ಏಷ್ಯನ್ ಕ್ರೀಡಾಕೂಟಕ್ಕೆ ಟೀಮ್ ಇಂಡಿಯಾ ಅಭ್ಯಾಸ: ಬೆಂಗಳೂರಿಗೆ ಬರುತ್ತಿದೆ ರುತುರಾಜ್ ಪಡೆ

Asian Games 2023 Cricket: ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ ಮಹಿಳೆಯರ ಕ್ರಿಕೆಟ್ ಪಂದ್ಯಗಳು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದ್ದು, ಪುರುಷರ ಪಂದ್ಯಗಳು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿವೆ. ಎಲ್ಲಾ ಪಂದ್ಯಗಳು ಟಿ20 ಮಾದರಿಯಲ್ಲಿ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಎಲ್ಲರೂ ಬೆಂಗಳೂರಿನಲ್ಲಿ ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಏಷ್ಯನ್ ಕ್ರೀಡಾಕೂಟಕ್ಕೆ ಟೀಮ್ ಇಂಡಿಯಾ ಅಭ್ಯಾಸ: ಬೆಂಗಳೂರಿಗೆ ಬರುತ್ತಿದೆ ರುತುರಾಜ್ ಪಡೆ
Team India Asian Games
Follow us
Vinay Bhat
|

Updated on: Sep 10, 2023 | 10:26 AM

ಏಷ್ಯನ್ ಗೇಮ್ಸ್ 2023 ಕ್ಕಾಗಿ (Asian Games 2023) ಚೀನಾಕ್ಕೆ ಪ್ರಯಾಣ ಬೆಳೆಸುವ ಮೊದಲು ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ತಂಡದವು ಮುಂದಿನ ವಾರ ಎನ್​ಸಿಎ ಅಥವಾ ಆಲೂರಿನಲ್ಲಿ ಶಿಬಿರಕ್ಕೆ ಒಳಗಾಗಲಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಕೆಲವೇ ದಿನಗಳ ಶಿಬಿರ ನಿಗದಿ ಮಾಡಲಾಗಿದ್ದು ನಂತರ ಚೀನಾಕ್ಕೆ ತೆರಳಲಿದ್ದಾರೆ. ಆದರೆ ರುತುರಾಜ್ ಗಾಯಕ್ವಾಡ್ ಮತ್ತು ತಂಡ ಏಷ್ಯಾಡ್ ಪಂದ್ಯಾವಳಿಗೆ ತಯಾರಿ ನಡೆಸಲು 2 ವಾರಗಳ ಸಮಯವನ್ನು ನೀಡಲಾಗಿದೆ.

ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ಪುರುಷರ ಶಿಬಿರವು ಸೆಪ್ಟೆಂಬರ್ 12 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 24 ರವರೆಗೆ ನಡೆಯಲಿದೆ. ಮತ್ತೊಂದೆಡೆ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡಕ್ಕೆ ಸೆಪ್ಟೆಂಬರ್ 13 ರಿಂದ 16 ರವರೆಗೆ 4 ದಿನಗಳವರೆಗೆ ಕಿರು ಶಿಬಿರವನ್ನು ಏರ್ಪಡಿಸಲಾಗಿದೆ. “ಏಷ್ಯನ್ ಗೇಮ್ಸ್‌ನಂತಹ ಬಹು-ಕ್ರೀಡಾ ಸ್ಪರ್ಧೆಯಲ್ಲಿ ಅನುಭವವನ್ನು ಪಡೆಯುವ ಅನೇಕ ಆಟಗಾರರಿಗೆ ಈ ಶಿಬಿರವು ಮೌಲ್ಯಯುತವಾಗಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೃಷಿಕೇಶ್ ಕಾಂತಿಕರ್ ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡವು ಕೇವಲ 4 ದಿನಗಳ ಕಿರು ಶಿಬಿರವನ್ನು ಹೊಂದಿದ್ದು, ಭಾರತ ಮಹಿಳಾ ತಂಡ ಸೆಪ್ಟೆಂಬರ್ 17 ರಂದು ಚೀನಾಕ್ಕೆ ತೆರಳಲಿದೆ. ಆದಾಗ್ಯೂ, ಪುರುಷರ ಸ್ಪರ್ಧೆಯು ಸೆಪ್ಟೆಂಬರ್ 26 ರಂದು ಪ್ರಾರಂಭವಾಗುವುದರಿಂದ ರುತುರಾಜ್ ಪಡೆ ಬೆಂಗಳೂರಿನಲ್ಲಿ 12 ದಿನಗಳ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಇದನ್ನೂ ಓದಿ
Image
ಲಂಕಾ ಕ್ರಿಕೆಟಿಗನಿಂದ ಕಿಂಗ್ ಕೊಹ್ಲಿಗೆ ಬೆಳ್ಳಿ ಬ್ಯಾಟ್ ಗಿಫ್ಟ್!
Image
ಪಾಕ್ ತಂಡ ಮಾಡಿಕೊಂಡಿರುವ ಎಡವಟ್ಟಿನ ಲಾಭ ಪಡೆಯುತ್ತಾ ಟೀಂ ಇಂಡಿಯಾ?
Image
ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ರೋಹಿತ್ ಪಡೆ?
Image
ಆರ್. ಪ್ರೇಮದಾಸ ಸ್ಟೇಡಿಯಂ ಪಿಚ್ ಬಗ್ಗೆ ಕೇಳಿದ್ರೆ ಅಚ್ಚರಿ ಆಗುತ್ತೆ

ಕೊಲಂಬೊದಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ; ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್..!

ಮಹಿಳೆಯರ ಪಂದ್ಯಗಳು ಸೆಪ್ಟೆಂಬರ್ 19 ರಿಂದ 28 ರವರೆಗೆ ನಡೆಯಲಿದ್ದು, ಪುರುಷರ ಪಂದ್ಯಗಳು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿವೆ. ಎಲ್ಲಾ ಪಂದ್ಯಗಳು ಟಿ20 ಮಾದರಿಯಲ್ಲಿ ಏರ್ಪಡಿಸಲಾಗಿದೆ. ಕ್ವಾರ್ಟರ್ ಫೈನಲ್ ಹಂತದಿಂದ ನೇರವಾಗಿ ಪುರುಷರ ಮತ್ತು ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ಪಂದ್ಯಗಳ ನಿಷೇಧವನ್ನು ಪೂರೈಸಿ, ಭಾರತ ಫೈನಲ್‌ಗೆ ತಲುಪಿದರೆ ತಂಡದಲ್ಲಿ ಕಾಣಿಸಿಕೊಳ್ಳಬಹುದು.

ಪುರುಷರ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ , ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್-ಕೀಪರ್).

ಸ್ಟ್ಯಾಂಡ್‌ಬೈಸ್: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ಸಹಾಯಕ ಸಿಬ್ಬಂದಿ: ವಿವಿಎಸ್ ಲಕ್ಷ್ಮಣ್ (ಮುಖ್ಯ ಕೋಚ್), ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್), ಮುನೀಶ್ ಬಾಲಿ (ಫೀಲ್ಡಿಂಗ್ ಕೋಚ್), ತುಳಸಿ ರಾಮ್ ಯುವರಾಜ್ (ಫಿಸಿಯೋ), ಎಐ ಹರ್ಷ (ಎಸ್ & ಸಿ ಕೋಚ್), ನಂದನ್ ಮಜ್ಹಿ (ಮಸ್ಸರ್), ಮರೂಫ್ ಫಜಂದರ್ (ಲಾಜಿಸ್ಟಿಕ್ಸ್ ಮ್ಯಾನೇಜರ್) ಮತ್ತು ಅಶೋಕ್ ಸಾಧ್ (ತರಬೇತಿ ಸಹಾಯಕ).

ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್, ಮಿನ್ನು ಮಣಿ, ಕನಿಕಾ , ಉಮಾ ಚೆಟ್ರಿ, ಅನುಷಾ ಬಾರೆಡ್ಡಿ.

ಸ್ಟ್ಯಾಂಡ್‌ಬೈಸ್: ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್.

ಸಹಾಯಕ ಸಿಬ್ಬಂದಿ: ಹೃಷಿಕೇಶ್ ಕಾನಿಟ್ಕರ್ (ಮುಖ್ಯ ಕೋಚ್), ರಾಜೀಬ್ ದತ್ತಾ (ಬೌಲಿಂಗ್ ಕೋಚ್), ಸುಭದೀಪ್ ಘೋಷ್ (ಫೀಲ್ಡಿಂಗ್ ಕೋಚ್), ಆನಂದ್ ಡೇಟ್ (ಎಸ್ & ಸಿ ಕೋಚ್), ವಿಕಾಸ್ ಪಂಡಿತ್ (ಲಾಜಿಸ್ಟಿಕ್ಸ್ ಮ್ಯಾನೇಜರ್), ಕ್ರಾಂತಿ ಕುಮಾರ್ ಗೊಲ್ಲಾ (ತರಬೇತಿ ಸಹಾಯಕ), ನೇಹಾ ಕಾರ್ಣಿಕ್ (ಫಿಸಿಯೋ ) ಮತ್ತು ಆಕಾಂಕ್ಷಾ ಸತ್ಯವಂಶಿ (ಭೌತಿಕ).

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ