AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ಗೂ ಮುನ್ನ ಕಿಂಗ್ ಕೊಹ್ಲಿಗೆ ವಜ್ರದ ಬ್ಯಾಟ್ ಗಿಫ್ಟ್! ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ..!

Virat Kohli: ಆಗಸ್ಟ್ 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿರಿಸಿ 15 ವರ್ಷ ಪೂರ್ಣಗೊಳಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸೂರತ್‌ನ ಉದ್ಯಮಿಯೊಬ್ಬರು ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಆದರೆ ಇದು ಸಾಮಾನ್ಯ ಬ್ಯಾಟ್ ಅಲ್ಲ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬ್ಯಾಟ್.

ವಿಶ್ವಕಪ್​ಗೂ ಮುನ್ನ ಕಿಂಗ್ ಕೊಹ್ಲಿಗೆ ವಜ್ರದ ಬ್ಯಾಟ್ ಗಿಫ್ಟ್! ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ..!
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on:Aug 19, 2023 | 9:46 AM

Share

ನಿನ್ನೆಯಷ್ಟೆ ಅಂದರೆ, ಆಗಸ್ಟ್ 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿರಿಸಿ 15 ವರ್ಷ ಪೂರ್ಣಗೊಳಿಸಿದ ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ಸೂರತ್‌ನ ಉದ್ಯಮಿಯೊಬ್ಬರು ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ಆದರೆ ಇದು ಸಾಮಾನ್ಯ ಬ್ಯಾಟ್ ಅಲ್ಲ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಬ್ಯಾಟ್. ಇಂಡಿಯಾ ಟುಡೇ ವರದಿ ಪ್ರಕಾರ, ಸೂರತ್ ಮೂಲದ ಉದ್ಯಮಿಯೊಬ್ಬರು ವಿರಾಟ್ ಕೊಹ್ಲಿಗೆ ಡೈಮಂಡ್ ಬ್ಯಾಟ್ (Diamond Bat) ಉಡುಗೊರೆ ನೀಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಕೊಹ್ಲಿಗೆ ನೀಡಲಿರುವ ಈ ಬ್ಯಾಟ್ 1.04 ಕ್ಯಾರೆಟ್ ಮೂಲ ವಜ್ರದ್ದಾಗಿದ್ದು, ಈ ಬ್ಯಾಟ್ 15 ಮಿಲಿ ಮೀಟರ್ ಉದ್ದ ಮತ್ತು ಐದು ಮಿಲಿ ಮೀಟರ್ ಅಗಲ ಇರಲಿದ್ದು, ಇದರ ಬೆಲೆ 10 ಲಕ್ಷ ರೂಪಾಯಿ ಎನ್ನಲಾಗಿದೆ. ಡೈಮಂಡ್ ಟೆಕ್ನಾಲಜಿ ತಜ್ಞ ಮತ್ತು ಲೆಕ್ಸಸ್ ಸಾಫ್ಟ್‌ಮ್ಯಾಕ್ ಕಂಪನಿಯ ನಿರ್ದೇಶಕ ಉತ್ಪಲ್ ಮಿಸ್ತ್ರಿ ಅವರು ಈ ಬ್ಯಾಟ್ ತಯಾರಿಸುವ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

Virat Kohli: 5475 ದಿನಗಳ ಕ್ರಿಕೆಟ್ ಬದುಕಿನಲ್ಲಿ ಕಿಂಗ್ ಕೊಹ್ಲಿಯ ಪ್ರಮುಖ 15 ಸಾಧನೆಗಳಿವು

ನೈಸರ್ಗಿಕ ವಜ್ರದಿಂದ ಮಾಡಿದ ಬ್ಯಾಟ್

ಈ ಬ್ಯಾಟ್ ಅನ್ನು ಕೊಹ್ಲಿಗೆ ಉಡುಗೊರೆಯಾಗಿ ನೀಡಲು ಬಯಸಿರುವ ಸೂರತ್ ಮೂಲದ ಉದ್ಯಮಿಯು ನೈಸರ್ಗಿಕ ವಜ್ರದಿಂದ ಮಾಡಿದ ಬ್ಯಾಟ್ ಅನ್ನು ನೀಡಲು ಬಯಸಿದ್ದಾರೆ ಎಂದು ಉತ್ಪಲ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೊಹ್ಲಿಗೆ ಉಡುಗೊರೆ ನೀಡಲು ಬಯಸಿರುವ ಸೂರತ್ ಮೂಲದ ಉದ್ಯಮಿ, ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ಅವರನ್ನು ಸೋಶೀಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಏಷ್ಯಾ ಕಪ್-ವಿಶ್ವಕಪ್ ಮೇಲೆ ಗಮನ

ಸದ್ಯ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ, ಕೊಹ್ಲಿ ಈಗ ಆಗಸ್ಟ್ 30 ರಂದು ಪ್ರಾರಂಭವಾಗುವ ಏಷ್ಯಾಕಪ್‌ನಲ್ಲಿ ನೇರವಾಗಿ ಕಾಣಿಸಿಕೊಳ್ಳಲಿದ್ದಾರೆ. ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾದ ಸಿದ್ಧತೆಯನ್ನು ಪರೀಕ್ಷಿಸಲಿರುವ ಈ ಟೂರ್ನಿ ಕೊಹ್ಲಿ ಹಾಗೂ ಟೀಂ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿಯ ಏಷ್ಯಾಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಬೇಕಿದೆ. ಈ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದೆ. ಇದಾದ ಬಳಿಕ ವಿಶ್ವಕಪ್ ಭಾರತದಲ್ಲಿ ಆರಂಭವಾಗಲಿದ್ದು, ಅಲ್ಲು ಸಹ ಅಕ್ಟೋಬರ್ 14 ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:42 am, Sat, 19 August 23