IND vs IRE: ಮತ್ತೊಂದು ಇಂಜುರಿಯಿಂದ ಸ್ಪಲ್ಪದರಲ್ಲೇ ಪಾರಾದ ಜಸ್ಪ್ರೀತ್ ಬುಮ್ರಾ; ವಿಡಿಯೋ ನೋಡಿ

IND vs IRE: ಇಂಜುರಿಯಿಂದಾಗಿ ವರ್ಷದಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಬುಮ್ರಾ ಮತ್ತೊಮ್ಮೆ ಇಂಜುರಿಗೆ ತುತ್ತಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಒಂದು ವೇಳೆ ಬುಮ್ರಾ ಈ ಪಂದ್ಯದಲ್ಲಿ ಮತ್ತೆ ಇಂಜುರಿಗೆ ತುತ್ತಾಗಿದ್ದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು.

IND vs IRE: ಮತ್ತೊಂದು ಇಂಜುರಿಯಿಂದ ಸ್ಪಲ್ಪದರಲ್ಲೇ ಪಾರಾದ ಜಸ್ಪ್ರೀತ್ ಬುಮ್ರಾ; ವಿಡಿಯೋ ನೋಡಿ
ಜಸ್ಪ್ರೀತ್ ಬುಮ್ರಾ, ರವಿ ಬಿಷ್ಣೋಯ್
Follow us
ಪೃಥ್ವಿಶಂಕರ
|

Updated on: Aug 19, 2023 | 10:34 AM

ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಬರೋಬ್ಬರಿ 11 ತಿಂಗಳ ನಂತರ ಮತ್ತೆ ಕ್ರಿಕೆಟ್​ಗೆ ಮರಳಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ (India vs Ireland) ನಾಯಕತ್ವವಹಿಸಿರುವ ಬುಮ್ರಾ, ತಮ್ಮ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಗೆಲುವಿನ ಶುಭಾರಂಭ ನೀಡಿದ್ದಾರೆ. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದಡಿ ಐರ್ಲೆಂಡ್ ವಿರುದ್ಧ 2 ರನ್​ಗಳ ಜಯ ಸಾಧಿಸಿದೆ. ಆದರೆ ಪಂದ್ಯದ ವೇಳೆ ನಡೆದ ಘಟನೆಯೊಂದು ಟೀಂ ಇಂಡಿಯಾ (Team India) ಅಭಿಮಾನಿಗಳನ್ನು ಕೊಂಚ ಕಾಲ ಆತಂಕಕ್ಕೀಡು ಮಾಡಿತ್ತು. ವಾಸ್ತವವಾಗಿ ಇಂಜುರಿಯಿಂದಾಗಿ ವರ್ಷದಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಬುಮ್ರಾ ಮತ್ತೊಮ್ಮೆ ಇಂಜುರಿಗೆ ತುತ್ತಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಒಂದು ವೇಳೆ ಬುಮ್ರಾ ಈ ಪಂದ್ಯದಲ್ಲಿ ಮತ್ತೆ ಇಂಜುರಿಗೆ ತುತ್ತಾಗಿದ್ದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು.

14ನೇ ಓವರ್​ನಲ್ಲಿ ನಡೆದ ಘಟನೆ

ವಾಸ್ತವವಾಗಿ ಈ ಘಟನೆ ನಡೆದಿದ್ದು ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ. ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ 14ನೇ ಓವರ್ ಬೌಲ್ ಮಾಡುವ ಜವಬ್ದಾರಿ ಹೊತ್ತಿದ್ದರು. ಓವರ್‌ನ 5ನೇ ಎಸೆತವನ್ನು ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪ್‌ಫರ್ ಬೌಂಡರಿ ಕಡೆ ಆಡಿದರು. ಈ ವೇಳೆ ರವಿ ಬಿಷ್ಣೋಯ್ ಮತ್ತು ಜಸ್ಪ್ರೀತ್ ಬುಮ್ರಾ ಇಬ್ಬರೂ ಚೆಂಡನ್ನು ಬೌಂಡರಿ ಗೆರೆ ದಾಟದಂತೆ ತಡೆಯಲು ಪ್ರಯತ್ನಿಸಿದರು. ರವಿ ಬಿಷ್ಣೋಯ್ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಿಂದ ಓಡಿ ಬಂದು ಚೆಂಡನ್ನು ತಡೆಯಲು ಸ್ಲಿಪ್ ಮಾಡಿದರು.

IND vs IRE: ನಾಯಕನಾಗಿ ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ..!

ಅನಾಹುತದಿಂದ ಇಬ್ಬರೂ ಪಾರು

ಇನ್ನೊಂದು ಬದಿಯಲ್ಲಿ ಬುಮ್ರಾ ಕೂಡ ಚೆಂಡನ್ನು ಹಿಡಿಯಲು ಓಡಿ ಬಂದರು. ಈ ಹಂತದಲ್ಲಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳುವ ಸಂದರ್ಭ ಎದುರಾಯಿತು. ಆದರೆ ಕೂಡಲೇ ಎಚ್ಚೆತ್ತುಕೊಂಡ ಬುಮ್ರಾ, ಸಮಯಕ್ಕೆ ಸರಿಯಾಗಿ ಜಂಪ್ ಮಾಡಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದರು. ಒಂದು ವೇಳೆ ಬುಮ್ರಾ ಜಿಗಿಯದೇ ಇದ್ದಿದ್ದರೆ ಬಿಷ್ಣೋಯ್‌ ಹಾಗೂ ಬುಮ್ರಾಗೆ ಖಂಡಿತ ಗಂಭೀರ ಗಾಯವಾಗುತ್ತಿತ್ತು. ಆದರೆ ಬುಮ್ರಾರ ಸಮಯ ಪ್ರಜ್ಞಯಿಂದ ಅದೃಷ್ಟವಶಾತ್ ಅಂಥದ್ದೇನೂ ಆಗಲಿಲ್ಲ.

ಇನ್ನುಈ ಪಂದ್ಯದ ಬಗ್ಗೆ ಹೇಳಬೇಕೆಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಟೀಂ ಇಂಡಿಯಾ ಗೆಲುವಿಗೆ 140 ರನ್‌ಗಳ ಸವಾಲನ್ನು ನೀಡಿತ್ತು. ಟೀಂ ಇಂಡಿಯಾ 6.5 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಮಳೆ ಬರುವ ವೇಳೆಗೆ 2 ರನ್ ಮುನ್ನಡೆ ಕಾಯ್ದುಕೊಂಡಿದ್ದ ಭಾರತಕ್ಕೆ ಸುಲಭ ಜಯ ದೊರಕಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ