Virat Kohli: ಲಂಕಾ ಕ್ರಿಕೆಟಿಗನಿಂದ ಕಿಂಗ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಗಿಫ್ಟ್! ಇದರ ವಿಶೇಷತೆ ಏನು ಗೊತ್ತಾ?

Virat Kohli: ಅಫ್ರಿದಿ ಎದುರು ವಿಶೇಷ ತಂತ್ರ ರೂಪಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಲಂಕಾದ ಸ್ಥಳೀಯ ಆಟಗಾರರ ಜೊತೆಗೂಡಿ ಅಭ್ಯಾಸ ನಡೆಸಿತು. ಈ ವೇಳೆ ಲಂಕಾ ನೆಟ್ ಬೌಲರ್ ಚಂದ್ರಮೋಹನ್ ಕ್ರಿಶಾಂತ್ ಅವರು ಕೊಹ್ಲಿಯನ್ನು ಭೇಟಿಯಾಗಿ ಅವರಿಗೆ ಬೆಳ್ಳಿ ಬ್ಯಾಟ ಅನ್ನು ಉಡುಗೊರೆಯಾಗಿ ನೀಡಿದರು.

Virat Kohli: ಲಂಕಾ ಕ್ರಿಕೆಟಿಗನಿಂದ ಕಿಂಗ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಗಿಫ್ಟ್! ಇದರ ವಿಶೇಷತೆ ಏನು ಗೊತ್ತಾ?
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Sep 10, 2023 | 9:29 AM

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಏಷ್ಯಾಕಪ್ ಸೂಪರ್-4 ಸುತ್ತಿನಲ್ಲಿ (Asia Cup 2023) ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂದು ಪಾಕಿಸ್ತಾನವನ್ನು (India vs Pakistan) ಎದುರಿಸಲಿದೆ. ಈ ಹೈವೋಲ್ಟೇಜ್ ಕದನಕ್ಕೆ ಉಭಯ ತಂಡಗಳು ಈಗಾಗಲೇ ಕೊಲಂಬೊ ತಲುಪಿದ್ದು, ಮೈದಾನದಲ್ಲಿ ಬೆವರು ಹರಿಸುತ್ತಿವೆ. ಪಾಕ್ ತಂಡವನ್ನು ಮಣಿಸಲೇಬೇಕೆಂಬ ಪಣ ತೊಟ್ಟಿರುವ ರೋಹಿತ್ ಪಡೆ (Rohit Sharma) ಪಂದ್ಯಕ್ಕೂ ಮುನ್ನ ವಿಶೇಷ ಅಭ್ಯಾಸ ನಡೆಸಿತು. ಈ ವೇಳೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮುನ್ನ ಶ್ರೀಲಂಕನ್ ಆಟಗಾರರು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಆತ್ಮೀಯ ಕ್ಷಣಗಳನ್ನು ಕಳೆದರು. ಈ ವೇಳೆ ಕೊಹ್ಲಿಯಿಂದ ಕ್ರಿಕೆಟ್ ಟಿಪ್ಸ್​ ಪಡೆದುಕೊಂಡ ಲಂಕಾದ ಯುವ ನೆಟ್ ಬೌಲರ್​ ಚಂದ್ರಮೋಹನ್ ಕ್ರಿಶಾಂತ್​, ಕಿಂಗ್ ಕೊಹ್ಲಿಗೆ ಬೆಳ್ಳಿಯ ಬ್ಯಾಟನನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬೆಳ್ಳಿ ಬ್ಯಾಟ್ ಗಿಫ್ಟ್ ನೀಡಿದ ಲಂಕಾ ನೆಟ್ ಬೌಲರ್

ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮೊದಲ ಮುಖಾಮುಖಿಯಲ್ಲಿ ಟೀಂ ಇಂಡಿಯಾದ ಟಾಪ್ ಆರ್ಡರ್ ಪಾಕ್ ವೇಗಿ ಶಾಹೀನ್ ಅಫ್ರಿದಿ ಎದುರು ರನ್​ಗಳಿಸಲು ತಡವರಿಸಿತ್ತು. ಹೀಗಾಗಿ ಅಫ್ರಿದಿ ಎದುರು ವಿಶೇಷ ತಂತ್ರ ರೂಪಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಲಂಕಾದ ಸ್ಥಳೀಯ ಆಟಗಾರರ ಜೊತೆಗೂಡಿ ಅಭ್ಯಾಸ ನಡೆಸಿತು. ಈ ವೇಳೆ ಲಂಕಾ ನೆಟ್ ಬೌಲರ್ ಚಂದ್ರಮೋಹನ್ ಕ್ರಿಶಾಂತ್ ಅವರು ಕೊಹ್ಲಿಯನ್ನು ಭೇಟಿಯಾಗಿ ಅವರಿಗೆ ಬೆಳ್ಳಿ ಬ್ಯಾಟ ಅನ್ನು ಉಡುಗೊರೆಯಾಗಿ ನೀಡಿದರು.

ವಿಶ್ವಕಪ್​ಗೂ ಮುನ್ನ ಕಿಂಗ್ ಕೊಹ್ಲಿಗೆ ವಜ್ರದ ಬ್ಯಾಟ್ ಗಿಫ್ಟ್! ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ..!

76 ಶತಕಗಳ ಮಾಹಿತಿ

ಈ ಬ್ಯಾಟ್​ ವಿಶೇಷತೆ ಏನೆಂದರೆ, ಕೊಹ್ಲಿಗೆ ನೀಡಿದ ಈ ಬೆಳ್ಳಿಯ ಬ್ಯಾಟ್ ಮೇಲೆ ವಿರಾಟ್ ಸಿಡಿಸಿರುವ ಎಲ್ಲಾ 76 ಅಂತರಾಷ್ಟ್ರೀಯ ಶತಕಗಳ ವಿವರನ್ನು ಈ ಬ್ಯಾಟ್​ ಮೇಲೆ ಮುದ್ರಿಸಲಾಗಿದೆ. ಇನ್ನು ಕೊಹ್ಲಿಗೆ ಈ ವಿಶೇಷ ಉಡುಗೊರೆ ನೀಡಿದ ಬಳಿಕ ಮಾತನಾಡಿದ ಕ್ರಿಶಾಂತ್, “ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ನಾನು ಅವರನ್ನು ಕೊನೆಯ ಬಾರಿಗೆ 2017 ರಲ್ಲಿ ನೆಟ್ ಅಭ್ಯಾಸದ ಸಮಯದಲ್ಲಿ ಭೇಟಿಯಾಗಿದ್ದೆ. ಇದು ಅವರಿಗೆ ನನ್ನ ಚಿಕ್ಕ ಉಡುಗೊರೆಯಾಗಿದೆ. ಈ ಬ್ಯಾಟ್ ಅವರು ಇಲ್ಲಿಯವರೆಗೆ ಸಿಡಿಸಿದ ಪ್ರತಿ ಶತಕವನ್ನು ಒಳಗೊಂಡಿದೆ. ಈ ಬ್ಯಾಟ್​ ಅನ್ನು ನಿರ್ಮಿಸಲು ನನಗೆ ಮೂರು ತಿಂಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಈ ಮೊದಲು ವಜ್ರದ ಬ್ಯಾಟ್ ಗಿಫ್ಟ್

ಇದಕ್ಕೂ ಮೊದಲು ಕಿಂಗ್ ಕೊಹ್ಲಿಗೆ ಸೂರತ್ ಮೂಲದ ಉದ್ಯಮಿಯೊಬ್ಬರು ಡೈಮಂಡ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಬ್ಯಾಟ್ 1.04 ಕ್ಯಾರೆಟ್ ಮೂಲ ವಜ್ರದ್ದಾಗಿದ್ದು, ಈ ಬ್ಯಾಟ್ 15 ಮಿಲಿ ಮೀಟರ್ ಉದ್ದ ಮತ್ತು ಐದು ಮಿಲಿ ಮೀಟರ್ ಅಗಲ ಇದೆ. ಇದರ ಬೆಲೆ 10 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 am, Sun, 10 September 23