲಿ ಸಿಕ್ಕ ಸೀಮಿತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಏಷ್ಯಾಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

1 / 7
ವರದಿಯ ಪ್ರಕಾರ, ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾಕಪ್​​ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಭಾನುವಾರ (ಆಗಸ್ಟ್ 20) ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಅಲ್ಲದೆ ಕೆರಿಬಿಯನ್ ದ್ವೀಪದಲ್ಲಿ ಕಳಪೆ ಪ್ರದರ್ಶನ ನೀಡಿದ ಸಂಜುಗೆ ಈ ಪಂದ್ಯಾವಳಿಯಿಂದ ಕೋಕ್ ನೀಡಲಿದೆ ಎಂದು ವರದಿಯಾಗಿದೆ.

2 / 7
ವಾಸ್ತವವಾಗಿ ಸಂಜು, ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 9 ಮತ್ತು 51 ರನ್ ಬಾರಿಸಿದ್ದರು. ಇದರ ಜೊತೆಗೆ ಮೂರು ಟಿ20 ಪಂದ್ಯಗಳಲ್ಲಿ ಕ್ರಮವಾಗಿ 12, 7 ಮತ್ತು 13 ರನ್ ಕಲೆಹಾಕುವುದರೊಂದಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಮುಂಬರುವ ಏಷ್ಯಾಕಪ್​ಗಾಗಿ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಲ್ಲಿರುವ 15 ಸದಸ್ಯರ ಪಟ್ಟಿಯಲ್ಲಿ ಸಂಜು ಹೆಸರಿರುವುದು ಅನುಮಾನವಾಗಿದೆ.

3 / 7
ಇನ್ನು ಏಷ್ಯಾಕಪ್‌ನಲ್ಲಿ ಭಾರತ ತನ್ನ ಅಭಿಯಾನವನ್ನು ಸೆಪ್ಟೆಂಬರ್ 2 ರಂದು ಪಲ್ಲೆಕೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾರಂಭಿಸಲಿದೆ. ಈ ವರ್ಷ ಪಂದ್ಯಾವಳಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ. ಇದೀಗ, ಆಯ್ಕೆಗಾರರು ಏಷ್ಯಾಕಪ್ ತಂಡವನ್ನು ಮಾತ್ರ ಆಯ್ಕೆ ಮಾಡುವ ಸಾಧ್ಯತೆಯಿದೆ. ಆ ನಂತರ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು TOI  ವರದಿ ಮಾಡಿದೆ.

4 / 7
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರಿಂದಾಗಿ ಸಂಜು ಅವರನ್ನು ಕೈಬಿಡುವ ಸಾಧ್ಯತೆಯಿದೆ. ಅಲ್ಲದೆ KL ರಾಹುಲ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಫಿಟ್ ಆಗಿದ್ದರೆ, ರಾಹುಲ್ ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿರುತ್ತಾರೆ. ಅವರ ನಂತರದ ಅವಕಾಶ ಇಶಾನ್​ಗೆ ಇರಲಿದೆ. ಹೀಗಾಗಿ 13 ಏಕದಿನ ಪಂದ್ಯಗಳಲ್ಲಿ 55.71 ಬ್ಯಾಟಿಂಗ್ ಸರಾಸರಿ ಹೊಂದಿರುವ ಸ್ಯಾಮ್ಸನ್‌ಗೆ ಏಷ್ಯಾಕಪ್ ಬಾಗಿಲು ಮುಚ್ಚಲಿದೆ ಎಂದು ವರದಿಯಾಗಿದೆ.

5 / 7
ಪ್ರಮುಖ ದಿನಪತ್ರಿಕೆಯ ವರದಿಯ ಪ್ರಕಾರ, ಈ ಏಷ್ಯಾಕಪ್​ಗೆ ಆಯ್ಕೆದಾರರು ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಅವಕಾಶ ನೀಡಲಿದ್ದಾರೆ. ಬುಮ್ರಾ ಮತ್ತು ಕೃಷ್ಣ ಗಾಯದ ಕಾರಣದಿಂದಾಗಿ ಸುಮಾರು ಒಂದು ವರ್ಷ ಮೈದಾನದಿಂದ ದೂರ ಉಳಿದಿದ್ದರು. ಆದರೆ ಶುಕ್ರವಾರ (ಆಗಸ್ಟ್ 18) ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ಈ ಇಬ್ಬರು ಕಣಕ್ಕಿಳಿಯಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಈ ಇಬ್ಬರ ಪ್ರದರ್ಶನವನ್ನು ಗಮನಿಸಿ ಆ ಬಳಿಕ ಏಷ್ಯಾಕಪ್​ಗೆ ಈ ಇಬ್ಬರ ಆಯ್ಕೆ ಖಚಿತವಾಗಲಿದೆ ಎಂದು ವರದಿಯಾಗಿದೆ.

6 / 7
2023 ರ ಏಷ್ಯಾಕಪ್‌ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಮ್ಮ ತಂಡವನ್ನು ಘೋಷಿಸಿದೆ. ಆದರೆ ಬಿಸಿಸಿಐ ಇಲ್ಲಿಯವರೆಗೆ ತಂಡವನ್ನು ಪ್ರಕಟಿಸಿಲ್ಲ. ಏಕೆಂದರೆ ಪ್ರಮುಖ ಸ್ಟಾರ್ ಆಟಗಾರರ ಫಿಟ್‌ನೆಸ್ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಅದರಲ್ಲಿ ರಾಹುಲ್ ಹಾಗೂ ಶ್ರೇಯಸ್ ಕೂಡ ಸೇರಿದ್ದು, ಈ ಇಬ್ಬರು ಅಭ್ಯಾಸ ಪಂದ್ಯವನ್ನು ಆಡಿದ ಬಳಿಕ, ಮಂಡಳಿ ಒಂದು ತೀರ್ಮಾನಕ್ಕೆ ಬರಲಿದೆ. ಆ ಬಳಿಕ ಏಷ್ಯಾಕಪ್​ಗೆ ತಂಡ ಪ್ರಕಟಿಸಲಿದೆ.

7 / 7
Follow us