- Kannada News Photo gallery Cricket photos ICC Men's T20I Rankings Suryakumar Yadav Consolidates Top Spot As Shubman Gill Makes Huge Leap
ICC T20I Rankings: ಅಗ್ರಸ್ಥಾನದಲ್ಲಿ ಸೂರ್ಯ; ಭರ್ಜರಿ ಮುಂಬಡ್ತಿ ಪಡೆದ ಶುಭ್ಮನ್ ಗಿಲ್..!
ICC T20I Rankings: ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅಗ್ರ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Updated on:Aug 17, 2023 | 9:27 AM

ಐಸಿಸಿ ಪುರುಷರ ನೂತನ ಟಿ20 ಶ್ರೇಯಾಂಕ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಅಗ್ರ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 102 ರನ್ ಗಳಿಸಿದ ಶುಭ್ಮನ್ ಗಿಲ್ ಅದೇ ಪಟ್ಟಿಯಲ್ಲಿ 43 ಸ್ಥಾನಗಳನ್ನು ಮೇಲೇರಿ 25 ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ.

ವೆಸ್ಟ್ ಇಂಡೀಸ್ ಕಳೆದ ವಾರ ತಮ್ಮ ತವರು ಟಿ20 ಸರಣಿಯಲ್ಲಿ ಭಾರತವನ್ನು 3-2 ಅಂತರದಿಂದ ಸೋಲಿಸುವುದರೊಂದಿಗೆ ಆರು ವರ್ಷಗಳ ಬರವನ್ನು ನೀಗಿಸಿಕೊಂಡಿತ್ತು. ಐದು ಪಂದ್ಯಗಳ ಸರಣಿಯಲ್ಲಿ ತಂಡದ ಹಲವು ಆಟಗಾರರಿಂದ ಕೆಲವು ಅತ್ಯುತ್ತಮ ಪ್ರದರ್ಶನ ಕಂಡುಬಂದಿತ್ತು.

ಫ್ಲೋರಿಡಾದಲ್ಲಿ ನಡೆದ ಸರಣಿಯ ನಿರ್ಧಾರಕ ಪಂದ್ಯದಲ್ಲಿ ಆರಂಭಿಕ ಆಟಗಾರ ಬ್ರ್ಯಾಂಡನ್ ಕಿಂಗ್ ಅಜೇಯ 85 ರನ್ ದಾಖಲಿಸಿ ಒಟ್ಟಾರೆಯಾಗಿ 13 ನೇ ಸ್ಥಾನಕ್ಕೇರಿದ್ದಾರೆ.

ಹಾಗೆಯೇ ಮತ್ತೊಬ್ಬ ಆಟಗಾರ ಬ್ರ್ಯಾಂಡನ್ ಕಿಂಗ್ ಸರಣಿಯಲ್ಲಿ ಒಟ್ಟು 173 ರನ್ ದಾಖಲಿಸಿದರೆ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ನಿಕೋಲಸ್ ಪೂರನ್ 176 ರನ್ ದಾಖಲಿಸಿದರು. ಇದರೊಂದಿಗೆ ಒಂದು ಸ್ಥಾನ ಕುಸಿತ ಕಂಡು ಶ್ರೇಯಾಂಕದಲ್ಲಿ 15 ನೇ ಸ್ಥಾನಕ್ಕೆ ಇಳಿದಿದ್ದಾರೆ.

ಇನ್ನು ಭಾರತದ ವಿರುದ್ಧ ಬೌಲಿಂಗ್ನಲ್ಲಿ ಮಿಂಚಿದ ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೆಲ್ ಹೊಸೈನ್, ಐದು ವಿಕೆಟ್‌ಗಳ ಸಹಾಯದಿಂದ ಟಿ20 ಬೌಲರ್ ಶ್ರೇಯಾಂಕದಲ್ಲಿ ಒಟ್ಟಾರೆಯಾಗಿ 11 ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ.

ಭಾರತದ ಪರ ಮಿಂಚಿದ್ದ ಕುಲ್ದೀಪ್ ಯಾದವ್ ಆಡಿದ ಐದು ಪಂದ್ಯಗಳಲ್ಲಿ ಆರು ವಿಕೆಟ್ ಉರುಳಿಸಿದ್ದರು. ಇದರ ಲಾಭ ಪಡೆದಿರುವ ಕುಲ್ದೀಪ್ 28 ನೇ ಸ್ಥಾನಕ್ಕೆ ತಲುಪಿದ್ದಾರೆ.

ಆಲ್ರೌಂಡರ್ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ವೇಗಿ ರೊಮಾರಿಯೊ ಶೆಫರ್ಡ್ ಬೌಲರ್‌ಗಳ ಪಟ್ಟಿಯಲ್ಲಿ 20 ಸ್ಥಾನಗಳ ಜಿಗಿತ ಕಂಡು 63 ನೇ ಸ್ಥಾನಕ್ಕೆ ಬಂದು ತಲುಪಿದರೆ, ಆಲ್ರೌಂಡರ್ಗಳ ಶ್ರೇಯಾಂಕದಲ್ಲಿ 19 ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
Published On - 7:22 am, Thu, 17 August 23



















